ಕೋವಿಡ್-19 ಮೂಲದ ಬಗ್ಗೆ ಸಮಯೋಚಿತ, ಪಾರದರ್ಶಕ, ಆಧಾರ ಸಹಿತ ತನಿಖೆಗೆ ಜಿ-7 ಒತ್ತಾಯ

ಜಿ-7 ಶೃಂಗಸಭೆಯಲ್ಲಿ ಕೊರೋನಾ ಲಸಿಕೆಗೆ ಸಹಕಾರ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ಮೂಲದ ಪತ್ತೆ ಬಗ್ಗೆಯೂ ನಿರ್ಣಯ ಅಂಗೀಕರಿಸಲಾಗಿದೆ.
ಬ್ರಿಟನ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಜಿ-7 ನಾಯಕರು
ಬ್ರಿಟನ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಜಿ-7 ನಾಯಕರು

ಲಂಡನ್: ಜಿ-7 ಶೃಂಗಸಭೆಯಲ್ಲಿ ಕೊರೋನಾ ಲಸಿಕೆಗೆ ಸಹಕಾರ ನೀಡುವುದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಕೊರೋನಾ ಮೂಲದ ಪತ್ತೆ ಬಗ್ಗೆಯೂ ನಿರ್ಣಯ ಅಂಗೀಕರಿಸಲಾಗಿದೆ.

ಸಮಯೋಚಿತ, ಪಾರದರ್ಶಕ, ತಜ್ಞರ ನೇತೃತ್ವದ ಮತ್ತು ವಿಜ್ಞಾನ ಆಧಾರಿತ, ಡಬ್ಲ್ಯುಹೆಚ್ಒ ಮೇಲ್ವಿಚಾರಣೆಯಲ್ಲಿ ಕೋವಿಡ್-19 ಸೋಂಕು ಮೂಲದ ಪತ್ತೆ ಮಾಡಬೇಕಿದೆ ಎಂದು ಜಿ-7 ನಾಯಕರು ಕರೆ ನೀಡಿದ್ದಾರೆ.

ಚೀನಾದಲ್ಲಿ ಕೊರೋನಾ ವೈರಸ್ ಸೃಷ್ಟಿಯಾಗಿದೆ ಎಂಬ ಆರೋಪದ ತಜ್ಞರ ಆಯಾಮದಿಂದಲೂ ತನಿಖೆ ನಡೆಯಬೇಕೆಂದು ಜಿ-7 ನಾಯಕರು ಹೇಳಿದ್ದಾರೆ. 

2005 ರ ಆರೋಗ್ಯ ನಿಯಮಗಳ ಪಾಲನೆಯೆಡೆಗೆ ಇರುವ ನಮ್ಮ ಬದ್ಧತೆ, ನಮ್ಮ ಉತ್ತರದಾಯಿತ್ವದ ಸಾಮರ್ಥ್ಯ, ಪಾರದರ್ಶಕತೆ ಹೆಚ್ಚಿಸಿಕೊಳ್ಳುವುದಕ್ಕೆ ಜಿ-7 ನಾಯಕರು ಕರೆ ನೀಡಿದ್ದಾರೆ. 

ಈ ಪೈಕಿ ಕೊರೋನ ಮೂಲವನ್ನು ಪತ್ತೆ ಮಾಡುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಕೊರೋನಾ ವುಹಾನ್ ನಿಂದ ಮೊದಲು ವರದಿಯಾಗಿ 1.5 ವರ್ಷಗಳೇ ಕಳೆದರೂ ಸಹ ಕೋವಿಡ್-19 ಮೂಲ ರಹಸ್ಯಾವಗಿಯೇ ಉಳಿದಿದೆ. 

ಈ ಹಿನ್ನೆಲೆಯಲ್ಲಿ ಕೊರೋನಾ ಮೂಲ ಪತ್ತೆಗೆ ಈಗಾಗಲೇ ಬ್ರಿಟನ್ ಹಾಗೂ ಅಮೆರಿಕ ಅನುಮತಿ ನೀಡಾಗಿದೆ. ಶೃಂಗಸಭೆಯ ಬಳಿಕ ಜಂಟಿ ಹೇಳಿಕೆ ನೀಡಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್- ಅಮೆರಿಕ ಅಧ್ಯಕ್ಷ ಜೋ ಬೈಡನ್, ಸಾಂಕ್ರಾಮಿಕದಿಂದ ಹೊರಬರಲು ಮನುಷ್ಯರ ಪರಿಸ್ಥಿತಿಯನ್ನು ಸುಧಾರಣೆಯನ್ನು ಬುಡಮೇಲಾಗಿದೆ. ಭವಿಷ್ಯಕ್ಕೆ ಸಿದ್ಧತೆ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com