'ನಾನ್ಸೆನ್ಸ್': ಚೋಕ್ಸಿ ಅಪಹರಣ ಸಂಚಿನಲ್ಲಿ ಸರ್ಕಾರ ಭಾಗಿ; ಆರೋಪ ತಳ್ಳಿ ಹಾಕಿದ ಡೊಮಿನಿಕಾ ಪ್ರಧಾನಿ

ಭಾರತ ಮೂಲದ ಉಧ್ಯಮಿ ಮೆಹುಲ್ ಚೋಕ್ಸಿ ಅಪಹರಣದಲ್ಲಿ ಡೊಮಿನಿಕಾ ಸರ್ಕಾರದ ಕೈವಾಡವಿದೆ ಎಂಬ ಆರೋಪವನ್ನು ಡೊಮೆನಿಕಾ ಪ್ರಧಾನಿ ರೂಸ್‌ವೆಲ್ಟ್‌ ಸ್ಕೆರ‍್ರಿಟ್ ತೀವ್ರವಾಗಿ ಖಂಡಿಸಿದ್ದಾರೆ.
ಡೊಮೆನಿಕಾ ಪ್ರಧಾನಿ
ಡೊಮೆನಿಕಾ ಪ್ರಧಾನಿ

ನವದೆಹಲಿ: ಭಾರತ ಮೂಲದ ಉಧ್ಯಮಿ ಮೆಹುಲ್ ಚೋಕ್ಸಿ ಅಪಹರಣದಲ್ಲಿ ಡೊಮಿನಿಕಾ ಸರ್ಕಾರದ ಕೈವಾಡವಿದೆ ಎಂಬ ಆರೋಪವನ್ನು ಡೊಮೆನಿಕಾ ಪ್ರಧಾನಿ ರೂಸ್‌ವೆಲ್ಟ್‌ ಸ್ಕೆರ‍್ರಿಟ್ ತೀವ್ರವಾಗಿ ಖಂಡಿಸಿದ್ದಾರೆ.

ಪಿಎನ್ ಬಿ ಬಹುಕೋಟಿ ಹಗರಣದ ಆರೋಪಿ, ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಆಂಟಿಗುವಾದಿಂದ ಬಾರ್ಬುಡಾಗೆ ಅಪಹರಿಸುವಲ್ಲಿ ಡೊಮಿನಿಕಾ ಸರ್ಕಾರದ ಕೈವಾಡವಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಡೊಮಿನಿಕಾ ಪ್ರಧಾನಿ‌, ‘ಇದೊಂದು ಅಸಂಬಂದ್ಧ’ ಆರೋಪ ಎಂದು ತಳ್ಳಿ ಹಾಕಿದ್ದಾರೆ.

ಈ ಕುರಿತಂತೆ ಡೊಮಿನಿಕಾ ನ್ಯೂಸ್ ಆನ್‌ಲೈನ್ ವರದಿ ಮಾಡಿದ್ದು, ಸುದ್ದಿಸಂಸ್ಥೆಗೆ ನೀಡಿರುವ ಪ್ರತಿಕ್ರಿಯೆಲ್ಲಿ, 'ಮೆಹುಲ್ ಚೋಕ್ಸಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತನ್ನ ಕಾನೂನು ಪ್ರಕ್ರಿಯೆ ನಡೆಸಲು ನಮ್ಮ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಸಂದರ್ಭದಲ್ಲಿ ಚೋಕ್ಸಿಯ ಹಕ್ಕುಗಳು  ಮತ್ತು ಆಕ್ಷೇಪಗಳನ್ನೂ ಗೌರವಿಸಲಾಗುವುದು ಎಂದು ಹೇಳಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 

ಆಂಟಿಗುವಾದಿಂದ ಬಾರ್ಬುಡಾಕ್ಕೆ ಚೋಕ್ಸಿಯನ್ನು ಅಪಹರಿಸಲು ಭಾರತ ಮತ್ತು ಡೊಮಿನಿಕಾ ಸರ್ಕಾರಗಳು ಸಂಚು ರೂಪಿಸಿದ್ದವು ಎಂಬ ಆರೋಪಗಳನ್ನು ಸಹ ಅವರು ಅಲ್ಲಗಳೆದಿದ್ದಾರೆ. 'ಡೊಮಿನಿಕಾ ಸರ್ಕಾರ ಮತ್ತು ಆಂಟಿಗುವಾ ಸರ್ಕಾರವು ಭಾರತದೊಂದಿಗೆ ಯಾವುದೇ ರೀತಿಯಲ್ಲಿ ತನಿಖೆಯಲ್ಲಿ ಒಗ್ಗೂಡಿಸಿ  ಕೊಂಡಿವೆ. ಇಂತಹ ಆರೋಪಗಳು ಸಂಪೂರ್ಣ ಅಸಂಬದ್ಧ. ನಾವು ಆ ರೀತಿಯ ಚಟುವಟಿಕೆಗಳಲ್ಲಿ, ಆ ಅಭ್ಯಾಸಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ. ನನ್ನ ಪ್ರಕಾರ ಅದು ಅಸಂಬದ್ಧ ಮತ್ತು ನಾವು ಅದನ್ನು ತಿರಸ್ಕರಿಸುತ್ತೇವೆ ಮತ್ತು ನ್ಯಾಯಾಲಯಗಳ ಮುಂದೆ ಇರುವ ಒಬ್ಬ ಸಂಭಾವಿತ ವ್ಯಕ್ತಿಯಿಂದ ಈ ರೀತಿ  ಆಧಾರರಹಿತ ಹಕ್ಕನ್ನು ಪ್ರಚಾರ ಮಾಡಲು ಯಾರಾದರೂ ಬಯಸುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com