ಮೂಗಿನಲ್ಲಿ ಪ್ರಾರಂಭಿಕ ವೈರಾಣುನಿಗ್ರಹ ಪ್ರತಿಕ್ರಿಯೆಯಿಂದ ಕೋವಿಡ್-19 ಸೋಂಕಿನ ಹಂತವನ್ನು ನಿರ್ಧರಿಸಬಹುದು: ವರದಿ 

ಕೋವಿಡ್-19 ಸೋಂಕಿತರಿಂದ ಸೋಂಕು ಪತ್ತೆ, ರೋಗ ನಿರ್ಣಯದ ವೇಳೆ ಸಂಗ್ರಹಿಸಲಾದ  ಜೀವಕೋಶಗಳ ಮಾದರಿಗಳು ಮ್ಯೂಟೆಡ್ ವೈರಾಣುನಿಗ್ರಹ ಪ್ರತಿಕ್ರಿಯೆ ತೋರುತ್ತದೆ ಎಂಬ ಮಾಹಿತಿ ಹೊಸ ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿದೆ. 
ಅಹ್ಮದಾಬಾದ್ ರೈಲು ನಿಲ್ದಾಣದಲ್ಲಿ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ
ಅಹ್ಮದಾಬಾದ್ ರೈಲು ನಿಲ್ದಾಣದಲ್ಲಿ ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ

ಕೇಂಬ್ರಿಡ್ಜ್: ಕೋವಿಡ್-19 ಸೋಂಕಿತರಿಂದ ಸೋಂಕು ಪತ್ತೆ, ರೋಗ ನಿರ್ಣಯದ ವೇಳೆ ಸಂಗ್ರಹಿಸಲಾದ  ಜೀವಕೋಶಗಳ ಮಾದರಿಗಳು ಮ್ಯೂಟೆಡ್ ವೈರಾಣುನಿಗ್ರಹ ಪ್ರತಿಕ್ರಿಯೆ ತೋರುತ್ತದೆ ಎಂಬ ಮಾಹಿತಿ ಹೊಸ ಅಧ್ಯಯನ ವರದಿಯಿಂದ ಬೆಳಕಿಗೆ ಬಂದಿದೆ. 
 
ಸೆಲ್ ಜರ್ನಲ್  ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿ ಇದಾಗಿದ್ದು, 18 ತಿಂಗಳಲ್ಲಿ ಸಂಶೋಧಕರು ಕೋವಿಡ್-19 ಹಾಗೂ ಅದರ ವೈರಾಣು SARS-CoV-2 ನ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದ್ದು, ಮೂಗು ಹಾಗೂ ಬಾಯಿಯಿಂದ ಪ್ರವೇಶಿಸುವ ವೈರಾಣು ಮ್ಯೂಕಸ್ ಪದರಗಳಿಂದ ಸೋಂಕು ಪ್ರಾರಂಭವಾಗುತ್ತದೆ ಎಂಬುದು ದೃಢಪಟ್ಟಿದೆ. 

ಮೂಗಿನ ಮೇಲ್ಪದರದಲ್ಲಿ ಉಳಿಯುವ ಸೋಂಕು ಸೌಮ್ಯ ಹಾಗೂ ರೋಗಲಕ್ಷಣ ರಹಿತವಾಗಿರುತದೆ. ಅಲ್ಲಿಂದ ಮುಂದಕ್ಕೆ ಹರಡುವ ವೈರಾಣು ಸೋಂಕು ಶ್ವಾಸಕೋಶದವರೆಗೂ ಹರಡಿ ತೀವ್ರಗೊಂಡು ಮಾರಣಾಂತಿಕವಾಗುತ್ತದೆ. 

ತೀವ್ರವಾದ ಸೋಂಕಿಗೆ ಸಾಮಾನ್ಯ ಅಂಶಗಳಾಗುವ ವಯಸ್ಸು, ಲಿಂಗ, ದೇಹದ ತೂಕಗಳನ್ನೂ ಸಂಶೋಧಕರು ಗುರುತಿಸಿದ್ದಾರಾದರೂ ಕೋವಿಡ್-19 ಸೋಂಕಿನ ಹಂತವನ್ನು ದೃಢಪಡಿಸುವುದು, ಯಾವಾಗ, ಎಲ್ಲಿ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ.  

ಸೌಮ್ಯ ಗುಣಲಕ್ಷಣಗಳ ರೋಗವನ್ನು ನಿಯಂತ್ರಿಸುವುದಕ್ಕೆ ದೇಹ ವಿಫಲಗೊಂಡಲ್ಲಿ ರೋಗ ತೀವ್ರಗೊಳ್ಳುವುದಕ್ಕೆ ಅವಕಾಶ ಸಿಗಲಿದೆಯೋ ಅಥವಾ ಈ ಹಂತಕ್ಕೂ ಮುನ್ನವೇ ರೋಗದ ತೀವ್ರತೆ ಪ್ರಾರಂಭವಾಗಲಿದೆಯೋ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. 

ರಾಗೊನ್ ಇನ್ಸ್ಟಿಟ್ಯೂಟ್ ಆಫ್ ಎಂಜಿಹೆಚ್, ಎಂಐಟಿ ಮತ್ತು ಹಾರ್ವರ್ಡ್; ಬ್ರಾಡ್ ಇನ್ಸ್ಟಿಟ್ಯೂಟ್ ಆಫ್ ಎಂಐಟಿ ಮತ್ತು ಹಾರ್ವರ್ಡ್; ಬೋಸ್ಟನ್ ಮಕ್ಕಳ ಆಸ್ಪತ್ರೆ (ಬಿಸಿಎಚ್); ಎಂಐಟಿ; ಮತ್ತು ಯೂನಿವರ್ಸಿಟಿ ಆಫ್ ಮಿಸ್ಸಿಸ್ಸಿಪ್ಪಿ ಮೆಡಿಕಲ್ ಸೆಂಟರ್ (ಯುಎಂಎಂಸಿ) ನ ಸಂಶೋಧಕರು ರೋಗದ ತೀವ್ರತೆಯ ಹಾದಿ ವೈದ್ಯಕೀಯ ಲೋಕದ ಊಹೆಗೂ ಮುನ್ನವೇ ತೆರೆದುಕೊಳ್ಳುತ್ತಿದೆಯೋ ಅಥವಾ ಮೂಗಿನ ಮೂಲಕ ವೈರಾಣು ಪ್ರವೇಶಿಸುವಾಗ ಉಂಟಾಗುವ ಪ್ರಾರಂಭಿಕ ಪ್ರತಿಕ್ರಿಯೆಯ ವೇಳೆಯಲ್ಲಿಯೇ ಆಗುತ್ತಿದೆಯೋ ಎಂಬುದರ ಬಗ್ಗೆ ತೀವ್ರವಾದ ಸಂಶೋಧನೆಯಲ್ಲಿ ತೊಡಗಿದ್ದು ಇನ್ನಷ್ಟೇ ಈ ಮಾಹಿತಿಯ ಬಗ್ಗೆ ದೃಢ ನಿರ್ಣಯಕ್ಕೆ ಬರಬೇಕಿದೆ. 

ಈ ಅನುಮಾನವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಸಂಶೋಧಕರು, ಕೋವಿಡ್-19 ನ ಪ್ರಾರಂಭಿಕ ರೋಗ ನಿರ್ಣಯದ ವೇಳೆ ರೋಗಿಗಳ ಮೂಗಿನ ಸ್ವಾಬ್ ಗಳನ್ನು ಕೋವಿಡ್-19 ನ ಸೌಮ್ಯ(ಪ್ರಾರಂಭಿಕ ರೋಗಲಕ್ಷಣ) ದೃಢಪಟ್ಟಿರುವ ರೋಗಿಗಳೊಂದಿಗೆ ಹಾಗೂ ತೀವ್ರವಾದ ರೋಗ ಲಕ್ಷಣ ಇರುವ ರೋಗಿಗಳೊಂದಿಗೆ ಹೋಲಿಕೆ ಮಾಡಿದ್ದಾರೆ. 

ತೀವ್ರವಾದ ಕೋವಿಡ್-19 ರೋಗಲಕ್ಷಣ ಹೊಂದಿದ್ದ ರೋಗಿಗಳಿಂದ ಆರಂಭದಲ್ಲೇ ಸಂಗ್ರಹಿಸಲಾದ  ಜೀವಕೋಶಗಳಲ್ಲಿ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದ ರೋಗಿಗಳಿಗಿಂತಲೂ ಹೆಚ್ಚು ಮ್ಯೂಟೆಡ್ ವೈರಾಣು ಪ್ರತಿರೋಧಕ ಪ್ರತಿಕ್ರಿಯೆಗಳು ಪತ್ತೆಯಾಗಿದೆ.  

ರೋಗದ ಪ್ರಾರಂಭಿಕ ಹಂತದಲ್ಲಿ ಸಂಗ್ರಹ ಮಾಡಿದ್ದ ಸ್ಯಾಂಪಲ್ ಗಳಿಗೂ ರೋಗ ಉಲ್ಬಣಗೊಂಡಂತೆ ಕಂಡುಬಂದ ವಿವಿಧ ತೀವ್ರತೆಗೂ ಸಂಬಂಧವಿದೆಯೇ ಎಂಬುದನ್ನು ಸಂಶೋಧಕರು ಅರ್ಥ ಮಾಡಿಕೊಳ್ಳುವುದಕ್ಕಾಗಿ ಈ ಸಂಶೋಧನೆ ನಡೆದಿದೆ ಎಂದು ಬ್ರಾಡ್‌ನ ಕ್ಲಾರ್ಮನ್ ಸೆಲ್ ಅಬ್ಸರ್ವೇಟರಿಯಲ್ಲಿ ಸಹಾಯಕ ಸದಸ್ಯ ಮತ್ತು ಬಿಸಿಎಚ್ ಮತ್ತು ಹಾರ್ವರ್ಡ್ ವೈದ್ಯಕೀಯ ಶಾಲೆಯ ಸಹಾಯಕ ಪ್ರಾಧ್ಯಾಪಕ, ಅಧ್ಯಯನದ ಸಹ-ಹಿರಿಯ ಲೇಖಕ ಜೋಸ್ ಒರ್ಡೋವಾಸ್-ಮೊಂಟಾನೆಸ್ ಹೇಳಿದ್ದಾರೆ. 

ಈ ಅಧ್ಯಯನ ವರದಿಯಿಂದ ಮೂಗಿನಲ್ಲಿ ಶೀಘ್ರ ವೈರಾಣುನಿಗ್ರಹ ಪ್ರತಿಕ್ರಿಯೆಯಿಂದ ಕೋವಿಡ್-19 ಸೋಂಕಿನ ಹಂತವನ್ನು ನಿರ್ಧರಿಸಬಹುದು, ಇದು ರೋಗದ ತೀವ್ರಗೊಳ್ಳುವುದನ್ನು ತಡೆಯುವುದಕ್ಕೆ ಸಹಕಾರಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com