ಮೆಹುಲ್ ಚೋಕ್ಸಿ ಡೊಮಿನಿಕಾದಲ್ಲಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ ಗೊತ್ತಾ?

ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಬಂಧನದ ಸುತ್ತ ವಿವಾದಗಳು ಎದ್ದಿರುವಂತೆಯೇ, ಡೊಮಿನಿಕಾದ ರೋಸೌನಲ್ಲಿ ಚೋಕ್ಸಿಯನ್ನು ಹೇಗೆ ಪೊಲೀಸರು ಬಂಧಿಸಿದರು ಎಂಬುದನ್ನು  ಪ್ರತ್ಯಕ್ಷದರ್ಶಿಯೊಬ್ಬರು ಬಹಿರಂಗಪಡಿಸಿದ್ದಾರೆ. ದೇಶದ ಸಿಐಡಿ ತಂಡ ರೋಸ್ ನಲ್ಲಿಯೇ ಚೋಕ್ಸಿಯನ್ನು ಬಂಧಿಸಿದ್ದರು.
ಮೆಹುಲ್ ಚೋಕ್ಸಿ
ಮೆಹುಲ್ ಚೋಕ್ಸಿ

ಡೊಮಿನಿಕಾ:  ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಬಂಧನದ ಸುತ್ತ ವಿವಾದಗಳು ಎದ್ದಿರುವಂತೆಯೇ, ಡೊಮಿನಿಕಾದ ರೋಸೌನಲ್ಲಿ ಚೋಕ್ಸಿಯನ್ನು ಹೇಗೆ ಪೊಲೀಸರು ಬಂಧಿಸಿದರು ಎಂಬುದನ್ನು  ಪ್ರತ್ಯಕ್ಷದರ್ಶಿಯೊಬ್ಬರು ಬಹಿರಂಗಪಡಿಸಿದ್ದಾರೆ. ದೇಶದ ಸಿಐಡಿ ತಂಡ ರೋಸ್ ನಲ್ಲಿಯೇ ಚೋಕ್ಸಿಯನ್ನು ಬಂಧಿಸಿದ್ದರು.

ಪ್ರತ್ಯಕ್ಷದರ್ಶಿ ಡೊಮಿನಿಕ ಪ್ರಜೆ ಹ್ಯಾರಿ ಬ್ಯಾರನ್ ಪ್ರಕಾರ, ಚೋಕ್ಸಿ ಕೆರಿಬಿಯನ್ ಸಮುದ್ರಕ್ಕೆ ಕೆಲವೊಂದನ್ನು ದಾಖಲೆಗಳನ್ನು ಎಸೆಯುತ್ತಿರುವಾಗ ಪೊಲೀಸರು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆಗ ಆತ ಅಲ್ಲಿಂದ ಓಡಲು ಶುರು ಮಾಡಿದ ನಂತರ ಅನುಮಾನಗೊಂಡ ಪೊಲೀಸರು ಆತನ ಹಿಂದೆ ಓಡಿದ್ದಾರೆ. ಆದರೆ, ಚೋಕ್ಸಿ ಹೆಚ್ಚು ದೂರ ಓಡಲು ಸಾಧ್ಯವಾಗದೆ ಎರಡು ಬಾರಿ ಕೆಳಗೆ ಬಿದಿದ್ದಾನೆ. ಹೀಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಚೋಕ್ಸಿ ಬಂಧನಕ್ಕೊಳಗಾದ ಎಂದು ರೈಟ್ ಆಪ್ಸ್ 24 ವರದಿ ಮಾಡಿದೆ.

ಚೇಸಿಂಗ್ ವೇಳೆಯಲ್ಲಿ ಚೋಕ್ಸಿ ಹೇಗೆ ಗಾಯಗೊಂಡ ಎಂಬುದರ ಬಗ್ಗೆಯೂ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ತದನಂತರ ಪೊಲೀಸರು ವಿಚಾರಣೆಗೊಳಪಡಿಸಿ ಬೀಚ್ ನಲ್ಲಿ ಬಂಧಿಸಿದ್ದು, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಅಂಟಿಗುವಾ ಮತ್ತು ಬಾರ್ಬುಡಾದಿಂದ ಕಣ್ಮರೆಯಾಗುತ್ತಿದ್ದ ಕಣ್ಮರೆಯಾಗಿ ಆಗಾಗ್ಗೆ ಕ್ಯೂಬಾಗೆ ಪರಾರಿಯಾಗುತ್ತಿದ್ದ ಚೋಕ್ಸಿ ಪ್ರಯತ್ನ ಹಾಲಿವುಡ್ ಸಿನಿಮಾಗಿಂತಲೂ ಭಿನ್ನವಾಗಿತ್ತು ಎಂದು ಕೆರಿಬಿಯನ್ ನ್ಯೂಸ್ ಪೇಪರ್ ಹೇಳಿದೆ. ಚೋಕ್ಸಿಯನ್ನು ವಶಕ್ಕೆ ಪಡೆದ ನಂತರ ವಿದೇಶದಿಂದ ಪರಾರಿಯಾದ, ಇಂಟರ್ ಫೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಹೊರಡಿಸಿರುವ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರಿಗೆ ಗೊತ್ತಾಗಿದೆ. 

ಚೋಕ್ಸಿಯ ಅಪಹರಣ ನಾಟಕ ತಳ್ಳಲು ಡೊಮಿನಿಕಾದ ಪ್ರತಿಪಕ್ಷ ನಾಯಕ ಲೆನ್ನಾಕ್ಸ್ ಲಿಂಟನ್ ಗೆ ಚೋಕ್ಸಿ ಸಹೋದರ ಚುನಾವಣಾ ನಿಧಿಯ ಭರವಸೆ ನೀಡಿದ್ದ, ಇಡೀ ಸನ್ನಿವೇಶಕ್ಕೆ ಅಪಹರಣದ ಕಥೆ ಕಟ್ಟುವ ಯೋಜನೆ ಹಾಕಿಕೊಳ್ಳಲಾಗಿತ್ತು. ವಕೀಲರ ಸಲಹೆ ಮೇರೆಗೆ ಚೋಕ್ಸಿಯ ಕುಟುಂಬ ರಚಿಸಿದ ವಂಚನೆಯಲ್ಲಿ ಮಾಧ್ಯಮಗಳು ಸಿಕ್ಕಿ ಬಿದಿದ್ದವು ಎಂದು ರೈಟ್ ಆಪ್ಸ್ 24  ವರದಿ ಮಾಡಿದೆ.

ಚೋಕ್ಸಿ ಹಾಗೂ ಆತನ ಸೋದರಳಿಯ ನಿರಾವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಭಾರತದಿಂದ ಪಲಾಯನವಾಗಿದ್ದ ಚೋಕ್ಸಿ, ಜನವರಿ 2018ರಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ದೊರಕಿತ್ತು. ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ಅವರು ಕಾನೂನು ಹೋರಾಟದಲ್ಲಿ ತೊಡಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com