ಟೆಕ್ಸಾಸ್: ಜಗತ್ತಿನಾದ್ಯಂತ ಅತಿ ವೇಗದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ರೂಪಾಂತರಿ ತಳಿ ಓಮೈಕ್ರಾನ್‍ನಿಂದಾಗಿ ಅಮೆರಿಕದ ಟೆಕ್ಸಾಸ್‍ನ ಕೌಂಟಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಓಮೈಕ್ರಾನ್‍ನಿಂದಾಗಿ ಸಂಭವಿಸಿದ ಮೊದಲ ಸಾವು ಇದಾಗಿದೆ.
ಸಾವನ್ನಪ್ಪಿದ ವ್ಯಕ್ತಿಯು 50 ವರ್ಷ ವಯಸ್ಸಿನವರಾಗಿದ್ದು, ಕೋವಿಡ್ ಲಸಿಕೆ ಪಡೆದುಕೊಂಡಿರಲಿಲ್ಲ. ಇದು ಅಮೆರಿಕದಲ್ಲಿ ದಾಖಲಾದ ಮೊದಲ ಓಮೈಕ್ರಾನ್ ಸಾವು ಎಂದು ಕೌಂಟಿ ಆರೋಗ್ಯ ಇಲಾಖೆ ತಿಳಿಸಿದೆ.
ಈ ವ್ಯಕ್ತಿಯು ಕೋವಿಡ್ ಲಸಿಕೆ ಪಡೆದುಕೊಳ್ಳದೇ ಇರುವುದರಿಂದ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು ಮತ್ತು ಈ ಮುನ್ನ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು” ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚುತ್ತಿದೆ ಓಮೈಕ್ರಾನ್ ಪ್ರಕರಣಗಳು
ಕಳೆದ ವಾರದಲ್ಲಿ ಶೇ 73.2 ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನು ಪೆಸಿಫಿಕ್ ವಾಯುವ್ಯ ರಾಜ್ಯಗಳಾದ ಒರೆಗಾನ್, ವಾಷಿಂಗ್ಟನ್ ಮತ್ತು ಇಡಾಹೊಗಳಲ್ಲಿ, ಓಮಿಕ್ರಾನ್ ಶೇ. 96.3 ರಷ್ಟು ಹೊಸ ಪ್ರಕರಣಗಳು ಕಂಡು ಬಂದಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement