ಚೀನಾ ಪರ ಬೇಹುಗಾರಿಕೆ: ಚಿಂತಕರ ಚಾವಡಿ ನಡೆಸುತ್ತಿದ್ದ ಜರ್ಮನಿಯ ವ್ಯಕ್ತಿ ಬಂಧನ
ಚಿಂತಕರ ಚಾವಡಿ (ಥಿಂಕ್ ಟ್ಯಾಂಕ್) ನಡೆಸುತ್ತಿದ್ದ ವ್ಯಕ್ತಿಯೋರ್ವ ವರ್ಷಗಳ ಕಾಲ ಚೀನಾದ ಗುಪ್ತಚರ ಇಲಾಖೆಗೆ ಮಾಹಿತಿದಾರನಾಗಿದ್ದ ಆರೋಪದಡಿ ಜರ್ಮನಿಯ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
Published: 06th July 2021 04:58 PM | Last Updated: 06th July 2021 05:15 PM | A+A A-

ಬಂಧನ (ಸಾಂಕೇತಿಕ ಚಿತ್ರ)
ಬರ್ಲಿನ್: ಚಿಂತಕರ ಚಾವಡಿ (ಥಿಂಕ್ ಟ್ಯಾಂಕ್) ನಡೆಸುತ್ತಿದ್ದ ವ್ಯಕ್ತಿಯೋರ್ವ ವರ್ಷಗಳ ಕಾಲ ಚೀನಾದ ಗುಪ್ತಚರ ಇಲಾಖೆಗೆ ಮಾಹಿತಿದಾರನಾಗಿದ್ದ ಆರೋಪದಡಿ ಜರ್ಮನಿಯ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಜರ್ಮನ್ ನ ಪ್ರಾಸಿಕ್ಯೂಟರ್ ಗಳು ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಬಂಧಿತ ಶಂಕಿತ ವ್ಯಕ್ತಿಯನ್ನು ಡಾ. ಕಲೌಸ್ ಎಲ್ ಎಂದು ಗುರುತಿಸಲಾಗಿದ್ದು, ಮ್ಯೂನಿಚ್ ನ್ಯಾಯಾಲಯದಲ್ಲಿ ಸಲ್ಲಿಸಿದ ದೋಷಾರೋಪಣೆ ಸಲ್ಲಿಸಿದ ಬಳಿಕ ಬಂಧಿಸಲಾಗಿದೆ.
ರಾಜಕೀಯ ವಿಜ್ಞಾನಿಯಾಗಿದ್ದ ಡಾ. ಕಲೌಸ್ ಎಲ್ 2001 ರಿಂದ ಥಿಂಕ್ ಟ್ಯಾಂಕ್ ನ್ನು ನಡೆಸುತ್ತಿದ್ದರು. ಡಾ.ಕಲೌಸ್ 2010 ರಲ್ಲಿ ಶಾಂಘೈ ಗೆ ತೆರಳಿದ್ದಾಗ ಚೀನಾದ ಗುಪ್ತಚರ ಇಲಾಖೆಯವರು ಅವರನ್ನು ಸಂಪರ್ಕಿಸಿದ್ದರು.
2019 ವರೆಗೂ ಬಹುರಾಷ್ಟ್ರೀಯ ಶೃಂಗಸಭೆ ಅಥವಾ ಇತರ ರಾಷ್ಟ್ರಗಳ ನಾಯಕರ ಭೇಟಿಯ ಕುರಿತು ಚೀನಾ ಗುಪ್ತಚರ ಇಲಾಖೆಯವರಿಗೆ ಮಾಹಿತಿ ನೀಡುತ್ತಿದ್ದ ಆರೋಪವನ್ನು ಡಾ.ಕಲೌಸ್ ಎದುರಿಸುತ್ತಿದ್ದಾರೆ. ಚೀನಾದ ಗುಪ್ತಚರ ಉದ್ಯೋಗಿಗಳೊಂದಿಗೆ ಭೇಟಿ ಮಾಡಿದಾಗಲೆಲ್ಲಾ ಹಣ ಪಡೆಯುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.