ಪಾಕಿಸ್ತಾನಕ್ಕೆ 22,572 ಕೋಟಿ ರೂ. ಸಾಲ ನೀಡಿದ ಸೌದಿ ಅರೇಬಿಯಾ: ಪಾಕ್ ಆರ್ಥಿಕ ಸುಸ್ಥಿರತೆಗೆ ಸಹಾಯ

ಒಂದು ತಿಂಗಳ ಹಿಂದೆಯಷ್ಟೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿಗೆ ಭೇಟಿ ನೀಡಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. 
ಸೌದಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್
ಸೌದಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್

ಕರಾಚಿ: ಆರ್ಥಿಕ ಮುಗ್ಗಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನಕ್ಕೆ ಹುಲ್ಲುಕಡ್ಡಿಯ ಆಶ್ರಯ ಸಿಕ್ಕಂತೆ ಮಿತ್ರರಾಷ್ಟ್ರ ಸೌದಿ ಅರೇಬಿಯಾದ ನೆರವು ಒದಗಿಬಂದಿದೆ. 

ಸೌದಿ ಅರೇಬಿಯಾ, ಪಾಕ್ ಗೆ 3 ಬಿಲಿಯನ್ ಡಾಲರ್ ಅಂದರೆ 22,572 ಕೋಟಿ ರೂ. ಸಾಲ ನೀಡಿದೆ. ಒಂದು ತಿಂಗಳ ಹಿಂದೆಯಷ್ಟೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೌದಿಗೆ ಭೇಟಿ ನೀಡಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. 

ಸೌದಿ ಭೇಟಿ ಸಂದರ್ಭ ಸಂದರ್ಭ ಪಾಕ್ ಗೆ ಆರ್ಥಿಕ ನೆರವು ನೀಡುವ ಬಗ್ಗೆ ಇಮ್ರಾನ್ ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಈ ಸಂದರ್ಭ 4.2 ಬಿಲಿಯನ್ ಡಾಲರ್ ನೆರವು ನೀಡಲು ಸೌದಿ ಸಮ್ಮತಿ ಸೂಚಿಸಿತ್ತು ಎನ್ನಲಾಗಿದೆ. ಅದರಲ್ಲಿ 3 ಬಿಲಿಯನ್ ಡಾಲರ್ ಹಣವನ್ನು ಸೌದಿ ಇದೀಗ ಪಾಕ್ ಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com