ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರು ಬರೆದು ಇಸಿಸ್-ಕೆ ಉಗ್ರರ ವಿರುದ್ಧ ಸೇಡು ತೀರಿಸಿಕೊಂಡ ಅಮೆರಿಕ ಸೇನೆ

ಇಸಿಸ್ ಕೆ ಉಗ್ರರ ವಿರುದ್ಧ ಡ್ರೋನ್ ದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದ ಅಮೆರಿಕ ಸೇನೆ, ದಾಳಿಗೂ ಮುನ್ನ ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರುಗಳನ್ನು ಬರೆದಿತ್ತು ಎಂದು ತಿಳಿದು ಬಂದಿದೆ.
ಡ್ರೋನ್ ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರು
ಡ್ರೋನ್ ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರು

ಕಾಬೂಲ್: ಇಸಿಸ್ ಕೆ ಉಗ್ರರ ವಿರುದ್ಧ ಡ್ರೋನ್ ದಾಳಿ ನಡೆಸಿ ಸೇಡು ತೀರಿಸಿಕೊಂಡಿದ್ದ ಅಮೆರಿಕ ಸೇನೆ, ದಾಳಿಗೂ ಮುನ್ನ ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರುಗಳನ್ನು ಬರೆದಿತ್ತು ಎಂದು ತಿಳಿದು ಬಂದಿದೆ.

ಆಫ್ಗಾನಿಸ್ತಾನವನ್ನು ತಾಲಿಬಾನ್ ಪಡೆಗಳು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕ ಸೇನೆ ಆ ದೇಶದಲ್ಲಿರುವ ತನ್ನ ಪ್ರಜೆಗಳಿಗಾಗಿ ಏರ್ ಲಿಫ್ಟ್ ಕಾರ್ಯಾಚರಣೆ ನಡೆಸುತ್ತಿದ್ದು, ಇದರ ಬೆನ್ನಲ್ಲೇ ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ಇಸಿಸ್-ಕೆ ಉಗ್ರರು ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 13 ಮಂದಿ ಅಮೆರಿಕ ಸೈನಿಕರು ಸೇರಿದಂತೆ 170 ಮಂದಿ ಸಾವನ್ನಪ್ಪಿದ್ದರು. 

ಈ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆ ಕೂಡ ಇಸ್ಲಾಮಿಕ್ ಸ್ಟೇಟ್ ಅಡಗುದಾಣಗಳ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಈ ವೇಳೆ ಇಸಿಸ್ ನ ಇಬ್ಬರು ಪ್ರಮುಖ ಕಮಾಂಡರ್ ಗಳು ಸಾವನ್ನಪ್ಪಿದ್ದರು. ಇವರೇ ಆತ್ಮಾಹುತಿ ದಾಳಿಯ ರೂವಾರಿಗಳು ಎಂದು ಅಮೆರಿಕ ಹೇಳಿತ್ತು.

ಇನ್ನು ಈ ಘಟನೆ ನಡೆದ ಕೆಲವೇ ದಿನಗಳ ಅಂತರದಲ್ಲಿ ಇದೀಗ ಮತ್ತೊಂದು ಮಹತ್ವದ ವಿಚಾರ ಬಹಿರಂಗಗೊಂಡಿದೆ. ಅದೇನೆಂದರೆ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಬಳಸಲಾಗಿದ್ದ ಕ್ಷಿಪಣಿ ಮೇಲೆ ಹುತಾತ್ಮ ಯೋಧರ ಹೆಸರು ಬರೆದು ಸೇಡು ತೀರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹುತಾತ್ಮ ಯೋಧರ ಹೆಸರು ಬರೆದ ಕ್ಷಿಪಣಿಯನ್ನೇ ಉಗ್ರರ ಅಡಗುದಾಣಗಳ ಮೇಲೆ ಸ್ಫೋಟಿಸಲಾಗಿತ್ತು. ಆ ಮೂಲಕ ಅಮೆರಿಕ ತನ್ನ ಸೈನಿಕರ ಸಾವಿನ ಸೇಡು ತೀರಿಸಿಕೊಂಡಿದೆ.

ಈ ದಾಳಿ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್, ಹುತಾತ್ಮ ಸೈನಿಕರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com