ಒಂದೇ ವಿಡಿಯೊ ಕಾಲ್ ಮೂಲಕ 900 ಉದ್ಯೋಗಿಗಳನ್ನು ಕಿತ್ತುಹಾಕಿದ್ದ ಭಾರತೀಯ ಮೂಲದ ಸಿಇಒ ಕ್ಷಮೆಯಾಚನೆ

3 ನಿಮಿಷ ಅವಧಿಯ ಜೂಂ ಕಾಲ್ ವಿಡಿಯೊ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಸಿಇಒ ಗಾರ್ಗ್ ಅವರಿಗೆ ಕೊಂಚವೂ ಮಾನವೀಯತೆಯೇ ಇಲ್ಲ ಎನ್ನುವ ಆರೋಪವನ್ನು ಅಸಂಖ್ಯ ಮಂದಿ ಮಾಡಿದ್ದರು. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ. ಅಮೆರಿಕದ ಬೆಟರ್.ಕಾಂ ಸಂಸ್ಥೆಯ ಸಿಇಒ, ಭಾರತೀಯ ಮೂಲದ ಗಾರ್ಗ್ ಕಡೆಗೂ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ. 900 ಮಂದಿ ಸಂಸ್ಥೆಯ ಉದ್ಯೋಗಿಗಳನ್ನು 3 ನಿಮಿಷ ಅವಧಿಯ ಜೂಮ್ ಕಾಲ್ ಮೂಲಕ ಕಿತ್ತು ಹಾಕಿದ್ದರು.

<strong>ಸಿಇಒ ಗಾರ್ಗ್</strong>
ಸಿಇಒ ಗಾರ್ಗ್

ಈ ಜೂಂ ಕಾಲ್ ವಿಡಿಯೊ ಜಗತ್ತಿನಾದ್ಯಂತ ವೈರಲ್ ಆಗಿತ್ತು. ಸಿಇಒ ಗಾರ್ಗ್ ಅವರಿಗೆ ಕೊಂಚವೂ ಮಾನವೀಯತೆಯೇ ಇಲ್ಲ ಎನ್ನುವ ಆರೋಪವನ್ನು ಅಸಂಖ್ಯ ಮಂದಿ ಮಾಡಿದ್ದರು. 

ಇದೀಗ ಗಾರ್ಗ್ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ. ಸಂಸ್ಥೆಯ ಏಳಿಗೆಗಾಗಿ ದುಡಿದ ಮಂದಿಯನ್ನು ತಾವು ಚೆನ್ನಾಗಿ ನಡೆಸಿಕೊಳ್ಳಬೇಕಿತ್ತು. ಕನಿಷ್ಟ ಪಕ್ಷ ಕೆಲಸದಿಂದ ತೆಗೆದುಹಾಕುವ ವೇಳೆ ಬೇರೆ ರೀತಿಯ ಮಾನವೀಯ ದಾರಿಯನ್ನು ಹಿಡಿಯಬಹುದಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com