ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ದೇವಾಲಯದ ಪ್ರತಿಮೆಗಳ ಧ್ವಂಸ

ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದೂ ದೇವಾಲಯದಲ್ಲಿನ ದೇವತೆಗಳ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪಾಕ್ ಪೊಲೀಸ್ ಅಧಿಕಾರಿ
ಪಾಕ್ ಪೊಲೀಸ್ ಅಧಿಕಾರಿ

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದೂ ದೇವಾಲಯದಲ್ಲಿನ ದೇವತೆಗಳ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಸಂಜೆ ಕರಾಚಿಯ ಹಳೆಯ ನಗರವಾದ ನಾರಾಯಣಪುರದ ನಾರಾಯಣ ಮಂದಿರದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ದೇವತೆಗಳ ಪ್ರತಿಮೆಗಳನ್ನು ಹಾನಿಗೊಳಿಸಿದ ಆರೋಪದ ಮೇಲೆ ಮುಹಮ್ಮದ್ ವಾಲೀದ್ ಶಬ್ಬೀರ್ ಎಂಬ ವ್ಯಕ್ತಿಯನ್ನು  ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸರ್ಫರಾಜ್ ನವಾಜ್ ಅವರು ತಿಳಿಸಿದ್ದಾರೆ.

ಹಿಂದೂ ವ್ಯಕ್ತಿ ಮುಕೇಶ್ ಕುಮಾರ್ ಎಂಬುವವರ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಮುಕೇಶ್ ಕುಮಾರ್ ಅವರು ತಮ್ಮ ಪತ್ನಿಯೊಂದಿಗೆ ನಾರಾಯಣ ಮಂದಿರದಲ್ಲಿ ಪ್ರಾರ್ಥನೆಗಾಗಿ ಬಂದಿದ್ದರು, ಈ ವೇಳೆ ವ್ಯಕ್ತಿಯೊಬ್ಬ ಹಿಂದೂ ದೇವತೆಗಳ ಪ್ರತಿಮೆಗಳಿಗೆ ಸುತ್ತಿಗೆಯಿಂದ ಧ್ವಂಸಗೊಳಿಸುತ್ತಿರುವುದನ್ನು ನೋಡಿದರು" ಎಂದು ಅವರು ಹೇಳಿದ್ದಾರೆ.

ಆಕ್ರೋಶಗೊಂಡ ಹಿಂದೂಗಳು ದೇವಸ್ಥಾನದಲ್ಲಿದ್ದ ದುಷ್ಕರ್ಮಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ನಂತರ ಆ ಪ್ರದೇಶದ ಹಿಂದೂ ನಿವಾಸಿಗಳು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಹಿಂದೂಗಳಿಗೆ ಭದ್ರತೆ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಪ್ರದೇಶದಲ್ಲಿ ಹೆಚ್ಚಾಗಿ ಬಡ ಮತ್ತು ಕಡಿಮೆ ಆದಾಯದ ಹಿಂದೂ ಕುಟುಂಬಗಳು ವಾಸಿಸುತ್ತಿದ್ದು, ಅವರು ದಶಕಗಳಿಂದ ನಾರಾಯಣಪುರದ ವಾಸಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com