ಕ್ಯಾಲಿಫೋರ್ನಿಯಾ ರೈಲು ಯಾರ್ಡ್ ಶೂಟಿಂಗ್: ಇತರರನ್ನು ಕಾಪಾಡಲು ಓಡಾಡ್ತಿದ್ದ ಭಾರತೀಯ ಮೂಲದ ಸಿಖ್ ವ್ಯಕ್ತಿ ಹತ್ಯೆ!

 ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿ ನಡೆದ ಭಯಾನಕ ರೈಲು ಯಾರ್ಡ್ ಶೂಟಿಂಗ್ ನಲ್ಲಿ36 ವರ್ಷದ ಭಾರತೀಯ ಮೂಲದ ಸಿಖ್ ವ್ಯಕ್ತಿ ಸೇರಿದಂತೆ ಎಂಟು ಮಂದಿ ಹತ್ಯೆಯಾಗಿದ್ದಾರೆ ಎಂದು ಗುರುವಾರ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.
ತಪ್ತೇಜ್‌ದೀಪ್ ಸಿಂಗ್,
ತಪ್ತೇಜ್‌ದೀಪ್ ಸಿಂಗ್,

ಲಾಸ್ ಎಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿ ನಡೆದ ಭಯಾನಕ ರೈಲು ಯಾರ್ಡ್ ಶೂಟಿಂಗ್ ನಲ್ಲಿ
36 ವರ್ಷದ ಭಾರತೀಯ ಮೂಲದ ಸಿಖ್ ವ್ಯಕ್ತಿ ಸೇರಿದಂತೆ ಎಂಟು ಮಂದಿ ಹತ್ಯೆಯಾಗಿದ್ದಾರೆ ಎಂದು ಗುರುವಾರ ಮಾಧ್ಯಮಗಳ ವರದಿಯಿಂದ ತಿಳಿದುಬಂದಿದೆ.

ಭಾರತದಲ್ಲಿ ಹುಟ್ಟಿ, ಯೂನಿಯನ್ ಸಿಟಿ ಕ್ಯಾಲಿಫೋರ್ನಿಯಾದಲ್ಲಿ ಬೆಳೆದಿದ್ದ ತಪ್ತೇಜ್‌ದೀಪ್ ಸಿಂಗ್,  ಪತ್ನಿ, ಮೂರು ವರ್ಷದ ಪುತ್ರ ಹಾಗೂ ಒಂದು ವರ್ಷದ ಪುತ್ರಿಯನ್ನು ಅಗಲಿದ್ದಾರೆ.  ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ದು:ಖಿತ ಸಿಖ್ ಸಮುದಾಯ, ತಪ್ರೇಜ್ ದೀಪ್ ಸಿಂಗ್ ನನ್ನು ಸಹಾಯಕ ಮತ್ತು ಕಾಳಜಿಯುಳ್ಳ ವ್ಯಕ್ತಿ ಎಂದು ಬಣ್ಣಿಸಿರುವುದಾಗಿ ಮರ್ಕ್ಯೂರಿ ನ್ಯೂಸ್ ವರದಿ ಮಾಡಿದೆ.

ಸಿಂಗ್ ಹಿರೋ ಎಂದು ವ್ಯಾಲಿ ಸಾರಿಗೆ ಪ್ರಾಧಿಕಾರದ ಸಹೋದ್ಯೋಗಿಗಳು ಹೊಗಳಿದ್ದಾರೆ. ಇದರಲ್ಲಿ ನಿರ್ವಹಣೆ ಕೆಲಸ ಮಾಡುತ್ತಿದ್ದ ಸ್ಯಾಮುಯೆಲ್ ಕಾಸಿಡಿ, ಬುಧವಾರ ತನ್ನ ಎಂಟು ಮಂದಿ ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ವರ್ಷ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭಯಾನಕ ಗುಂಡಿನ ದಾಳಿ ಇದಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ  ತನ್ನ ಗುಂಡಿನಿಂದ ತಾನೇ ಹೊಡೆದುಕೊಂಡು ಕಿಲ್ಲರ್ ಸಾವನ್ನಪ್ಪಿದ್ದಾನೆ. ಸಿಂಗ್ ವ್ಯಾಲಿ  ಸಾರಿಗೆ ಪ್ರಾಧಿಕಾರದಲ್ಲಿ ಒಂಬತ್ತು ವರ್ಷಗಳಿಂದ ಲಘು ರೈಲು ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ವ್ಯಾಲಿ  ಸಾರಿಗೆ ಪ್ರಾಧಿಕಾರದ ಮೆಟ್ಟಿಲುಗಳಲ್ಲಿದ್ದ ಸಿಂಗ್ ಮೇಲೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸಿಂಗ್ ಮತ್ತು ಶೂಟರ್ ಆರಂಭದಲ್ಲಿ ಬೇರೆ ಕಟ್ಟಡಗಳಿದ್ದರು ಆದರೆ, ಇತರರನ್ನು ಕೊಲ್ಲಲು ಹೋಗುತ್ತಿದ್ದ ಹಂತಕ ಮಾರ್ಗ ಮಧ್ಯ ಸಿಕ್ಕ ಸಿಂಗ್ ಅವರನ್ನು ಹತ್ಯೆ ಮಾಡಿರುವ ಸಾಧ್ಯತೆಯಿರುವುದಾಗಿ ಸಿಂಗ್ ಅವರ ಮಾವ ಪಿ. ಜೆ. ಬಾತ್ ಹೇಳಿದ್ದಾರೆ. ಅವರು ಕೂಡಾ ಅಲ್ಲಿಯೇ ಕೆಲಸ ರೈಲು ಆಪರೇಟರ್ ಆಗಿದ್ದಾರೆ.

ಇತರರ ಜೀವ ಉಳಿಸಲು ಆತ ಕಟ್ಟಡ ಸುತ್ತ ಓಡಾಡುತ್ತಿದ್ದ, ಆತನ ಉತ್ತಮ ವ್ಯಕ್ತಿಯಾಗಿದ್ದು, ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತಿದ್ದ ಎಂದು ದಿಲ್ಲಾನ್ ಎಂಬವರು ಹೇಳಿದ್ದಾರೆ. ಗುಂಡಿನ ದಾಳಿ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com