ತಾಲಿಬಾನ್ ಎಫೆಕ್ಟ್: ಆಫ್ಘಾನಿಸ್ತಾನದ ಎಲ್ಲ ಖಾಸಗಿ ಬ್ಯಾಂಕ್ ಗಳೂ ದಿವಾಳಿ!

ತಾಲಿಬಾನ್ ಆಡಳಿತದ ಆರಂಭವಾದ ಕೆಲವೇ ತಿಂಗಳುಗಳ ಅಂತರದಲ್ಲಿ ಆಫ್ಘಾನಿಸ್ತಾನದ ಎಲ್ಲ ಖಾಸಗಿ ಬ್ಯಾಂಕ್ ಗಳು ದಿವಾಳಿಯಾಗಿದೆ ಎನ್ನಲಾಗಿದೆ.
ಆಫ್ಘಾನಿಸ್ತಾನ ಖಾಸಗಿ ಬ್ಯಾಂಕ್ ಗಳು ದಿವಾಳಿ
ಆಫ್ಘಾನಿಸ್ತಾನ ಖಾಸಗಿ ಬ್ಯಾಂಕ್ ಗಳು ದಿವಾಳಿ

ಕಾಬೂಲ್: ತಾಲಿಬಾನ್ ಆಡಳಿತದ ಆರಂಭವಾದ ಕೆಲವೇ ತಿಂಗಳುಗಳ ಅಂತರದಲ್ಲಿ ಆಫ್ಘಾನಿಸ್ತಾನದ ಎಲ್ಲ ಖಾಸಗಿ ಬ್ಯಾಂಕ್ ಗಳು ದಿವಾಳಿಯಾಗಿದೆ ಎನ್ನಲಾಗಿದೆ

ಈ ಬಗ್ಗೆ ಸ್ವತಃ ಆಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ಮಾಹಿತಿ ನೀಡಿದ್ದು, ಆಫ್ಘಾನಿಸ್ತಾನದಲ್ಲಿರುವ ಎಲ್ಲ ಖಾಸಗಿ ಬ್ಯಾಂಕ್ ಗಳು ದಿವಾಳಿಯಾಗಿವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ದೇಶದ ಎಲ್ಲಾ ಖಾಸಗಿ ಬ್ಯಾಂಕ್‌ಗಳು ಈಗ ದಿವಾಳಿಯಾಗಿವೆ. AIB ಅನ್ನು ಹೊರತುಪಡಿಸಿ ಎಲ್ಲ ಬ್ಯಾಂಕ್ ಗಳು ದಿವಾಳಿಯಾಗಿದ್ದು, ಮಾನವೀಯ ನಿಧಿಗಳ ವರ್ಗಾವಣೆಗೆ ಈ ಹಣವನ್ನು ಬಳಸಬಹುದು ಎಂದು ಹೇಳಿದ್ದಾರೆ. 

ಅಂತೆಯೇ ಈ ಹಿಂದೆ ತಾಲಿಬಾನ್ ನ 'ತಾಲಿಬ್ ಜುಂಟಾ' ಮೌನವಾಗಿ ಎಲ್ಲಾ ಖಾಸಗಿ ಬ್ಯಾಂಕ್‌ಗಳ ಮೇಲೆ ಹಿಡಿತ ಸಾಧಿಸಿತ್ತು. ಬಳಿಕ ಆ ಖಾಸಗಿ ಬ್ಯಾಂಕ್ ಗಳ ಮಾಲೀಕರು ಮತ್ತು CEO ಗಳು ಅಪಹರಣಕ್ಕೀಡಾಗಿ, ಚಿತ್ರಹಿಂಸೆಗೆ ಹೆದರಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ವಿರುದ್ಧವೂ ಹರಿಹಾಯ್ದಿರುವ ಸಲೇಹ್, ಪಾಕಿಸ್ತಾನ ತನ್ನ ತದ್ರೂಪು ಆಡಳಿತ ಸಹವರ್ತಿಗೆ ಹಣವನ್ನು ಚುಚ್ಚಬೇಕು ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com