ವಿಶ್ವದಲ್ಲಿ ಮೊಟ್ಟ ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಸಾವು!
ಪ್ರಪಂಚದಲ್ಲಿಯೇ ಮೊಟ್ಟಮೊದಲು ಕೊರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್ ದೇಶದ ವಿಲಿಯಂ ಷೇಕ್ಸ್‌ಪಿಯರ್(81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
Published: 26th May 2021 03:35 PM | Last Updated: 26th May 2021 04:03 PM | A+A A-

ವಿಲಿಯಮ್ ಶೇಕ್ಸ್ ಪಿಯರ್
ಲಂಡನ್: ಪ್ರಪಂಚದಲ್ಲಿಯೇ ಮೊಟ್ಟಮೊದಲು ಕೊರೋನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್ ದೇಶದ ವಿಲಿಯಂ ಷೇಕ್ಸ್‌ಪಿಯರ್(81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಕಳೆದ ವರ್ಷ ಡಿಸೆಂಬರ್ 8 ರಂದು, ಕೋವಿಡ್ -19 ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಶೇಕ್ಸ್‌ಪಿಯರ್ ಪಾತ್ರರಾಗಿದ್ದರು.
ಯೂನಿವರ್ಸಿಟಿ ಆಸ್ಪತ್ರೆ ಕೋವೆಂಟ್ರಿ ಅಂಡ್ ವಾರ್ವಿಕ್‌ಶೈರ್‌ನಲ್ಲಿ ಅವರು ಜರ್ಮನಿಗೆ ಸೇರಿದ ಬಯೋಎನ್‌ಟೆಕ್, ಅಮೆರಿಕಾ ಔಷಧ ಸಂಸ್ಥೆ ಫಿಜರ್ ಜಂಟಿಯಾಗಿ ಅಭಿವೃದ್ದಿ ಪಡಿಸಿದ್ದ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು. ಅನಾರೋಗ್ಯ ಸಮಸ್ಯೆಗಳಿಂದ ಇದೇ ಆಸ್ಪತ್ರೆಗೆ ಸೇರಿದ್ದ ಷೇಕ್ಸ್‌ಪಿಯರ್ ಈ ತಿಂಗಳ 20 ರಂದು ಮೃತಪಟ್ಟರು ಎಂದು ಅವರ ಸ್ನೇಹಿತ ಜೈನ್ ಇನ್ನೆಸ್ ತಿಳಿಸಿದ್ದಾರೆ.
First man to receive Pfizer Covid-19 vaccine in the UK dies of unrelated illness https://t.co/X1IhAVmUoL pic.twitter.com/LmIegxZG8w
— 1 NEWS (@1NewsNZ) May 25, 2021
ಇದೇ ಆಸ್ಪತ್ರೆಯಲ್ಲಿ ಮಾರ್ಗರೇಟ್ ಕೀನನ್(91) ಎಂಬುವವರು ಕೊರೋನಾ ಲಸಿಕೆ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.