ನ್ಯೂಜಿಲೆಂಡ್‍ನ ಮೊದಲ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಕೆರಿ ಹುಲ್ಮ್ ನಿಧನ

ನ್ಯೂಜಿಲೆಂಡ್‍ನ ಮೊದಲ ಬೂಕರ್ ಪ್ರಶಸ್ತಿ ವಿಜೇತೆ, ಪ್ರಸಿದ್ಧ ಲೇಖಕಿ ಮತ್ತು ಕವಿಯತ್ರಿ ಕೆರಿ ಹುಲ್ಮ್ ಅವರು ಸೋಮವಾರ ನಿಧನರಾಗಿದ್ದಾರೆ.
ಕೆರಿ ಹುಲ್ಮ್ (ಬಲಗಡೆಯಿಂದ ಎರಡನೆಯವರು)
ಕೆರಿ ಹುಲ್ಮ್ (ಬಲಗಡೆಯಿಂದ ಎರಡನೆಯವರು)

ವೈಮೇಟ್: ನ್ಯೂಜಿಲೆಂಡ್‍ನ ಮೊದಲ ಬೂಕರ್ ಪ್ರಶಸ್ತಿ ವಿಜೇತೆ, ಪ್ರಸಿದ್ಧ ಲೇಖಕಿ ಮತ್ತು ಕವಿಯತ್ರಿ ಕೆರಿ ಹುಲ್ಮ್ ಅವರು ಸೋಮವಾರ ನಿಧನರಾಗಿದ್ದಾರೆ.

74 ವರ್ಷದ ಕೆರಿ ಹುಲ್ಮ್ ಅವರು ತಮ್ಮ ಮೊದಲ ಕಾದಂಬರಿ ‘ದಿ ಬೋನ್ ಪೀಪಲ್’ ಗಾಗಿ 1985ರಲ್ಲಿ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಬೂಕರ್ ಪ್ರಶಸ್ತಿಯನ್ನು ಗೆದ್ದ ಏಕೈಕ ಲೇಖಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು. ನ್ಯೂಜಿಲೆಂಡ್‍ನ ಸೌತ್ ಐಲ್ಯಾಂಡ್‍ನ ವೈಮೇಟ್‍ನಲ್ಲಿರುವ ತಮ್ಮ ನಿವಾಸದಲ್ಲಿ ಕೆರಿ ಹುಲ್ಮ್ ಅವರು ವಿಧವಶರಾಗಿದ್ದಾರೆ.

ಸಾವಿನ ಬಗ್ಗೆ ಕುಟುಂಬಸ್ಥರು ದೃಢಪಡಿಸಿದ್ದು, ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. 1947ರಲ್ಲಿ ಕ್ರೈಸ್ಟ್‍ಚರ್ಚ್‍ನಲ್ಲಿ ಸ್ಕಾಟಿ ಮೂಲದ ಮಾವೋರಿಗೆ ಜನಿಸಿದ ಆರು ಮಕ್ಕಳಲ್ಲಿ ಹುಲ್ಮ್ ಹಿರಿಯರಾಗಿದ್ದರು.

ಇವರ ಬರವಣಿಗೆಯು ಪ್ರತ್ಯೇಕತೆ, ವಸಾಹತೋತ್ತರ, ಬಹುಸಂಸ್ಕೃತಿ ಮೇಲೆ ಕೇಂದ್ರಕೃತವಾಗಿರುತ್ತದೆ. ಇವರು ಕೈ ತೈನುಯ್ ಎಂಬ ನಾಮಾಂಕಿತದಲ್ಲಿ ಬರೆಯುತ್ತಿದ್ದರು.

ದಿ ಬೋನ್ ಪೀಪ್ ಹೊರತುಪಡಿಸಿ, ಬೈಟ್, ಆನ್ ದ ಶ್ಯಾಡೋ ಸೈಡ್, ಇನ್ನೆರಡು ಕಾದಂಬರಿಗಳನ್ನು ಬರೆದರು. ಇದರ ಹೊರತಾಗಿ ಕವಿತೆ, ಸಣ್ಣ ಕತೆಗಳು ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com