ಚೀನಾದ ಅತ್ಯಂತ ಹಿರಿಯ ವ್ಯಕ್ತಿ 135 ವಯಸ್ಸಿನ ಅಲಿಮಿಹನ್ ಸೇಯಿತಿ ನಿಧನ 

ಚೀನಾದ ಅತ್ಯಂತ ಹಿರಿಯ ವ್ಯಕ್ತಿ 135 ವರ್ಷದ ಅಲಿಮಿಹನ್ ಸೇಯಿತಿ ನಿಧನರಾಗಿದ್ದಾರೆ. ಷಿನ್ಜಿಯಾಂಗ್ ಉಯ್ಘರ್ ಅಟಾನಾಮಸ್ ಪ್ರಾಂತ್ಯದಲ್ಲಿ ಮೃತಪಟ್ಟಿದ್ದಾರೆ. 
ಚೀನಾದ ಹಿರಿಯ ವ್ಯಕ್ತಿ ಅಲಿಮಿಹನ್ ಸೇಯಿತಿ ನಿಧನ
ಚೀನಾದ ಹಿರಿಯ ವ್ಯಕ್ತಿ ಅಲಿಮಿಹನ್ ಸೇಯಿತಿ ನಿಧನ

ಬೀಜಿಂಗ್: ಚೀನಾದ ಅತ್ಯಂತ ಹಿರಿಯ ವ್ಯಕ್ತಿ 135 ವರ್ಷದ ಅಲಿಮಿಹನ್ ಸೇಯಿತಿ ನಿಧನರಾಗಿದ್ದಾರೆ. ಷಿನ್ಜಿಯಾಂಗ್ ಉಯ್ಘರ್ ಅಟಾನಾಮಸ್ ಪ್ರಾಂತ್ಯದಲ್ಲಿ ಮೃತಪಟ್ಟಿದ್ದಾರೆ. 

ಕಾಶ್ಗರ್ ಪ್ರಾಂತ್ಯದಲ್ಲಿ ಶೂಲೆ ಕೌಂಟಿಯ ಕೊಮುಕ್ಸೆರಿಕ್ ಟೌನ್ ಶಿಪ್ ಮೂಲದವರಾಗಿದ್ದ ಅಲಿಮಿಹನ್ ಸೇಯಿತಿ, 1886 ರ ಜೂನ್ 25 ರಂದು ಜನಿಸಿದ್ದರು ಎಂದು ಚೀನಾದ ಪ್ರಚಾರ ಇಲಾಖೆ ಹೇಳಿದೆ. 

2013 ರಲ್ಲಿ ಚೀನಾದಲ್ಲಿ ಚೀನಾ ಅಸೋಸಿಯೇಷನ್ ಆಫ್ ಜೆರೊಂಟಾಲಜಿ ಮತ್ತು ಜೆರಿಯಾಟ್ರಿಕ್ಸ್ ಪ್ರಕಟಿಸಿದ್ದ ಬದುಕಿರುವವರ ಅತ್ಯಂತ ಹಿರಿಯ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು ಅಲಿಮಿಹನ್ ಸೇಯಿತಿ. 

ಆಕೆ ಜೀವನದ ಕೊನೆಯ ಕ್ಷಣದವರೆಗೂ ಅತ್ಯಂತ ಸರಳ ಹಾಗೂ ನಿಯಮಿತ ದೈನಂದಿನ ಜೀವನ ನಡೆಸಿದ್ದರು. ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ, ವಾಸವಿದ್ದ ಪ್ರದೇಶದ ಪ್ರದೇಶದಲ್ಲಿ ಬಿಸಿಲಿಗೆ ಒಡ್ಡಿಕೊಳ್ಳುವುದು, ಮಕ್ಕಳನ್ನು ನೋಡಿಕೊಳ್ಳುವುದು ಮುಂತಾದದ್ದು ಆಕೆಯ ನಿತ್ಯದ ಜೀವನದ ಭಾಗವಾಗಿತ್ತು. ಚೀನಾದ ಕೊಮುಕ್ಸೆರಿಕ್ ಟೌನ್ ಶಿಪ್ ನಲ್ಲಿ ಹಲವಾರು ಮಂದಿ 90 ವರ್ಷಗಳಿಗೂ ಹೆಚ್ಚಿನ ವಸಂತಗಳನ್ನು ಕಂಡಿದ್ದು "ಲಾಂಜಿವಿಟಿ ಟೌನ್" ಎಂದೇ ಖ್ಯಾತಿ ಪಡೆದಿದೆ

ಆರೋಗ್ಯ ಸೇವೆಗಳ ಸುಧಾರಣೆ ಇಲ್ಲಿನ ಜನರ ದೀರ್ಘಾಯುಷ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಸ್ಥಳೀಯ ಸರ್ಕಾರ ಗುತ್ತಿಗೆ ಆಧಾರಿತ ವೈದ್ಯರ ಸೇವೆ, ಉಚಿತ ವಾರ್ಷಿಕ ದೈಹಿಕ ತಪಾಸಣೆ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸಬ್ಸಿಡಿಗಳನ್ನು ನೀಡಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com