ಉದ್ಯಮಿ ವಿಜಯ್ ಮಲ್ಯ 'ದಿವಾಳಿ' ಎಂದು ಘೋಷಿಸಿದ ಯುಕೆ ಹೈಕೋರ್ಟ್ 

ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಪ್ರಕಟಿಸಿದೆ. ಇದು ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ವಸೂಲು ಮಾಡಲು ವಿಶ್ವದಾದ್ಯಂತ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಎದುರು ನೋಡುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ  ಬ್ಯಾಂಕ್ ಗಳ ಒಕ್ಕೂಟದ ಹಾದಿಯನ್ನು ಸುಗಮಗೊಳಿಸಿದೆ.
ವಿಜಯ್ ಮಲ್ಯ
ವಿಜಯ್ ಮಲ್ಯ

ಲಂಡನ್: ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಬ್ರಿಟನ್ನಿನ ನ್ಯಾಯಾಲಯವೊಂದು ಸೋಮವಾರ ಪ್ರಕಟಿಸಿದೆ. ಇದು ಕಾರ್ಯನಿರ್ವಹಿಸದ ಕಿಂಗ್ ಫಿಶರ್ ಏರ್ ಲೈನ್ಸ್ ಗೆ ಸಾಲ ನೀಡಿ ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ವಸೂಲು ಮಾಡಲು ವಿಶ್ವದಾದ್ಯಂತ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರದಲ್ಲಿ ಎದುರು ನೋಡುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್ ಗಳ ಒಕ್ಕೂಟದ ಹಾದಿಯನ್ನು ಸುಗಮಗೊಳಿಸಿದೆ.

ಯು ಕೆ ಸಮಯ 15.42 ರಂತೆ, ಲಂಡನ್ ಹೈಕೋರ್ಟ್ ಚಾನ್ಸರಿ ವಿಭಾಗದ ವರ್ಚುಯಲ್ ವಿಚಾರಣೆ ವೇಳೆಯಲ್ಲಿ ವಿಜಯ್ ಮಲ್ಯ ದಿವಾಳಿಯೆಂದು  ಐಸಿಸಿ ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ತೀರ್ಪಿನಲ್ಲಿ ಹೇಳಿದ್ದಾರೆ. ಕಾನೂನು ಸಂಸ್ಥೆಗಳಾದ ಟಿಎಲ್‌ಟಿ ಎಲ್‌ಎಲ್‌ಪಿ ಮತ್ತು ನ್ಯಾಯವಾದಿ ಮಾರ್ಸಿಯಾ ಶೆಕರ್ಡೆಮಿಯನ್ ಪ್ರತಿನಿಧಿಸುವ ಭಾರತೀಯ ಬ್ಯಾಂಕುಗಳು ದಿವಾಳಿತನದ ಆದೇಶವನ್ನು ಭಾರತೀಯ ಬ್ಯಾಂಕುಗಳ ಪರವಾಗಿ ನೀಡಬೇಕೆಂದು ವಾದಿಸಿದ್ದರು.

 ಮಲ್ಯ ಪರ ವಕೀಲ ನ್ಯಾಯವಾದಿ, ಫಿಲಿಪ್ ಮಾರ್ಷಲ್, ಭಾರತೀಯ ನ್ಯಾಯಾಲಯಗಳಲ್ಲಿ ಕಾನೂನು ಸವಾಲುಗಳು ಮುಂದುವರೆದಿರುವಾಗ, ತಡೆಯಾಜ್ಞೆ ಮತ್ತು ಆದೇಶವನ್ನು ಮುಂದೂಡಬೇಕೆಂದು ಕೋರಿದರು. ಆದಾಗ್ಯೂ, ಅರ್ಜಿದಾರರಿಗೆ ಸಾಲವನ್ನು ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಪಾವತಿಸಲಾಗುವುದು ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂದು ತೀರ್ಮಾನಿಸಿದ ನ್ಯಾಯಾಧೀಶರು ಈ ಕೋರಿಕೆಗಳನ್ನು ತಿರಸ್ಕರಿಸಿದರು.

 ದಿವಾಳಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಲು ಅವಕಾಶ ಕೊಡಬೇಕು ಎಂಬ ಅರ್ಜಿಯನ್ನು ಮಲ್ಯ ಅವರು ಸಲ್ಲಿಸಿದರು. ಆದರೆ, ಮೇಲ್ಮನವಿಯು ಯಶಸ್ಸು ಕಾಣುವ ಸಾಧ್ಯತೆ ಇಲ್ಲ ಎಂದು ನ್ಯಾಯಾಧೀಶರು ಈ ಅರ್ಜಿಯನ್ನು ತಿರಸ್ಕರಿಸಿದರು.

65 ವರ್ಷದ ಉದ್ಯಮಿ ತಪ್ಪೇ ಮಾಡಿಲ್ಲ ಎಂದು ಸುಮ್ಮನೆ ಕಾಲಹರಣ ಮಾಡಿ ಎಲ್ಲರ ದಾರಿ ತಪ್ಪಿಸುತ್ತಿದ್ದಾರೆ ಎಂದು ಬ್ಯಾಂಕುಗಳು ಆರೋಪಿಸಿದ್ದವು ಮತ್ತು ವಿಜಯ್​ ಮಲ್ಯ ಅವರ ದಿವಾಳಿತನದ ಅರ್ಜಿಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ತರಬೇಕು ಎಂದು ಬ್ಯಾಂಕ್​ಗಳ ಒಕ್ಕೂಟವು ಒತ್ತಾಯಿಸಿತ್ತು.

ಎಸ್‌ಬಿಐ ನೇತೃತ್ವದ 13 ಭಾರತೀಯ ಬ್ಯಾಂಕುಗಳ ಒಕ್ಕೂಟ, ಇದರಲ್ಲಿ ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಯುಸಿಒ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಎಂ ಫೈನಾನ್ಷಿಯಲ್ ಅಸೆಟ್ ರೀಕನ್​ಸ್ಟ್ರಕ್ಷನ್​ ಕೋ ಪ್ರೈವೇಟ್ ಲಿಮಿಟೆಡ್ ಇವುಗಳೇ ವಿಜಯ್​ ಅವರಿಗೆ ಸಾಲ ನೀಡಿರುವ ಬ್ಯಾಂಕ್​ಗಳಾಗಿವೆ, ಈ ತೀರ್ಪಿನ ಅನ್ವಯ ಒಟ್ಟು ವಿಜಯ್​ ಮಲ್ಯ,  1 ಬಿಲಿಯನ್​ ಯುಕೆ ಪೌಂಡ್​ಗಳಿಗಿಂತಲೂ ಹೆಚ್ಚು ಹಣವನ್ನು ಪಾವತಿಸಬೇಕಾಗುತ್ತದೆ.

ಈ ಸಾಲವು ಅಸಲಿನ ಜೊತೆಗೆ ಬಡ್ಡಿಯನ್ನು ಒಳಗೊಂಡಿದೆ,  25 ಜೂನ್, 2013 ರಿಂದ ವಾರ್ಷಿಕ ಶೇಕಡಾ 11.5 ರ ದರದಲ್ಲಿ compound interest ಸಹ  ಇದಕ್ಕೆ ಸೇರಿಸಿ ಲೆಕ್ಕ ಹಾಕಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com