ಅಮೆರಿಕ ಮತ್ತು ಚೀನಾ ನಡುವಿನ ಸೇತುವಾಗಲು ಪಾಕ್ ಬಯಸುತ್ತದೆ: ಪ್ರಧಾನಿ ಇಮ್ರಾನ್ ಖಾನ್

ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳ ವೈರತ್ವದ ಮಧ್ಯೆ ಸಿಲುಕಿಕೊಂಡು ಚಿಕ್ಕಪುಟ್ಟ ರಾಷ್ಟ್ರಗಳು ನಲುಗಿರುವ ಉದಾಹರಣೆಗಳಿವೆ
ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್

ಇಸ್ಲಾಮಾಬಾದ್: ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟಿನಿಂದ ಶೀತಲ ಸಮರ ಶುರುವಾಗುವ ಬಗ್ಗೆ ಕೇಳಲಾದ ಪ್ರಶ್ನೆಗೆ ಕಿಡಿ ಕಾರಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ತಾನ ಯಾವುದೇ ಸಮರದ ಭಾಗವಾಗಲು ಇಷ್ಟಪಡುವುದಿಲ್ಲ. ಅಮೆರಿಕ ಮತ್ತು ಚೀನಾ ನಡುವೆ ಸಂಪರ್ಕ ಸೇತುವಾಗಲು ಪಾಕ್ ಬಯಸುತ್ತದೆ ಎಂದು ಹೇಳಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಕುರಿತ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಜಗತ್ತಿನ ಸೂಪರ್ ಪವರ್ ರಾಷ್ಟ್ರಗಳ ವೈರತ್ವದ ಮಧ್ಯೆ ಸಿಲುಕಿಕೊಂಡು ಚಿಕ್ಕಪುಟ್ಟ ರಾಷ್ಟ್ರಗಳು ನಲುಗಿರುವ ಉದಾಹರಣೆಗಳಿವೆ ಎಂದು ಇತಿಹಾಸವನ್ನು ಉಲ್ಲೇಖಿಸಿದ ಇಮ್ರಾನ್ ಖಾನ್ ಪಾಕ್ ಅದನ್ನು ಬಯಸುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com