ಶ್ವೇತ ಭವನದಲ್ಲಿ ದೀಪ ಬೆಳಗುವ ಮೂಲಕ ದೀಪಾವಳಿ ಶುಭಾಶಯ ಕೋರಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಕೊರೊನಾದಿಂದ ನಲುಗಿರುವ ಜಗತ್ತಿಗೆ ಈ ದೀಪಾವಳಿ ದುಷ್ಟಶಕ್ತಿಗಳ ವಿರುದ್ಧದ ಹೋರಾಟಕ್ಕೆ ಶಕ್ತಿತುಂಬಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
ಅಮೆರಿಕಾಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
ಅಮೆರಿಕಾಧ್ಯಕ್ಷ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ವಾಷಿಂಗ್ಟನ್: ಶ್ವೇತ ಭವನದಲ್ಲಿ ದೀಪಾವಳಿ ಪ್ರಯುಕ್ತ ದೀಪ ಬೆಳಗುತ್ತಿರುವ ಫೋಟೋವನ್ನು ಅಮೆರಿಕಾಧ್ಯಕ್ಷ ಜೊ ಬೈಡನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪತ್ನಿ ಜಿಲ್ ಬೈಡನ್ ಜೊತೆಗೂಡಿ ದೀಪ ಬೆಳಗುತ್ತಿರುವ ಫೋಟೊ ವೈರಲ್ ಆಗಿದೆ. 

ಜೊ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಜಗತ್ತಿಗೇ ದೀಪಾವಳಿ ಶುಭಾಶಯ ಕೋರಿದ್ದಾರೆ. ಕೊರೊನಾದಿಂದ ನಲುಗಿರುವ ಜಗತ್ತಿಗೆ ಈ ದೀಪಾವಳಿ ದುಷ್ಟಶಕ್ತಿಗಳ ವಿರುದ್ಧದ ಹೋರಾಟಕ್ಕೆ ಶಕ್ತಿತುಂಬಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಜಗತ್ತಿನಾದ್ಯಂತ ಇರುವ ಹಿಂದೂಗಳು, ಸಿಕ್ಖರು, ಬೌದ್ಧರು, ಜೈನರು ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ ಎಂದು ಉಲ್ಲೇಖಿಸಿ ಬೈಡನ್ ಶುಭ ಕೋರಿದ್ದಾರೆ. ಕಮಲಾ ಹ್ಯಾರಿಸ್ ವಿಡಿಯೊ ಸಂದೇಶದ ಮೂಲಕ ದೀಪಾವಳಿ ಆಚರಿಸುತ್ತಿರುವ ಅಮೆರಿಕ ಹಾಗೂ ಭಾರತವಾಸಿಗಳಿಗೆ ಶುಭ ಕೋರಿದ್ದಾರೆ. 

Related Article

ಪ್ರಾದೇಶಿಕ ಹಕ್ಕುಗಳನ್ನು ಒತ್ತಿಹೇಳಲು ಚೀನಾ 'ಒತ್ತಡ ಮತ್ತು ಯುದ್ಧತಂತ್ರದ ಕ್ರಮ' ಅನುಸರಿಸುತ್ತಿದೆ: ಅಮೆರಿಕ

ಅಮೆರಿಕ ಡಲ್ಲಾಸ್ ಅಂತರಾಷ್ಟ್ರೀಯ ಚಿತ್ರೋತ್ಸವ: ಕುಮಾರ್ ಗೋವಿಂದ್ 'ಅತ್ಯುತ್ತಮ ನಟ'

ಜಾರ್ಜಿಯಾದಲ್ಲಿ ಅಧಿಕೃತವಾಗಿ ನವೆಂಬರ್ 1 ರಾಜ್ಯೋತ್ಸವ ದಿನ ಆಚರಣೆ: ಅಮೆರಿಕದಲ್ಲಿ ಮೊಳಗಿದ ಕನ್ನಡ ಕಹಳೆ

ಅಮೆರಿಕಾದಲ್ಲಿ ಎಲ್ ಜಿ ಬಿ ಟಿ ಸಮುದಾಯಕ್ಕೆ ಮೊದಲ 'ಎಕ್ಸ್‌' ಜೆಂಡರ್‌ ಪಾಸ್‌ ಪೋರ್ಟ್‌ ಜಾರಿ

ಅಮೆರಿಕಾದಲ್ಲಿ ಅಕ್ಟೋಬರ್ ತಿಂಗಳನ್ನು ಹಿಂದೂ ಪಾರಂಪರಿಕ ಮಾಸವನ್ನಾಗಿ ಆಚರಣೆ

ಕೈಲಾಗದ ಪ್ರಯಾಣಿಕರ ಸಮ್ಮುಖದಲ್ಲೇ ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರ: ಅಮೆರಿಕದಲ್ಲಿ ನಡೆದ ಮಾನಗೇಡಿ ಘಟನೆ

ಅಮೆರಿಕ, ಚೀನಾ, ಭಾರತದಂತಹ ದೈತ್ಯ ರಾಷ್ಟ್ರಗಳನ್ನೇ ಹಿಂದಿಕ್ಕಿ ಶೇ.99ರಷ್ಟು ಮಂದಿಗೆ ಲಸಿಕೆ ನೀಡುವಲ್ಲಿ ಈ ಪುಟ್ಟರಾಷ್ಟ್ರ ಯಶಸ್ವಿ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com