2035 ರೊಳಗೆ ಚೀನಾ 1,000 ಪರಮಾಣು ಸಿಡಿತಲೆ ಸಜ್ಜುಗೊಳಿಸುವ ಸಾಧ್ಯತೆ: ಪೆಂಟಗನ್ ವರದಿ ಎಚ್ಚರಿಕೆ
ಈ ಶತಮಾನದ ಮಧ್ಯದೊಳಗೆ ಅಮೆರಿಕದ ಜಾಗತಿಕ ಪ್ರಾಬಲ್ಯವನ್ನು ಸರಿಗಟ್ಟಲು ಅಥವಾ ಅದರೊಂದಿಗೆ ಸರಿಹೊಂದುವಂತೆ ಮಿಲಿಟರಿ ಬಲವನ್ನು ಅಭಿವೃದ್ಧಿಪಡಿಸಲು ಅಮೆರಿಕಕ್ಕಿಂತ ವೇಗವಾಗಿ ಚೀನಾ ತನ್ನ ಪರಮಾಣು ಶಕ್ತಿಯನ್ನು ವಿಸ್ತರಿಸುತ್ತಿದೆ ಎಂದು ಬುಧವಾರ ಬಿಡುಗಡೆಯಾದ ಪೆಂಟಗನ್ ವರದಿಯಲ್ಲಿ ಹೇಳಲಾಗಿದೆ.
Published: 04th November 2021 02:42 PM | Last Updated: 04th November 2021 03:18 PM | A+A A-

ಚೀನಾ ಮಿಲಿಟರಿ ವಾಹನಗಳ ಪರೇಡ್
ವಾಷಿಂಗ್ಟನ್: ಈ ಶತಮಾನದ ಮಧ್ಯದೊಳಗೆ ಅಮೆರಿಕದ ಜಾಗತಿಕ ಪ್ರಾಬಲ್ಯವನ್ನು ಸರಿಗಟ್ಟಲು ಅಥವಾ ಅದರೊಂದಿಗೆ ಸರಿಹೊಂದುವಂತೆ ಮಿಲಿಟರಿ ಬಲವನ್ನು ಅಭಿವೃದ್ಧಿಪಡಿಸಲು ಅಮೆರಿಕಕ್ಕಿಂತ ವೇಗವಾಗಿ ಚೀನಾ ತನ್ನ ಪರಮಾಣು ಶಕ್ತಿಯನ್ನು ವಿಸ್ತರಿಸುತ್ತಿದೆ ಎಂದು ವರ್ಷದ ಹಿಂದಷ್ಟೇ ಅಧಿಕಾರಿಗಳು ಊಹಿಸಿದ್ದಾಗಿ ಬುಧವಾರ ಬಿಡುಗಡೆಯಾದ ಪೆಂಟಗನ್ ವರದಿಯಲ್ಲಿ ಹೇಳಲಾಗಿದೆ.
ಆರು ವರ್ಷದೊಳಗೆ ಚೀನಾ 700ಕ್ಕೆ ಪರಿಮಾಣು ಸಿಡಿತಲೆಗಳನ್ನು ಹೆಚ್ಚಿಸಲಿದ್ದು, 2030ರೊಳಗೆ 1,000 ಸಿಡಿತಲೆ ಹೊಂದುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಚೀನಾದ ಬಳಿ ಎಷ್ಟು ಯುದ್ದೋಪಕರಣಗಳಿವೆ ಎಂಬುದನ್ನು ವರದಿ ಹೇಳಿಲ್ಲ. ಆದರೆ. ಇವುಗಳ ಸಂಖ್ಯೆ 200 ರಷ್ಟು ಕಡಿಮೆಯಿದ್ದು, ಈ ದಶಕಗಳೊಳಗೆ ಇದು ದುಪ್ಪಟ್ಟು ಆಗುವ ಸಾಧ್ಯತೆಯಿರುವುದಾಗಿ ವರ್ಷದ ಹಿಂದೆಯೇ ಪೆಂಟಗನ್ ಹೇಳಿತ್ತು. ಅಮೆರಿಕ 3,750 ಪರಮಾಣು ಆಯುಧಗಳನ್ನು ಹೊಂದಿದ್ದು, ಅದನ್ನು ಹೆಚ್ಚಿಸುವ ಯೋಜನೆ ಇಲ್ಲ, 2003ರಲ್ಲಿ ಅಮೆರಿಕದಲ್ಲಿ ಒಟ್ಟಾರೇ 10, 000 ಪರಮಾಣು ಆಯುಧಗಳಿತ್ತು.
ಬಿಡೆನ್ ಆಡಳಿತ ತನ್ನ ಪರಮಾಣು ನೀತಿಯನ್ನು ಸಮಗ್ರವಾಗಿ ಪರಾಮರ್ಶೆ ನಡೆಸಿದ್ದು, ಅದು ಚೀನಾದಿಂದ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದನ್ನು ಹೇಳಿಲ್ಲ. ಚೀನಾದೊಂದಿಗೆ ಸಂಘರ್ಷವನ್ನ ವರದಿ ಬಹಿರಂಗವಾಗಿ ಹೇಳಿಲ್ಲ. ಆದರೆ, ಜಲ, ಗಾಳಿ, ಭೂಮಿ, ಸಮುದ್ರ, ಸೈಬರ್ ಸ್ಪೇಸ್ ಸೇರಿದಂತೆ ಎಲ್ಲಾ ಮಾದರಿಯಲ್ಲಿ ಅಮೆರಿಕಕ್ಕೆ ಸವಾಲುವೊಡ್ಡುವಂತೆ ಚೀನಾ ತನ್ನ ಮಿಲಿಟರಿಗೆ ಕರೆ ನೀಡಿದೆ.
ಚೀನಾದ ಈ ಹೇಳಿಕೆ ಹಿನ್ನೆಲೆಯಲ್ಲಿ ತೈವಾನ್ ಸ್ಥಿತಗತಿಗೆ ಸೇರಿದಂತೆ ಚೀನಾದ ಹಿತಾಸಕ್ತಿಯು ನಮ್ಮ ಆತಂಕವನ್ನು ಹೆಚ್ಚಿಸಿದೆ ಎಂದು ಅಮೆರಿಕ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ. ತೈವಾನ್ ತಮ್ಮ ಪ್ರದೇಶ ಎಂದು ಚೀನಾ ಹೇಳುತ್ತಿದೆ. ಇದಕ್ಕಾಗಿ ತನ್ನ ಭೂ, ಸಮುದ್ರ ಮೂಲಕ ಪರಮಾಣು ಶಕ್ತಿಯನ್ನು ವೃದ್ಧಿಸಿಕೊಂಡಿರುವ ಚೀನಾ, ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳುತ್ತಿರುವ ಚೀನಾ, ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಂದಿದೆ.