3 ಗೋಲ್ಡನ್ ಗ್ಲೋಬ್ ಪ್ರಶಸ್ತಿ ಹಿಂದಿರುಗಿಸಿದ ಹಾಲಿವುಡ್ ನಟ ಟಾಮ್ ಕ್ರೂಸ್
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಆಯೋಜಿಸುವ ಎಚ್‌ಎಫ್‌ಪಿಎ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎದ್ದಿರುವ ಹಿನ್ನೆಲೆಯಲ್ಲಿ ಖ್ಯಾತ ನಟ ಟಾಮ್ ಕ್ರೂಸ್ ತಮಗೆ ಬಂದಿದ್ದ ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.
Published: 11th May 2021 05:20 PM | Last Updated: 11th May 2021 05:26 PM | A+A A-

ಟಾಮ್ ಕ್ರೂಸ್
ನ್ಯೂಯಾರ್ಕ್: ಗೋಲ್ಡನ್ ಗ್ಲೋಬ್ ಪ್ರಶಸ್ತಿ ಆಯೋಜಿಸುವ ಎಚ್‌ಎಫ್‌ಪಿಎ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಎದ್ದಿರುವ ಹಿನ್ನೆಲೆಯಲ್ಲಿ ಖ್ಯಾತ ನಟ ಟಾಮ್ ಕ್ರೂಸ್ ತಮಗೆ ಬಂದಿದ್ದ ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ.
ಟಾಮ್ ಕ್ರೂಸ್ ಮಾತ್ರವಲ್ಲ ಇನ್ನೂ ಕೆಲವು ಖ್ಯಾತ ನಟ, ನಟಿಯರು ಸಹ ತಮಗೆ ಬಂದಿದ್ದ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ.
ಗೋಲ್ಡನ್ ಗ್ಲೋಬ್ ಪ್ರಶಸ್ತಿ ಆಯೋಜಿಸುವ ಎಚ್‌ಎಫ್‌ಪಿಎ (ಹಾಲಿವುಡ್ ಫಾರಿನ್ ಪ್ರೆಸ್ ಅಸೋಸಿಯೇಷನ್) ವಿಶ್ವಾಸರ್ತೆಯ ಬಗ್ಗೆ ಪ್ರಶ್ನೆ ಎದ್ದಿರುವ ಕಾರಣ ಟಾಮ್ ಕ್ರೂಸ್, ಬ್ಲಾಕ್ ವಿಡೋ ಖ್ಯಾತಿಯ ಸ್ಕಾರ್ಲೆಟ್ ಜಾನ್‌ಸನ್, ಹಲ್ಕ್ ಖ್ಯಾತಿಯ ಮಾರ್ಕ್ ರಫೆಲೊ ಹಾಗೂ ಇನ್ನೂ ಕೆಲವರು ತಮಗೆ ದೊರಕಿದ್ದ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ.
ಟಾಸ್ ಕ್ರೂಸ್ 1990ರಲ್ಲಿ ಬಿಡುಗಡೆಯಾಗಿದ್ದ 'ಬಾರ್ನ್ ಆನ್ ದಿ ಫೋರ್ತ್ ಆಫ್ ಜುಲೈ' ಮತ್ತು1997ರ 'ಜೆರ್ರಿ ಮ್ಯಾಗೈರ್' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದು, ಇನ್ನು 2000ರ 'ಮ್ಯಾಗ್ನೋಲಿಯಾ' ಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದಿದ್ದರು.