4 ತಿಂಗಳ ಬಳಿಕ ಟಿಕ್​ಟಾಕ್ ಮೇಲಿನ ನಿಷೇಧ ವಾಪಸ್​ ತೆಗೆದುಕೊಂಡ ಪಾಕ್

ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಬರೋಬ್ಬರಿ 4 ತಿಂಗಳ ಬಳಿಕ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಬರೋಬ್ಬರಿ 4 ತಿಂಗಳ ಬಳಿಕ ಟಿಕ್‌ಟಾಕ್ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.

ಕಳೆದ 15 ತಿಂಗಳಲ್ಲಿ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ನಾಲ್ಕನೇ ಬಾರಿಗೆ ಈ ನಿಷೇಧ ವಿಧಿಸಿದ್ದು, ಈಗ ತೆಗೆದು ಹಾಕಿದೆ. ಟಿಕ್​ಟಾಕ್​ ಆ್ಯಪ್‌ನಲ್ಲಿನ ಅನೈತಿಕ, ಅಶ್ಲೀಲ ಮತ್ತು ಅಸಭ್ಯ ವಿಷಯಗಳ ಕುರಿತು ವ್ಯಾಪಕವಾದ ದೂರುಗಳು ಬಂದ ಮೇಲೆ ಪಾಕಿಸ್ತಾನ ಸರ್ಕಾರವು ಅಕ್ಟೋಬರ್ 2020 ರಲ್ಲಿ ನಿರ್ಬಂಧಿಸಿತ್ತು.

ಕಾನೂನುಬಾಹಿರ ವಿಷಯವನ್ನು ಅಪ್‌ಲೋಡ್ ಮಾಡುವ ಬಳಕೆದಾರರನ್ನು ನಿರ್ಬಂಧಿಸುವುದಾಗಿ ಟಿಕ್‌ಟಾಕ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಟಿಕ್​ಟಾಕ್​ ಮೇಲಿನ ನಿಷೇದವನ್ನು ರದ್ದುಪಡಿಸಿದೆ ಎಂದು ತಿಳಿದುಬಂದಿದೆ.

ಚೀನಾದ ಬೈಟ್‌ಡ್ಯಾನ್ಸ್‌ನ ಒಡೆತನದ ಈ ಅಪ್ಲಿಕೇಶನ್, ಪಾಕಿಸ್ತಾನದಲ್ಲಿ ಸುಮಾರು 39 ಮಿಲಿಯನ್ ಡೌನ್‌ಲೋಡ್ ಆಗಿದೆ. ಚೀನಾದೊಂದಿಗೆ ನಿಕಟ ಸಂಬಂಧ ಹೊಂದಿರುವ ಪಾಕಿಸ್ತಾನ, ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು ಪರಿಣಾಮಕಾರಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲು ಟಿಕ್‌ಟಾಕ್ ಅನ್ನು ಒತ್ತಾಯಿಸಿತ್ತು. ಅಸಭ್ಯ ವಿಷಯಗಳ ಹರಡುವಿಕೆಯನ್ನು ನಿಯಂತ್ರಿಸುವುದಾಗಿ ಚೀನಾ ಆ್ಯಪ್​ ಭರವಸೆ ನೀಡಿದ ಮೇಲೆ ಟಿಕ್​ಟಾಕ್​ ಮೇಲಿನ ನಿಷೇಧ ಹಿಂಪಡೆಯಲಾಯಿತು.

ಪಾಕಿಸ್ತಾನವು ಕಂಟೆಂಟ್ ಬಗ್ಗೆ ಫೇಸ್‌ಬುಕ್ ಮತ್ತು ಟ್ವಿಟರ್‌ಗೆ ನೂರಾರು ದೂರುಗಳನ್ನು ರವಾನಿಸಿದೆ. ಇದು ಪಾಕಿಸ್ತಾನಿ ಕಾನೂನಿಗೆ ವಿರುದ್ಧವಾದ ಇಸ್ಲಾಂಗೆ ಆಕ್ರಮಣಕಾರಿ ಮತ್ತು ಸಂಭಾವ್ಯ ಅವಮಾನಕರವಾಗಿದೆ ಎಂದು ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com