ಮಾಹಿತಿ ಕದಿಯಲು ಭಾರತದ ಸರ್ಕಾರಿ ಕಂಪ್ಯೂಟರ್ ಗಳ ಮೇಲೆ ಪಾಕ್ ಹ್ಯಾಕರ್ ದಾಳಿ!

ಪಾಕಿಸ್ತಾನದ ಹ್ಯಾಕರ್ ಓರ್ವ ಭಾರತ, ಅಫ್ಘಾನಿಸ್ತಾನದ ಸಚಿವಾಲಯಗಳಲ್ಲಿನ ಕಂಪ್ಯೂಟರ್ ಗಳಿಗೆ ಕನ್ನಾ ಹಾಕಿ ಮಹತ್ವದ ಮಾಹಿತಿಗಳನ್ನು ಕದಿಯುತ್ತಿದ್ದ ಹಾಗೂ ಪ್ರಮುಖ ಸರ್ಕಾರಿ ಪೋರ್ಟಲ್ ಗಳಿಗೆ ಪ್ರವೇಶ ಪಡೆಯುತ್ತಿದ್ದ
ಹ್ಯಾಕರ್ಸ್
ಹ್ಯಾಕರ್ಸ್

ನವದೆಹಲಿ: ಪಾಕಿಸ್ತಾನದ ಹ್ಯಾಕರ್ ಓರ್ವ ಭಾರತ, ಅಫ್ಘಾನಿಸ್ತಾನದ ಸಚಿವಾಲಯಗಳಲ್ಲಿನ ಕಂಪ್ಯೂಟರ್ ಗಳಿಗೆ ಕನ್ನಾ ಹಾಕಿ ಮಹತ್ವದ ಮಾಹಿತಿಗಳನ್ನು ಕದಿಯುತ್ತಿದ್ದ ಹಾಗೂ ಪ್ರಮುಖ ಸರ್ಕಾರಿ ಪೋರ್ಟಲ್ ಗಳಿಗೆ ಪ್ರವೇಶ ಪಡೆಯುತ್ತಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ. 

ಭಾರತಕ್ಕೆ ಸಂಬಂಧಿಸಿದ ಗೂಗಲ್, ಟ್ವಿಟರ್, ಫೇಸ್ ಬುಕ್ ಗೆ ಸಂಬಂಧಿಸಿದ ಮಹತ್ವದ ಅಂಶಗಳನ್ನು ಪಾಕಿಸ್ತಾನದ ಈ ಹ್ಯಾಕರ್ ಕದಿಯುತ್ತಿದ್ದ ಎಂದು ಹ್ಯಾಕರ್ ನ್ಯೂಸ್ ವರದಿ ಪ್ರಕಟಿಸಿದೆ. 

ಎಪಿಟಿ ಗ್ರೂಪ್ ಅಳವಡಿಸಿಕೊಂಡಿರುವ ಸೈಡ್ ಕಾಪಿ ಎಂಬ ಟೂಲ್ ನ್ನು ಬಳಕೆ ಮಾಡಿಕೊಂಡು ಹೊಸ ತಂತ್ರಗಳನ್ನು ಬಳಕೆ ಮಾಡಿ ದಾರಿತಪ್ಪಿಸಿ ಮಾಹಿತಿಯನ್ನು ಕದಿಯಲಾಗುತ್ತದೆ ಎಂಬ ಅಂಶ ಈ ಘಟನೆಯಿಂದ ಬಹಿರಂಗಗೊಂಡಿದೆ.
 
ಎಲ್ ಎನ್ ಕೆ ಮೈಕ್ರೋ ಸಾಫ್ಟ್ ಪಬ್ಲಿಷರ್ ಅಥವಾ ಟ್ರೋಜನೀಕರಿಸಿದ ಅಪ್ಲಿಕೇಶನ್‌ಗಳೊಂದಿಗೆ ಈ ದಾರಿತಪ್ಪಿಸುವ ಟೂಲ್ ಗಳನ್ನು ಎಂಬೆಡ್ ಮಾಡಿ ಸರ್ಕಾರ, ಸೇನೆಯ ಅಧಿಕಾರಿಗಳನ್ನು ಭಾರತ, ಅಫ್ಘಾನಿಸ್ತಾನದಲ್ಲಿ ಟಾರ್ಗೆಟ್ ಮಾಡುವುದಕ್ಕೆ ಬಳಕೆ ಮಾಡಲಾಗುತ್ತದೆ ಎಂದು ವರದಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com