ತುರ್ತು ಬಳಕೆ ಅನುಮೋದನೆ ತಿರಸ್ಕರಿಸಿದ ಬೆನ್ನಲ್ಲೇ ‘ಕೋವ್ಯಾಕ್ಸಿನ್‌’ ಆಮದು ರದ್ದುಪಡಿಸಿದ ಬ್ರೆಜಿಲ್‌

ಭಾರತ್‌ ಬಯೊಟೆಕ್‌ನ ಕೋವಿಡ್-19 ಲಸಿಕೆ ‘ಕೋವ್ಯಾಕ್ಸಿನ್‌’ಗೆ ತುರ್ತು ಬಳಕೆ ಅನುಮೋದನೆ ತಿರಸ್ಕರಿಸಿದ ಬೆನ್ನಲ್ಲೇ ಬ್ರೆಜಿಲ್ ಸರ್ಕಾರ ಲಸಿಕೆ ಆಮದನ್ನು ಕೂಡ ರದ್ದುಗೊಳಿಸಿದೆ,
ಕೋವ್ಯಾಕ್ಸಿನ್
ಕೋವ್ಯಾಕ್ಸಿನ್

ಹೈದರಾಬಾದ್‌: ಭಾರತ್‌ ಬಯೊಟೆಕ್‌ನ ಕೋವಿಡ್-19 ಲಸಿಕೆ ‘ಕೋವ್ಯಾಕ್ಸಿನ್‌’ಗೆ ತುರ್ತು ಬಳಕೆ ಅನುಮೋದನೆ ತಿರಸ್ಕರಿಸಿದ ಬೆನ್ನಲ್ಲೇ ಬ್ರೆಜಿಲ್ ಸರ್ಕಾರ ಲಸಿಕೆ ಆಮದನ್ನು ಕೂಡ ರದ್ದುಗೊಳಿಸಿದೆ,

ಮೂಲಗಳ ಪ್ರಕಾಕ ಸುಮಾರು 40 ಲಕ್ಷ ಡೋಸ್‌ ಕೋವ್ಯಾಕ್ಸಿನ್ ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಬ್ರೆಜಿಲ್‌ ರದ್ದುಗೊಳಿಸಿದ್ದು, ಕೋವ್ಯಾಕ್ಸಿನ್‌ ನ ಕ್ಲಿನಿಕಲ್ ಅಧ್ಯಯನವನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಬ್ರೆಜಿಲ್‌ ಈ ಕ್ರಮಕೈಗೊಂಡಿದೆ.

ಬ್ರೆಜಿಲ್‌ನ ಪ್ರೆಸಿಸಾ ಮೆಡಿಸಿಮೆಂಟೋಸ್ ಮತ್ತು ಎನ್ವಿಕ್ಸಿಯಾ ಫಾರ್ಮಾಸ್ಯುಟಿಕಲ್ಸ್ ಎಲ್ಎಲ್‌ಸಿ ಜತೆಗಿನ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ಭಾರತ್ ಬಯೋಟೆಕ್ ಕಂಪನಿ ಜುಲೈ 23ರಂದು ಬ್ರೆಜಿಲ್‌ ಸರ್ಕಾರಕ್ಕೆ ತಿಳಿಸಿತ್ತು. ಬ್ರೆಜಿಲ್‌ನಲ್ಲಿ ಕೋವ್ಯಾಕ್ಸಿನ್‌ ಪರಿಚಯಿಸುವ ಉದ್ದೇಶದಿಂದ ಭಾರತ್‌ ಬಯೋಟೆಕ್‌  ಈ ಎರಡೂ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಭಾರತ್ ಬಯೋಟೆಕ್ ತನ್ನ ನಿರ್ಧಾರ ಪ್ರಕಟಿಸಿದ ಬಳಿಕ ಬ್ರೆಜಿಲ್‌ನ ರಾಷ್ಟ್ರೀಯ ಆರೋಗ್ಯ ನಿಗಾ ಸಂಸ್ಥೆಯು ‘ಕೋವ್ಯಾಕ್ಸಿನ್‌’ ಆಮದು ಮಾಡಿಕೊಳ್ಳುವುದನ್ನು ರದ್ದುಪಡಿಸುವುದಾಗಿ ತಿಳಿಸಿದೆ.

ಆದರೆ ಈ ಬೆಳವಣಿಗೆ ಭಾರತ್ ಬಯೋಟೆಕೆ ಸಂಸ್ಥೆಗೆ ಭಾರಿ ಹಿನ್ನಡೆಯನ್ನುಂಟು ಮಾಡಿದೆ. ಎರಡು ಕೋಟಿ ಡೋಸ್‌ ‘ಕೋವ್ಯಾಕ್ಸಿನ್‌’ ಪೂರೈಕೆಗೆ ಸಂಬಂಧಿಸಿದಂತೆ ಬ್ರೆಜಿಲ್‌ ಸರ್ಕಾರದ ಜತೆ ಮಾಡಿಕೊಳ್ಳಲಾದ ಒಪ್ಪಂದವು ವಿವಾದಕ್ಕೀಡಾಗಿತ್ತು. ಈ ಬಗ್ಗೆ ಬ್ರೆಜಿಲ್‌ನಲ್ಲಿ ಅಧಿಕಾರಿಗಳು ತನಿಖೆಯನ್ನು ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com