ಸಿಗರೇಟ್ ಬ್ಯಾನ್ ಮಾಡಲು ನ್ಯೂಜಿಲೆಂಡ್ ಸಜ್ಜು! ಹೊಸ ಕಾನೂನಿನಲ್ಲಿರುವ ಅಂಶಗಳೇನು?

ನ್ಯೂಜಿಲೆಂಡ್ ಶೀಘ್ರದಲ್ಲೇ ಧೂಮಪಾನ ಮತ್ತು ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ವಿಶ್ವದ ಮೊದಲ ರಾಷ್ಟ್ರವಾಗಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಆಕ್ಲೆಂಡ್: ನ್ಯೂಜಿಲೆಂಡ್ ಶೀಘ್ರದಲ್ಲೇ ಧೂಮಪಾನ ಮತ್ತು ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ವಿಶ್ವದ ಮೊದಲ ರಾಷ್ಟ್ರವಾಗಲಿದೆ.

ಈ ಕುರಿತು ಅಲ್ಲಿನ ಆರೋಗ್ಯ ಸಚಿವೆ ಡಾ.ಆಯೇಶಾ ವೆರಾಲ್  ನೀಡಿರುವ ಹೇಳಿಕೆ ಪ್ರಕಾರ, ಧೂಮಪಾನ ಮತ್ತು ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ. ಮತ್ತು ಈ ನಿಟ್ಟಿನಲ್ಲಿ ಹೊಸ ಕಾನೂನನ್ನು ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಈ ಕಾನೂನನ್ನು ಮುಂದಿನ ವರ್ಷದ ಕೊನೆಯಲ್ಲಿ ಅಂದರೆ 2022ರಲ್ಲಿ ಜಾರಿಗೆ ತರಲಾಗುವುದು. ನ್ಯೂಜಿಲೆಂಡ್ ಸರ್ಕಾರ ಈ ನೂತನ ಕಾಯ್ದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿ ನಂತರ ಅದನ್ನು ಜಾರಿಗೆ ತರಲಿದ್ದೇವೆ ಅಂತಾ ತಿಳಿಸಿದರು.

ಹೊಸ ಕಾನೂನಿನಿಂದ ಏನಾಗಲಿದೆ?

ಈ ಕಾನೂನಿನಡಿ 2008ರ ನಂತರ ಜನಿಸಿದಂತಹ ಜನರು ಯಾವುದೇ ರೀತಿಯ ಧೂಮಪಾನ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಆರೋಗ್ಯ ಸಚಿವೆ ಡಾ ಆಯೇಷಾ ವೆರಾಲ್ ಪ್ರಕಾರ, “ನಮ್ಮ ಯುವಕರು ಎಂದಿಗೂ ಧೂಮಪಾನ ಮಾಡುವ ಚಟವನ್ನು ಅಂಟಿಸಿಕೊಳ್ಳಬಾರದು ಎಂದು ಸರ್ಕಾರ ಬಯಸುತ್ತದೆ. ಈ ವಿಷಯವು ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದ್ದು, ಗಂಭೀರವಾಗಿ ಪರಿಗಣಿಸಿದ್ದೇವೆ. ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾಗರಿಕರು ಸಹ ಸಹಕಾರ ನೀಡಲಿದ್ದಾರೆ” ಅಂತಾ ಭಾವಿಸಿರುವುದಾಗಿ ತಿಳಿಸಿದರು.

ನ್ಯೂಜಿಲೆಂಡ್‌ನ ವೈದ್ಯರ ಸಂಘವು ನ್ಯೂಜಿಲೆಂಡ್ ಸರ್ಕಾರದ ನಡೆಯನ್ನು ಸ್ವಾಗತಿಸಿದೆ. ಸರ್ಕಾರದ ನಿರ್ಧಾರ ಜಗತ್ತಿಗೆ ಹೊಸ ಬೆಳಕಾಗಲಿದೆ. ಜನರು ಧೂಮಪಾನ ತ್ಯಜಿಸುವುದು ಹಾಗೂ ಕಡಿಮೆ ಹಾನಿಕಾರಕ ಉತ್ಪನ್ನಗಳನ್ನು ಬಳಸುವುದನ್ನು ರೂಢಿ ಮಾಡಿಕೊಳ್ಳುವುದರಿಂದ ಯುವಕರು ಅದೇ ಹಾದಿಯಲ್ಲಿ ಸಾಗಲಿದ್ದಾರೆ ಅಂತಾ ಒಟೆಗೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನೆಟ್ ಹುಕ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ನ್ಯೂಜಿಲೆಂಡ್ ಸರ್ಕಾರದ ನಿರ್ಧಾರದಿಂದ ಅಲ್ಲಿನ ಜನರು ಸಂತಸ ವ್ಯಕ್ತಪಡಿಸಿದ್ದು, ಆರೋಗ್ಯದ ಮೇಲೆ ಸರ್ಕಾರ ವೆಚ್ಚ ಕಡಿಮೆಯಾಗಲಿದೆ ಅಂತಾ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಬ್ಲಾಕ್ ಮಾರ್ಕೆಟಿಂಗ್ ಅಪಾಯ ಸರ್ಕಾರದ ಈ ಕ್ರಮದಿಂದ ದೇಶದಲ್ಲಿ ತಂಬಾಕು, ಸಿಗರೇಟ್ ನ ಬ್ಲಾಕ್ ಮಾರ್ಕೆಟಿಂಗ್ ಹೆಚ್ಚಾಗುವ ಅಪಾಯವಿದೆ ಎಂಬುದು ಕೆಲವರ ಅಭಿಪ್ರಾಯ. ಆದರೆ, ಸರ್ಕಾರಕ್ಕೂ ಈ ಬಗ್ಗೆ ಅರಿವಿರುವುದರಿಂದ ಗಡಿ ಠಾಣೆಗಳ ಮೇಲೆ ಕಣ್ಗಾವಲು ಹೆಚ್ಚಿಸಲಾಗುವುದು ಎಂದು ಹೇಳಿದೆ.

ಸಿಗರೇಟ್ ಮಾರುಕಟ್ಟೆ ಕುರಿತು ಮಾತನಾಡಿರುವ ಅಲ್ಲಿನ ತಜ್ಞರೊಬ್ಬರು, “ಇದು ಕೇವಲ ಸಿದ್ಧಾಂತವಾಗಿದೆ ಅಷ್ಟೇ. ಆದರೆ, ಕಾಯ್ದೆ ಅಷ್ಟೊಂದು ಬಲವಾಗಿಲ್ಲ ಅಂದರೆ ಲಾಭ ಇಲ್ಲ. ಈ ಕಾಯ್ದೆಯಿಂದ ಅಪರಾಧ ಪ್ರಕರಣಗಳು ಹೆಚ್ಚಾಗಲಿವೆ. ಕೆಲವು ವರ್ಷಗಳಲ್ಲಿ ಇಲ್ಲಿ ಇ-ಸಿಗರೇಟ್ ಟ್ರೆಂಡ್ ಕೂಡ ಹೆಚ್ಚಾಗುವ ಸಂಭವ ಇದೆ” ಅಂತಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com