ಭಾರತದಲ್ಲಿ ಸಿಲುಕಿರುವ ತನ್ನ ನಾಗರಿಕರಿಗಾಗಿ ವಿಮಾನ ಸೇವೆ ಪುನರಾರಂಭಿಸಿದ ಆಸ್ಟ್ರೇಲಿಯಾ!

ಭಾರತದಲ್ಲಿ ಕೊರೋನಾ ಪ್ರಕರವಾಗಿ ಹರಡುತ್ತಿದ್ದು ಈ ಭೀಕರ ಸ್ಥಿತಿಯಲ್ಲಿ ಇಲ್ಲಿ ಸಿಲುಕಿರುವ ತನ್ನ ನಾಗರಿಕರಿಗಾಗಿ ಆಸ್ಟ್ರೇಲಿಯಾ ಸರ್ಕಾರವು ಶುಕ್ರವಾರದಿಂದ ವಿಮಾನ ಸೇವೆ ಪುನರಾರಂಭಿಸಿದೆ ಎಂದು ವಿದೇಶಾಂಗ ಸಚಿವ ಮಾರಿಸ್ ಪೇನ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೆಲ್ಬೋರ್ನ್: ಭಾರತದಲ್ಲಿ ಕೊರೋನಾ ಪ್ರಕರವಾಗಿ ಹರಡುತ್ತಿದ್ದು ಈ ಭೀಕರ ಸ್ಥಿತಿಯಲ್ಲಿ ಇಲ್ಲಿ ಸಿಲುಕಿರುವ ತನ್ನ ನಾಗರಿಕರಿಗಾಗಿ ಆಸ್ಟ್ರೇಲಿಯಾ ಸರ್ಕಾರವು ಶುಕ್ರವಾರದಿಂದ ವಿಮಾನ ಸೇವೆ ಪುನರಾರಂಭಿಸಿದೆ ಎಂದು ವಿದೇಶಾಂಗ ಸಚಿವ ಮಾರಿಸ್ ಪೇನ್ ಹೇಳಿದ್ದಾರೆ.

ಶುಕ್ರವಾರ ಸಿಡ್ನಿಯಿಂದ ಹೊರಟ ವಿಮಾನ ನವದೆಹಲಿಯಲ್ಲಿ ಇಳಿದು ಅಲ್ಲಿ ಆಸ್ಟ್ರೇಲಿಯಾ ಪ್ರಮಾಣಿಕರನ್ನು ಹೊತ್ತು ಶನಿವಾರ ಡಾರ್ವಿನ್ ಗೆ ಆಗಮಿಸಲಿದೆ. ಅಲ್ಲದೆ ಈ ವಿಮಾನ ಆಸ್ಟ್ರೇಲಿಯಾದಿಂದ ಜೀವ ರಕ್ಷಕ ಆಮ್ಲಜನಕ ಸಾಧನಗಳನ್ನು ಭಾರತಕ್ಕೆ ಕೊಂಡೊಯ್ದಿದೆ ಎಂದು ಪೇನ್ ಹೇಳಿದ್ದಾರೆ.

ಭಾರತದಲ್ಲಿ ಪತ್ತೆಯಾಗಿರುವ ಕೊರೋನಾ ರೂಪಾಂತರಿ ವೈರಸ್ ಹರಡದಂತೆ ನೋಡಿಕೊಳ್ಳುವ ಸಲುವಾಗಿ ಪ್ರಯಾಣಿಕರನ್ನು ಕಟ್ಟುನಿಟ್ಟಾದ ಸಂಪರ್ಕತಡೆಗೆ ಕಳುಹಿಸಲಾಗುತ್ತದೆ ಎಂದು ಪೇನ್ ಹೇಳಿದರು. ಎಲ್ಲಾ ಪ್ರಯಾಣಿಕರು ಪ್ರಯಾಣಿಸುವ ಮೊದಲು ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಭಾರತದಿಂದ ಮರಳಲು ಪ್ರಯತ್ನಿಸುವ ತನ್ನ ದೇಶದ ಪ್ರಯಾಣಿಕರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 66,000 ಆಸ್ಟ್ರೇಲಿಯಾದ ಡಾಲರ್‌ಗಳ ದಂಡ ಸೇರಿದಂತೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿ ಆಸ್ಟ್ರೇಲಿಯಾ ಸರ್ಕಾರ ಇತ್ತೀಚೆಗೆ ತಾತ್ಕಾಲಿಕ ನಿಷೇಧ ಹೇರಿದ ನಂತರ ಭಾರತದಿಂದ ಆಸ್ಟ್ರೇಲಿಯಾಗೆ ತೆರಳುತ್ತಿರುವ ಮೊದಲ ವಿಮಾನ ಇದಾಗಿದೆ. 

ಈ ತಾತ್ಕಾಲಿಕ ವಿರಾಮದಿಂದ ಇತರ ದೇಶಗಳಲ್ಲಿ ಸಿಲುಕಿರುವ ಆಸ್ಟ್ರೇಲಿಯಾದ ಪ್ರಯಾಣಿಕರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ತುತ್ತಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಇನ್ನು ಕ್ವಾರಂಟೈನ್ ಮೂಲಕ ಮತ್ತಷ್ಟು ವಿಮಾನಗಳ ಏರ್ ಲಿಫ್ಟ್ ಮಾಡಲಾಗುವುದು ಎಂದು ಪೇನ್ ತಿಳಿಸಿದ್ದಾರೆ.

ಭಾರತದಲ್ಲಿ ಸರಾಸರಿಯಂತೆ ದಿನಕ್ಕೆ 3,43,144 ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ. ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 2,40,46,809ಕ್ಕೆ ಏರಿಕೆಯಾಗಿದೆ. ಇನ್ನು ದಿನಕ್ಕೆ 4000 ಸಾವಿರಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದು ಸಾವಿನ ಸಂಖ್ಯೆ 2,62,317ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com