ಪಾಕಿಸ್ತಾನದಲ್ಲಿ 2300 ವರ್ಷಗಳಷ್ಟು ಹಳೇಯ ಬುದ್ಧನ ದೇವಾಲಯ ಪತ್ತೆ

ಪಾಕಿಸ್ತಾನದಲ್ಲಿ ಉತ್ಖನನ ಸಂದರ್ಭದಲ್ಲಿ 2300 ವರ್ಷಗಳಷ್ಟು ಹಳೆಯದಾದ ಬುದ್ಧನ ದೇವಾಲಯ ಹಾಗೂ ಉಂಗುರ ಮತ್ತು ನಾಣ್ಯದ ನಿಧಿ ಬೆಳಕಿಗೆ ಬಂದಿದೆ. ಇದು ಸ್ಥಳೀಯ ಜನರು ಅಚ್ಚರಿಗೊಳಗಾಗುವಂತೆ ಮಾಡಿದೆ.
ಬುದ್ಧನ ದೇವಾಲಯ ಪತ್ತೆ
ಬುದ್ಧನ ದೇವಾಲಯ ಪತ್ತೆ
Updated on

ಪಾಕಿಸ್ತಾನ: ಪಾಕಿಸ್ತಾನದಲ್ಲಿ ಉತ್ಖನನ ಸಂದರ್ಭದಲ್ಲಿ 2300 ವರ್ಷಗಳಷ್ಟು ಹಳೆಯದಾದ ಬುದ್ಧನ ದೇವಾಲಯ ಹಾಗೂ ಉಂಗುರ ಮತ್ತು ನಾಣ್ಯದ ನಿಧಿ ಬೆಳಕಿಗೆ ಬಂದಿದೆ. ಇದು ಸ್ಥಳೀಯ ಜನರು ಅಚ್ಚರಿಗೊಳಗಾಗುವಂತೆ ಮಾಡಿದೆ.

ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯ ಬರಿಕೋಟೆ ತಹಸಿಲ್‌ನ ಬಾಜಿರಾ ಪಟ್ಟಣದಲ್ಲಿ ಈ ಬುದ್ಧ ದೇವಾಲಯವು ಕಂಡುಬಂದಿದೆ. ಈ ನಿಟ್ಟಿನಲ್ಲಿ, ಹಿರಿಯ ಅಧಿಕಾರಿಯೊಬ್ಬರು, “ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವಶಾಸ್ತ್ರಜ್ಞರು ವಾಯುವ್ಯ ಪಾಕಿಸ್ತಾನದ ಐತಿಹಾಸಿಕ ಸ್ಥಳದಲ್ಲಿ ಜಂಟಿ ಉತ್ಖನನದ ಸಮಯದಲ್ಲಿ 2300 ವರ್ಷಗಳಷ್ಟು ಹಳೆಯದಾದ ಬೌದ್ಧ ದೇವಾಲಯವನ್ನು ಕಂಡುಹಿಡಿದಿದ್ದಾರೆ.

ದೇವಾಲಯದ ಹೊರತಾಗಿ, ಪುರಾತತ್ತ್ವಜ್ಞರು ಕಂಡುಹಿಡಿದ 2,700 ಬೌದ್ಧ ಕಲಾಕೃತಿಗಳಲ್ಲಿ ನಾಣ್ಯಗಳು, ಉಂಗುರಗಳು, ಪಾತ್ರೆಗಳು ಮತ್ತು ಗ್ರೀಸ್‌ನ ರಾಜ ಮಿನಾಂದಾರ್‌ನ ಕಾಲದ ಖರೋಷ್ಠಿ ಭಾಷೆಯಲ್ಲಿ ಬರೆಯಲಾದ ವಸ್ತುಗಳು ಸೇರಿವೆ. ಸ್ವಾತ್ ಜಿಲ್ಲೆಯ ಐತಿಹಾಸಿಕ ನಗರವಾದ ಬಾಜಿರಾದಲ್ಲಿ ಉತ್ಖನನದ ಸಮಯದಲ್ಲಿ ಹೆಚ್ಚಿನ ಪುರಾತತ್ತ್ವ ಶಾಸ್ತ್ರದ ಸ್ಥಳಗಳನ್ನು ಕಾಣಬಹುದು ಎಂದು ಇಟಾಲಿಯನ್ ತಜ್ಞರ ಅಭಿಪ್ರಾಯ.

ಈ ಹಿಂದೆ 2020 ರಲ್ಲಿ ಇಲ್ಲಿ ವಿಷ್ಣು ದೇವಾಲಯದ ಅವಶೇಷಗಳು ಕಂಡುಬಂದಿದ್ದವು. ಪಾಕಿಸ್ತಾನದಲ್ಲಿ ಇಂತಹ ಪುರಾತನ ದೇವಾಲಯಗಳ ಅವಶೇಷಗಳು ಕಂಡುಬಂದಿರುವುದು ಇದೇ ಮೊದಲಲ್ಲವಾದರೂ, 2020 ರ ಆರಂಭದಲ್ಲಿ, ಪಾಕಿಸ್ತಾನದ ಸ್ವಾತ್ ಜಿಲ್ಲೆಯಲ್ಲಿ ಉತ್ಖನನದ ಸಮಯದಲ್ಲಿ, ಪುರಾತತ್ತ್ವಜ್ಞರು ವಿಷ್ಣು ದೇವಾಲಯದ ಅವಶೇಷಗಳನ್ನು ಕಂಡುಕೊಂಡರು.

ಈ ದೇವಾಲಯದ ಅವಶೇಷಗಳು ಕನಿಷ್ಠ 1,000 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವಿದೆ ಎಂದು ತೋರಿಸಿದೆ. ಅದನ್ನು  ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವಶಾಸ್ತ್ರಜ್ಞರ ಜಂಟಿ ತಂಡವು ಕಂಡುಹಿಡಿದಿತ್ತು. ಈ ದೇವಾಲಯದ ಅವಶೇಷಗಳನ್ನು ಬಾರಿಕೋಟ್ ಘುಂಡೈ ಬೆಟ್ಟಗಳ ನಡುವೆ ಉತ್ಖನನ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com