6 ಗಗನಯಾನಿಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಿದ್ದ ವಿಎಸ್​ಎಸ್​ ಯುನಿಟಿ ನೌಕೆ ಸುರಕ್ಷಿತ ಲ್ಯಾಂಡಿಂಗ್!

ಬ್ರಿಟನ್​ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಕನಸಿನ ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಿದ್ದು, ಬಾಹ್ಯಾಕಾಶದತ್ತ ಜಿಗಿದಿದ್ದ ವಿಎಸ್​ಎಸ್​ ಯುನಿಟಿ ನೌಕೆ ಯಶಸ್ವಿಯಾಗಿ ಧರೆಗೆ ಇಳಿದಿದೆ.
ವಿಎಸ್ಎಸ್ ಯುನಿಟಿ ನೌಕೆ
ವಿಎಸ್ಎಸ್ ಯುನಿಟಿ ನೌಕೆ

ವಾಷಿಂಗ್ಟನ್: ಬ್ರಿಟನ್​ ಉದ್ಯಮಿ ರಿಚರ್ಡ್ ಬ್ರಾನ್ಸನ್ ಅವರ ಕನಸಿನ ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಿದ್ದು, ಬಾಹ್ಯಾಕಾಶದತ್ತ ಜಿಗಿದಿದ್ದ ವಿಎಸ್​ಎಸ್​ ಯುನಿಟಿ ನೌಕೆ ಯಶಸ್ವಿಯಾಗಿ ಧರೆಗೆ ಇಳಿದಿದೆ.

Virgin Galactic ಸಂಸ್ಥೆಯ ಸಂಸ್ಥಾಪಕ ಉದ್ಯಮಿ ರಿಚರ್ಡ್ ಬ್ರಾನ್ಸನ್ ಮತ್ತು ಭಾರತ ಮೂಲದ ಗಗನಯಾನಿ ಸಿರಿಶಾ ಬಾಂದ್ಲಾ ಸೇರಿದಂತೆ ಆರು ಗಗನಯಾನಿಗಳು ಸುರಕ್ಷಿತವಾಗಿ ಇಳಿದಿದ್ದಾರೆ ಎಂದು ತಿಳಿದುಬಂದಿದೆ.

ಇಂದು ವರ್ಜಿನ್ ಗ್ಯಾಲಾಕ್ಟಿಕ್ ಸ್ಪೇಸ್ ರಾಕೆಟ್ ವಿಎಸ್‍ಎಸ್ ಯುನಿಟಿ-22 ಯಶಸ್ವಿಯಾಗಿ ರಾತ್ರಿ 8 ಗಂಟೆಗೆ ಉಡಾವಣೆಯಾಗಿದ್ದು, 9.20ರ ಸುಮಾರಿಗೆ ಬಾಹ್ಯಾಕಾಶ ತಲುಪಿದೆ ಎಂದು ವರ್ಜಿನ್ ಗ್ಯಾಲಾಕ್ಟಿಕ್ ಮಾಹಿತಿ ನೀಡಿದೆ ಎನ್ನಲಾಗಿದೆ. ರಿಚರ್ಡ್ ಬ್ರಾನ್ಸನ್ ಅವರೇ ಸಂಸ್ಥಾಪಿಸಿದ ವರ್ಜಿನ್​ ಗ್ಯಾಲಕ್ಟಿಕ್(  Virgin Galactic) ​ ಸ್ಪೇಸ್​ಫ್ಲೈಟ್​ ಕಂಪನಿಯೇ ತಯಾರಿಸಿದ ವಿಎಸ್​ಎಸ್​ ಯುನಿಟಿ (VSS Unity) ಗಗನ ನೌಕೆಯಲ್ಲಿ ಇಂದು ರಿಚರ್ಡ್​ ಬ್ರಾನ್ಸನ್​ ಸೇರಿ ಒಟ್ಟು ಆರು ಮಂದಿ ಬಾಹ್ಯಾಕಾಶವನ್ನು ತಲುಪಿದ್ದಾರೆ. 

90 ನಿಮಿಷಗಳ ಪ್ರಯಾಣ ಮುಗಿಸಿ ಅಮೆರಿಕದ ನ್ಯೂ ಮೆಕ್ಸಿಕೋ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಿದ್ದು, ವಿಎಂಎಸ್ ಇವ್ ನಿಂದ ಮೇಲಕ್ಕೆ ಅಂದ್ರೆ ಭೂಮಿಯ ಪರಿಧಿಯಿಂದ 50 ಸಾವಿರ ಅಡಿಗಳಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿ ಬಳಿಕ ಸ್ಪೇಸ್‍ಕ್ರಾಫ್ಟ್ ಸ್ವತಃ ಬಾಹ್ಯಾಕಾಶದತ್ತ ಚಲಿಸುತ್ತದೆ. ಅಂತರಿಕ್ಷದ ಈ  ಯಾತ್ರೆ 1 ಗಂಟೆ 5 ನಿಮಿಷ ಇರಲಿದೆ. ನಂತರ ವಿಎಸ್‍ಎಸ್ ಯುನಿಟಿ ವಾಪಸ್ ಸ್ಪೇಸ್‍ಪಾರ್ಟ್ ನಲ್ಲಿ ಲ್ಯಾಂಡ್ ಆಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com