ಐಸಿಸ್ ಮೇಲೆ ಹಿಡಿತ ಸಾಧಿಸುವಂತೆ ತಾಲಿಬಾನ್ ಗೆ ಅಮೆರಿಕ ಅಧ್ಯಕ್ಷ ಬೈಡನ್ ಕೋರಿಕೆ: ತ್ವರಿತ ಸ್ಥಳಾಂತರಕ್ಕೆ ಯುಎಸ್, ಯುಕೆ ಮುಂದು

ತಾಲಿಬಾನ್ ಹಿತದೃಷ್ಟಿಯಿಂದ ಐಸಿಸ್-ಕೆ ಉಗ್ರಗಾಮಿ ಸಂಘಟನೆ ಹೊಂದಾಣಿಕೆ ಮಾಡಿಕೊಂಡು ಸಂಚು ರೂಪಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ.
ಜೊ ಬೈಡನ್
ಜೊ ಬೈಡನ್

ವಾಷಿಂಗ್ಟನ್: ತಾಲಿಬಾನ್ ಹಿತದೃಷ್ಟಿಯಿಂದ ಐಸಿಸ್-ಕೆ ಉಗ್ರಗಾಮಿ ಸಂಘಟನೆ ಹೊಂದಾಣಿಕೆ ಮಾಡಿಕೊಂಡು ಸಂಚು ರೂಪಿಸಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಹೇಳಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣ ಬಳಿ ಕಳೆದ ರಾತ್ರಿ ಸಂಭವಿಸಿದ ಆತ್ಮಾಹುತಿ ದಾಳಿಯಲ್ಲಿ 13 ಮಂದಿ ಅಮೆರಿಕ ಸೈನಿಕರು ಹುತಾತ್ಮರಾಗಿದ್ದು 18 ಮಂದಿ ಗಾಯಗೊಂಡಿದ್ದಾರೆ. ಕನಿಷ್ಠ 60 ಆಫ್ಘನ್ ಪ್ರಜೆಗಳು ಮೃತಪಟ್ಟಿದ್ದಾರೆ. ಅಮೆರಿಕ ಸೈನಿಕರನ್ನು ಗುರಿಯಾಗಿಸಿಕೊಂಡು ಐಸಿಸ್ ಉಗ್ರರು ದಾಳಿ ನಡೆಸಿದ್ದಾರೆ.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಸ್ಥಳೀಯ ಶಾಖೆ ಐಸಿಸ್-ಕೆ ನಿನ್ನೆ ನಡೆದ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ತಾಲಿಬಾನ್ ಹಿತಾಸಕ್ತಿಗೆ ಅದರ ವ್ಯಾಪ್ತಿ ಮೀರಿ ಹೋಗಲು ಐಸಿಸ್-ಕೆಗೆ ಹೋಗಲು ಸಾಧ್ಯವಿಲ್ಲ ಎಂದು ನಿನ್ನೆ ದಾಳಿ ಬಳಿಕ ಅಮೆರಿಕದ ಶ್ವೇತಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡುವಾಗ ಹೇಳಿದ್ದಾರೆ.

ತಾಲಿಬಾನ್ ಮತ್ತು ಐಸಿಸ್-ಕೆ ಮಧ್ಯೆ ಇರುವ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಗ್ಗೆ ಸುದ್ದಿಗಾರರ ಜೊತೆ ಸಂವಾದ ನಡೆಸುವ ವೇಳೆ ಪ್ರಸ್ತಾಪಿಸಿದ ಅಧ್ಯಕ್ಷ ಬೈಡನ್, ವಿಮಾನ ನಿಲ್ದಾಣ ಬಳಿ ನಡೆದ ಆತ್ಮಾಹುತಿ ದಾಳಿಯಲ್ಲಿ ತಾಲಿಬಾನ್ ಮತ್ತು ಐಸಿಸ್ ಮಧ್ಯೆ ಒಳಸಂಚು ನಡೆದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದಾರೆ.

ಇಬ್ಬರು ಆತ್ಮಾಹುತಿ ಬಾಂಬ್ ದಾಳಿಕೋರರು ನಿನ್ನೆ ಕಾಬೂಲ್ ನ ಜನನಿಬಿಡ ಪ್ರದೇಶಕ್ಕೆ ಬಂದು ಸ್ಫೋಟಿಸಿದ್ದು ಇದರಲ್ಲಿ 13 ಅಮೆರಿಕಾದ ಸೈನಿಕರು ಹುತಾತ್ಮಗೊಂಡು 60 ಆಫ್ಘನ್ ಪ್ರಜೆಗಳು ಮೃತ್ಯುವಾಗಿದ್ದಾರೆ.

ತಾಲಿಬಾನಿಯರನ್ನು ಯಾರೂ ನಂಬುತ್ತಿಲ್ಲ. ಅವರ ಸ್ವಹಿತಾಸಕ್ತಿ ಪ್ರಕಾರ ಕೆಲಸ ಮಾಡುತ್ತಿದ್ದು ಅದರ ಬಗ್ಗೆ ಯೋಚಿಸುತ್ತಿದ್ದೇವೆ. ಅವರ ಸ್ವಾರ್ಥದಿಂದ ನಮ್ಮ ಸೈನಿಕರು ವಾಪಸ್ ಬಂದಿದ್ದು ಸಾಧ್ಯವಾದಷ್ಟು ಸೈನಿಕರು ವಾಪಸ್ ಕರೆಸಿಕೊಂಡಿದ್ದೇವೆ ಎಂದಿದ್ದಾರೆ.

ತಾಲಿಬಾನೀಯರು ಒಳ್ಳೆಯ ವ್ಯಕ್ತಿಗಳಲ್ಲ, ಆದರೆ ಅವರಿಗೆ ತೀವ್ರ ಆಸಕ್ತಿಯಿದೆ. ವಿಮಾನ ನಿಲ್ದಾಣವನ್ನು ಹೇಗೆ ಮುಕ್ತವಾಗಿಡಬೇಕು, ಅವುಗಳ ಸಾಮರ್ಥ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಉತ್ಸಾಹವಿದೆ. ನಿರ್ವಹಿಸಲು ಸಾಧ್ಯವೇ ಎಂದು ನೋಡುತ್ತಿದ್ದಾರೆ. ದೇಶದ ಆರ್ಥಿಕತೆ ಮೇಲೆ ಹಿಡಿತ ಸಾಧಿಸಲು ನೋಡುತ್ತಿದ್ದಾರೆ ಎಂದರು. 

ತಾಲಿಬಾನ್ ಕಳೆದ ಒಂದು ವರ್ಷದಲ್ಲಿ ಯುಎಸ್ ಸೈನಿಕರ ಮೇಲೆ ದಾಳಿ ಮಾಡದಿರಲು ಕಾರಣ ಹಿಂದಿನ ಟ್ರಂಪ್ ಆಡಳಿತದೊಂದಿಗೆ ಅವರು ಹೊಂದಿದ್ದ ಒಪ್ಪಂದವಾಗಿತ್ತು.ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೇ 1 ರ ವೇಳೆಗೆ ಅಫ್ಘಾನಿಸ್ತಾನದಿಂದ ಎಲ್ಲಾ ಅಮೆರಿಕನ್ ಪಡೆಗಳನ್ನು ಹೊರಹಾಕುವುದಾಗಿ ತಾಲಿಬಾನ್ ಜೊತೆ ಒಪ್ಪಂದ ಮಾಡಿಕೊಂಡರು. ಪ್ರತಿಯಾಗಿ, ತಾಲಿಬಾನ್ ಇತರರ ಮೇಲೆ ದಾಳಿ ಮಾಡುವುದನ್ನು ಮುಂದುವರಿಸುವುದಾಗಿ ಬದ್ಧತೆಯನ್ನು ನೀಡಲಾಯಿತು ಆದರೆ ಯಾವುದೇ ಅಮೆರಿಕನ್ನರ ಮೇಲೆ ದಾಳಿ ಮಾಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಸ್ಥಳಾಂತರ ಮುಂದುವರಿಕೆ: ಅಫ್ಘಾನಿಸ್ತಾನದಲ್ಲಿನ ಭಾರೀ ಅಪಾಯದ ಪರಿಸ್ಥಿತಿ ಹೊರತಾಗಿಯೂ ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲು ಸಾಧ್ಯವಾಯಿತು. ಸ್ಥಳಾಂತರದ ನಮ್ಮ ಧ್ಯೇಯವನ್ನು ಮುಂದುವರಿಸುತ್ತೇವೆ ಎಂದು ಜೊ ಬೈಡನ್ ಹೇಳಿದ್ದಾರೆ.

ತಮ್ಮ ಪ್ರಾಣವನ್ನು ಅರ್ಪಿಸಿದ ಅಮೆರಿಕಾದ ಸೇನಾ ಸದಸ್ಯರು ವೀರರು. ಇತರರ ಜೀವಗಳನ್ನು ಉಳಿಸಲು ಅಪಾಯಕಾರಿ, ನಿಸ್ವಾರ್ಥ ಕಾರ್ಯಾಚರಣೆಯಲ್ಲಿ ತೊಡಗಿರುವ ವೀರರು. ನಾವು ಅವರ ಕುಟುಂಬಗಳಿಗೆ ನಿರಂತರ ಬಾಧ್ಯತೆಯನ್ನು ಕೃತಜ್ಞತೆಯನ್ನು ಹೊಂದಿದ್ದೇವೆ ಎಂದಿದ್ದಾರೆ.

ಅರ್ಧಕ್ಕೆ ಬಾವುಟ: ಅಫ್ಘಾನಿಸ್ತಾನದ ಕಾಬುಲ್ ನಲ್ಲಿ ನಿನ್ನೆ ಆತ್ಮಹತ್ಯಾ ದಾಳಿಯಲ್ಲಿ 13 ಮಂದಿ ಅಮೆರಿಕ ಸೈನಿಕರು ಹುತಾತ್ಮರಾದ ಹಿನ್ನೆಲೆಯಲ್ಲಿ ಗೌರವಾರ್ಥ ಅಮೆರಿಕದಲ್ಲಿ ಇದೇ 30ರವರೆಗೆ ಬಾವುಟ ಅರ್ಧಕ್ಕೆ ಇಳಿಸಿ ಹಾರಾಟ ನಡೆಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com