ದಲೈ ಲಾಮ ಜೊತೆ ಮಾತುಕತೆಗೆ ಸಿದ್ಧ; ಆದರೆ ಟಿಬೆಟ್ ವಿಷಯವಾಗಿ ಅಲ್ಲ: ಚೀನಾ
ಬೌದ್ಧ ಧರ್ಮಗುರು ದಲೈ ಲಾಮ ಜೊತೆಗೆ ಮಾತುಕತೆಗೆ ಸಿದ್ಧ ಆದರೆ ಅದು ಅವರ ವೈಯಕ್ತಿಕ ಭವಿಷ್ಯದ ವಿಷಯವಾಗಿ ಮಾತ್ರ ಆಗಿರಲಿದ್ದು, ಟಿಬೆಟ್ ಬಗ್ಗೆ ಅಲ್ಲ ಎಂದು ಚೀನಾ ಹೇಳಿದೆ.
Published: 11th November 2021 02:50 AM | Last Updated: 11th January 2023 11:44 AM | A+A A-

ದಲೈ ಲಾಮ
ಬೀಜಿಂಗ್: ಬೌದ್ಧ ಧರ್ಮಗುರು ದಲೈ ಲಾಮ ಜೊತೆಗೆ ಮಾತುಕತೆಗೆ ಸಿದ್ಧ ಆದರೆ ಅದು ಅವರ ವೈಯಕ್ತಿಕ ಭವಿಷ್ಯದ ವಿಷಯವಾಗಿ ಮಾತ್ರ ಆಗಿರಲಿದ್ದು, ಟಿಬೆಟ್ ಬಗ್ಗೆ ಅಲ್ಲ ಎಂದು ಚೀನಾ ಹೇಳಿದೆ.
ಇದಕ್ಕೂ ಮುನ್ನ ಟೋಕಿಯೋದಿಂದ ಬಂದಿದ್ದ ವರದಿ ದಲೈ ಲಾಮ ಅವರು ಟೋಕಿಯೋ ವಿದೇಶಿ ಕರೆಸ್ಪಾಂಡೆಂಟ್ಸ್ ಕ್ಲಬ್ ನಿಂದ ಆಯೋಜಿಸಲಾಗಿದ್ದ ಆನ್ ಲೈನ್ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ್ದ ದಲೈ ಲಾಮ, ನಾನು ಭಾರತದಲ್ಲೇ ಶಾಂತಿಯುತವಾಗಿರುವುದಕ್ಕೆ ಬಯಸುತ್ತೇನೆ ಎಂದು ಹೇಳಿ ಭಾರತವನ್ನು ಧಾರ್ಮಿಕ ಸೌಹಾರ್ದತೆಯ ಕೇಂದ್ರ ಎಂದು ಹೇಳಿದ್ದರು.
86 ವರ್ಷದ ಟಿಬೆಟ್ ನ ಬೌದ್ಧ ಗುರುಗಳು ತಮಗೆ ಷಿ ಜಿನ್ಪಿಂಗ್ ಅವರನ್ನು ಭೇಟಿ ಮಾಡುವ ಯಾವುದೇ ಉದ್ದೇಶವೂ ಇಲ್ಲ ಎಂದು ಹೇಳಿದ್ದು, ತಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದಕ್ಕಾಗಿ ಟಿಬೆಟ್ ಗೆ ಭೇಟಿ ನೀಡಬೇಕೆಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಇನ್ನು ಷಿ ಜಿನ್ಪಿಂಗ್ ಮೂರನೇ ಬಾರಿಗೆ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯುವ ಯೋಜನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ದಲೈ ಲಾಮ ನಿರಾಕರಿಸಿದ್ದಾರೆ.
ಚೀನಾದ ಕಮ್ಯುನಿಸ್ಟ್ ನಾಯಕರಿಗೆ ವಿವಿಧ ಸಂಸ್ಕೃತಿಗಳ ವೈವಿಧ್ಯತೆ ಅರ್ಥವಾಗುವುದಿಲ್ಲ. ವಾಸ್ತವದಲ್ಲಿ ಅತಿಯಾದ ನಿಯಂತ್ರಣ ಜನರಿಗೆ ಮುಳುವಾಗಲಿದೆ" ಎಂದು ದಲೈ ಲಾಮ ಎಚ್ಚರಿಸಿದ್ದಾರೆ.
ಚೀನಾ ವಿದೇಶಾಂಗ ಸಚಿವರಿಗೆ ದಲೈ ಲಾಮ ಹೇಳಿಕೆ ಬಗ್ಗೆ ಹಾಗೂ ದಲೈ ಲಾಮ ಅವರಿಗೆ ಟಿಬೆಟ್ ಗೆ ಭೇಟಿ ನೀಡುವುಕ್ಕೆ ಚೀನಾ ಅನುಮತಿ ನೀಡಲಿದೆಯೇ? ಎಂಬ ಪ್ರಶ್ನೆ ಕೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ "ಬೌದ್ಧ ಧರ್ಮಗುರು ದಲೈ ಲಾಮ ಜೊತೆಗೆ ಮಾತುಕತೆಗೆ ಚೀನಾ ಸಿದ್ಧ ಆದರೆ ಅದು ಅವರ ವೈಯಕ್ತಿಕ ಭವಿಷ್ಯದ ವಿಷಯವಾಗಿ ಮಾತ್ರ ಆಗಿರಲಿದ್ದು, ಟಿಬೆಟ್ ಬಗ್ಗೆ ಅಲ್ಲ" ಎಂದು ಸಷ್ಟಪಡಿಸಿದ್ದಾರೆ.