ಮೆಕ್ ಅಫೀ ಆ್ಯಂಟಿ ವೈರಸ್ ಸಂಶೋಧಕ ಜೈಲಿನಲ್ಲಿ ನಿಗೂಢ ಸಾವು!

ಖ್ಯಾತ ಕಂಪ್ಯೂಟರ್ ಆ್ಯಂಟಿ ವೈರಸ್ ತಯಾರಿಕಾ ಸಂಸ್ಥೆ ಮೆಕ್ ಅಫೀ ಸಂಸ್ಥೆಯ ಸಂಶೋಧಕ ಜಾನ್ ಮೆಕ್ ಅಫೀ ಸ್ಪಾನಿಷ್ ಜೈಲಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.
ಜಾನ್ ಮೆಕ್ ಅಫೀ
ಜಾನ್ ಮೆಕ್ ಅಫೀ

ಮ್ಯಾಡ್ರಿಡ್: ಖ್ಯಾತ ಕಂಪ್ಯೂಟರ್ ಆ್ಯಂಟಿ ವೈರಸ್ ತಯಾರಿಕಾ ಸಂಸ್ಥೆ ಮೆಕ್ ಅಫೀ ಸಂಸ್ಥೆಯ ಸಂಶೋಧಕ ಜಾನ್ ಮೆಕ್ ಅಫೀ ಸ್ಪಾನಿಷ್ ಜೈಲಿನಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಟ್ಯಾಕ್ಸ್ ಸಂಬಂಧಿ ಕ್ರಿಮಿನಲ್ ಆರೋಪಗಳ ಮೇರೆಗೆ ವಿಚಾರಣಾಧೀನ ಕೈದಿಯಾಗಿದ್ದ 75 ವರ್ಷದ ಜಾನ್ ಮೆಕ್ ಅಫೀ ಬಾರ್ಸಿಲೋನಾ ಬಳಿಯ ಜೈಲಿನಲ್ಲಿನ ತಮ್ಮ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ಕ್ಯಾಟಲೊನಿಯಾದ ಸುಪೀರಿಯರ್ ಕೋರ್ಟ್‌ನ ವಕ್ತಾರರು ಮಾಹಿತಿ ನೀಡಿದ್ದು, ಮೆಕ್‌ ಅಫೀ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾರ್ಸಿಲೋನಾ ಬಳಿಯ ಜೈಲಿನಲ್ಲಿರುವ ತನ್ನ ಕೋಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜೈಲಿನ ವೈದ್ಯಕೀಯ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮೆಕ್‌ ಅಫಿಯನ್ನು  ಪ್ರಜ್ಞಾಹೀನ ಸ್ಥಿತಿಯಲ್ಲಿ ನೋಡಿದ್ದರು. ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲು ಮುಂದಾದರಾದರೂ ಅಷ್ಟು ಹೊತ್ತಿಗಾಗಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮೆಕ್ ಅಫೀ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಈ ಹಿಂದೆ ಮೆಕ್ ಅಫೀ ಅಮೆರಿಕದಲ್ಲಿ ಕೊಲೆ ಪ್ರಕರಣ ಮತ್ತು ತೆರಿಗೆ ವಂಚನೆ ಸಂಬಂಧಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದರು. ಅಮೆರಿಕದಲ್ಲಿ ಅವರನ್ನು ಬಂಧಿಸುವ ಶಂಕೆ ಮೇರೆಗೆ ಅವರು ಸ್ಪೈನ್ ಗೆ ಪರಾರಿಯಾಗಿದ್ದರು ಎಂದು ಹೇಳಲಾಗಿದೆ. ಆದರೆ ಕಳೆದ ಅಕ್ಟೋಬರ್ ನಲ್ಲಿ ಅವರನ್ನು ಸ್ಪೇನ್ ನಲ್ಲಿ  ಬಂಧಿಸಲಾಗಿತ್ತು. ಬಳಿಕ ನಡೆದ ವಿಚಾರಣೆಯಲ್ಲಿ ಮೆಕ್ ಅಫೀ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಕುರಿತು ನ್ಯಾಯಾಲಯ ತೀರ್ಪು ನೀಡಿತ್ತು ಎನ್ನಲಾಗಿದೆ.

ಕ್ರಿಪ್ಟೋಕರೆನ್ಸಿ ಪ್ರಮೋಟರ್‌ ಆಗಿದ್ದ ಜಾನ್‌ ಮೆಕ್ ಅಫೀ
ಇನ್ನು ಜಗತ್ತಿನ ಹಲವು ದೇಶಗಳಲ್ಲಿ ನಿಷೇಧಕ್ಕೆ ಒಳಗಾಗಿರುವ ಕ್ರಿಪ್ಟೋಕರೆನ್ಸಿ ಪ್ರಮೋಟರ್‌ ಆಗಿದ್ದ ಜಾನ್‌ ಮೆಕ್‌ ಅಫೀ ತೆರಿಗೆ ಸಬಂಧಿತ ಕಾನೂನು ಸಮಸ್ಯೆ ಸುಳಿಯಲ್ಲಿ ಸಿಲುಕಿ ಜೈಲುಪಾಲಾಗಿದ್ದರು ಎಂದು ತಿಳಿದುಬಂದಿದೆ. ಟೆನ್ನೆಸ್ಸಿಯಲ್ಲಿ ಕ್ರಿಪ್ಟೋಕರೆನ್ಸಿ ಮತ್ತು ರಾಜಕೀಯ ವಿಚಾರಗಳ ಕಾರಣದಿಂದಾಗಿ ಮೆಕ್‌ಅಫಿ  ಸ್ಪೇನ್‌ನಲ್ಲಿ ಜೈಲು ಪಾಲಾಗಿದ್ದರು. ಆದರೆ ಸ್ಪೇನ್‌ನ ರಾಷ್ಟ್ರೀಯ ನ್ಯಾಯಾಲಯವು ಸೋಮವಾರ 75 ರ ಹರೆಯದ ಮೆಕ್‌ಅಫಿಯನ್ನು ತೆರಿಗೆ ಸಬಂಧಿತ ಅಪರಾಧದ ವಿಚಾರವಾಗಿ ಯುನೈಟೆಡ್‌ ಸ್ಟೆಟ್ಸ್‌ಗೆ ಹಸ್ತಾಂತರಿಸುವ ಪರವಾಗಿ ತೀರ್ಪು ನೀಡಿತು. 

ನ್ಯಾಯಾಲಯದ ತೀರ್ಪಿನಿಂದಾಗಿ ಆಘಾತಕ್ಕೊಳಗಾಗಿದ್ದ ಮೆಕ್ ಅಫೀ
ಇದು ಜಾನ್‌ ಮೆಕ್‌ಅಫಿಗೆ ಅಘಾತವನ್ನು ಉಂಟುಮಾಡಿದ್ದು, ಇದೇ ಕಾರಣಕ್ಕೆ ಸೂಸೈಡ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನ್ಯಾಯಾಲಯದಿಂದ ಬಂದ ತೀರ್ಪಿನ ಅನ್ವಯ ಯಾವುದೇ ಅಂತಿಮ ಹಸ್ತಾಂತರ ಆದೇಶವು ಸ್ಪ್ಯಾನಿಷ್ ಕ್ಯಾಬಿನೆಟ್ನಿಂದ ಅನುಮೋದನೆ ಪಡೆಯುವ ಅಗತ್ಯವಿರುತ್ತದೆ. ಕಳೆದ ಅಕ್ಟೋಬರ್‌ನಲ್ಲಿ  ಬಾರ್ಸಿಲೋನಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟಿದ್ದ ಮೆಕ್‌ಅಫಿಯನ್ನು ಜೈಲಿನಲ್ಲಿರಿಸಬೇಕೆಂದು ನ್ಯಾಯಾಧೀಶರು ಆ ಸಮಯದಲ್ಲಿ ಆದೇಶಿಸಿದ್ದರು. 

ತೆರಿಗೆ ವಂಚನೆ ಆರೋಪ
ಕ್ರಿಪ್ಟೋಕರೆನ್ಸಿಗಳನ್ನು ಉತ್ತೇಜಿಸುವಾಗ ಆದಾಯವನ್ನು ವರದಿ ಮಾಡಲು ವಿಫಲವಾದ ನಂತರ ಅದೇ ತಿಂಗಳಿನಲ್ಲಿ ಟೆನ್ನೆಸ್ಸೀಯಲ್ಲಿ ಮೆಕ್‌ಅಫೀ ವಿರುದ್ಧ ತೆರಿಗೆ ಸಂಬಂಧಿತ ಕ್ರಿಮಿನಲ್ ಅಪರಾಧದ ಆಧಾರದ ಮೇಲೆ ಬಂದಿಸಲಾಗಿತ್ತು. ಸದ್ಯ ಸ್ಪ್ಯಾನಿಷ್ ಅಧಿಕಾರಿಗಳು ಮೆಕ್‌ಅಫೀ ಸೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com