ಲಸಿಕೆ ಪಡೆಯುವವರಿಗೆ ಉಚಿತ ಬಿಯರ್!: ಬೈಡನ್ ಆಡಳಿತದ ಹೊಸ ಘೋಷಣೆ!

ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವುದಕ್ಕೆ ಅಮೆರಿಕದ ಜೋ ಬೈಡನ್ ಆಡಳಿತ ಹೊಸ ಘೋಷಣೆ ಮಾಡಿದ್ದು, ಲಸಿಕೆ ಪಡೆಯುವವರಿಗೆ ಉಚಿತ ಬಿಯರ್ ನೀಡುವುದಾಗಿ ಹೇಳಿದೆ. 
ಜೋ ಬೈಡೆನ್
ಜೋ ಬೈಡೆನ್

ವಾಷಿಂಗ್ ಟನ್: ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವುದಕ್ಕೆ ಅಮೆರಿಕದ ಜೋ ಬೈಡನ್ ಆಡಳಿತ ಹೊಸ ಘೋಷಣೆ ಮಾಡಿದ್ದು, ಲಸಿಕೆ ಪಡೆಯುವವರಿಗೆ ಉಚಿತ ಬಿಯರ್ ನೀಡುವುದಾಗಿ ಹೇಳಿದೆ. 

"ಮಂತ್ ಆಫ್ ಆಕ್ಷನ್" ನ್ನು ಘೋಷಣೆ ಮಾಡಿರುವ ಶ್ವೇತ ಭವನ, ಜುಲೈ ನ 4 ರಜೆಗೂ ಮುನ್ನ ಹೆಚ್ಚು ಲಸಿಕೆಗಳನ್ನು ಪಡೆಯುವುದಕ್ಕೆ ಅಮೆರಿಕನ್ನರನ್ನು ಉತ್ತೇಜಿಸುತ್ತಿದೆ. 

ಶ್ವೇತ ಭವನದಿಂದಲೇ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಶೇ.70 ರಷ್ಟು ವಯಸ್ಕ ಜನಸಂಖ್ಯೆಗೆ ಲಸಿಕೆ ನೀಡುವ ಹಾಗೂ ಬೇಸಿಗೆ ವೇಳೆಗೆ ಸಹಜ ಸ್ಥಿತಿಗೆ ಅಮೆರಿಕವನ್ನು ತರುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. 

ಲಸಿಕೆ ಪಡೆಯುವುದನ್ನು ಉತ್ತೇಜಿಸುವುದಕ್ಕಾಗಿ ಹಲವು ಆಕರ್ಷಕ ಕೊಡುಗೆಗಳನ್ನು ಅಮೆರಿಕ ಸರ್ಕಾರ ನೀಡಲು ಮುಂದಾಗಿದ್ದು, ನಗದು ಬಹುಮಾನ, ಕ್ರೀಡೆಗೆ ಸಂಬಂಧಪಟ್ಟ ಟಿಕೆಟ್ ಗಳು, ಅಥವಾ ವೇತನ ಸಹಿತ ರಜೆಗಳನ್ನು ಘೋಷಣೆ ಮಾಡಿದೆ. 

ಮಂತ್ ಆಫ್ ಆಕ್ಷನ್ ನಲ್ಲಿ ಸರ್ಕಾರಿ-ಖಾಸಗಿ ಕ್ಷೇತ್ರದ ಪಾಲುದಾರಿಕೆಯಲ್ಲಿ ನಡೆಯುತ್ತಿದ್ದು, ಹೆಚ್ಚಿನ ಜನರು ಲಸಿಕೆ ಪಡೆಯುವುದಕ್ಕೆ ಉತ್ತೇಜಿಸುವುದಕ್ಕೆ ಉದ್ಯಮ, ಸಾಮಾಜಿಕ ಜಾಲತಾಣದಲ್ಲಿ ಪ್ರಭಾವ ಬೀರಬಹುದಾಗಿರುವವರು, ಸೆಲಬ್ರಿಟಿಗಳು, ಸಮುದಾಯ ಸಂಘಟನೆಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಈ ವರೆಗೂ ಅಮೆರಿಕದ ವಯಸ್ಕ ಜನಸಂಖ್ಯೆಯ ಶೇ.62.8 ರಷ್ಟು ಮಂದಿ ಒಂದು ಡೋಸ್ ಲಸಿಕೆ ಪಡೆದಿದ್ದರೆ 133.6 ಮಿಲಿಯನ್ ಮಂದಿ ಎರಡೂ ಡೋಸ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಹೊಸದಾಗಿ ಲಸಿಕೆ ಹಾಕಿಸಿಕೊಳ್ಳುತ್ತಿರುವವರ ಸಂಖ್ಯೆ ಕುಸಿಯುತ್ತಿದ್ದು, ದಿನವೊಂದಕ್ಕೆ ಸರಾಸರಿ 600,000 ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ, ಇದಕ್ಕೂ ಮುನ್ನ ಲಾಟರಿಗಳನ್ನು ಘೋಷಣೆ ಮಾಡಿದಾಗ ದಿನವೊಂದಕ್ಕೆ 800,000 ಮಂದಿ ಲಸಿಕೆ ಹಾಕಿಸಿಕೊಳ್ಳುತ್ತಿದ್ದರು. 

ಬೈಡನ್ ಶೇ.70 ರಷ್ಟು ಮಂದಿಗೆ ಲಸಿಕೆ ನೀಡುವ ಗುರಿ ದಾಟಿದರೆ, 21+ ಅಮೆರಿಕನ್ನರಿಗೆ ಉಚಿತವಾಗಿ ಬೀರ್ ನೀಡುವುದಾಗಿ  
ಅನ್ಹ್ಯೂಸರ್-ಬುಷ್ (ಮದ್ಯದ ಕಂಪನಿ) ಘೋಷಿಸಿತ್ತು. ಅಷ್ಟೇ ಅಲ್ಲದೇ ಗುರಿ ದಾಟಿದ ಬೆನ್ನಲ್ಲೇ ಮೊದಲ 200,000 ಅದೃಷ್ಟಶಾಲಿಗಳಿಗೆ $5 ಕ್ರೆಡಿಟ್ ನೀಡುವುದಾಗಿಯೂ ಘೋಷಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com