ಬ್ರಿಟನ್ ಪ್ರವಾಸದಲ್ಲಿರುವ ಜೈಶಂಕರ್ ತಂಡದ ಇಬ್ಬರು ಸದಸ್ಯರಿಗೆ ಕೊರೋನಾ ಸೋಂಕು

ಬ್ರಿಟನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ತಂಡದ ಇಬ್ಬರು ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

Published: 05th May 2021 03:45 PM  |   Last Updated: 05th May 2021 04:32 PM   |  A+A-


Foreign Minister S Jaishankar meets UK Home Secretary Preeti Patel in London, May 4, 2021

ಬ್ರಿಟನ್ ನ ಗೃಹ ಕಾರ್ಯದರ್ಶಿಯೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್

Posted By : Srinivas Rao BV
Source : PTI

ಲಂಡನ್: ಬ್ರಿಟನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ತಂಡದ ಇಬ್ಬರು ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 

ಸ್ವತಃ ಎಸ್ ಜೈಶಂಕರ್ ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು,  ಲಂಡನ್ ನಲ್ಲಿ ತಮ್ಮ ಬಾಕಿ ಕೆಲಸಗಳನ್ನು ವರ್ಚ್ಯುಯಲ್ ಸಭೆಯ ಮೂಲಕವೇ ನಿರ್ವಹಿಸುವುದಾಗಿ ತಿಳಿಸಿದ್ದಾರೆ. "ಇಂದು ನಡೆಯಬೇಕಿರುವ ಜಿ7 ಸಭೆಯಲ್ಲೂ ವರ್ಚ್ಯುಯಲ್ ಮೋಡ್ ನಲ್ಲೇ ಭಾಗವಹಿಸುತ್ತೇನೆ"  ಎಂದು ಜೈಶಂಕರ್ ತಿಳಿಸಿದ್ದಾರೆ. 

ಹಲವು ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜೈಶಂಕರ್ ಅವರೊಂದಿಗಿದ್ದ ಇಬ್ಬರು ಸದಸ್ಯರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. 

ಜಿ 7 ರಾಷ್ಟ್ರಗಳ ವಿದೇಶಾಂಗ ಹಾಗೂ ಅಭಿವೃದ್ಧಿ ಸಚಿವರ ಸಭೆಗಾಗಿ ಬ್ರಿಟನ್ ನ ವಿದೇಶಾಂಗ ಕಾರ್ಯದರ್ಶಿ ಡೋಮಿನಿಕ್ ರಾಬ್ ಅವರ ಆಹ್ವಾನದ ಮೇರೆಗೆ ಮೇ.03 ರಿಂದ 7 ವರೆಗೆ ಜೈಶಂಕರ್ ಬ್ರಿಟನ್ ಪ್ರವಾಸದಲ್ಲಿದ್ದಾರೆ. ರಾಷ್ಟ್ರಗಳ ಸದಸ್ಯರು ಭಾಗವಹಿಸಲಿರುವ ಔಪಚಾರಿಕ ಸಭೆಯಲ್ಲಿ ಜೈಶಂಕರ್ ಭಾಗಿಯಾಗಬೇಕಿತ್ತು. ಬ್ರಿಟನ್ ನ ವಿದೇಶಾಂಗ ಸಚಿವರೊಂದಿಗಿನ ಜೈಶಂಕರ್ ನಡೆಸಬೇಕಿದ್ದ ದ್ವಿಪಕ್ಷೀಯ ಸಭೆಯೂ ಈಗ ವರ್ಚ್ಯುಯಲ್ ಮೋಡ್ ನಲ್ಲಿ ನಡೆಯುವ ಸಾಧ್ಯತೆ ಇದೆ.


Stay up to date on all the latest ಅಂತಾರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp