ಗಲ್ವಾನ್‌ ಸಂಘರ್ಷ: ಭಾರತೀಯ ಯೋಧರಿಂದ ಹತರಾದ ಚೀನಿ ಯೋಧರ ಸ್ಮಾರಕದ ಫೋಟೋ ತೆಗೆದವನಿಗೆ 7 ತಿಂಗಳ ಜೈಲು ಶಿಕ್ಷೆ

ಗಲ್ವಾನ್ ವ್ಯಾಲಿಯಲ್ಲಿ ಭಾರತೀಯರಿಂದ ಚೀನೀ ಸೈನಿಕರು ಹತರಾಗಿದ್ದರು. ಆದರೆ, ಚೀನಾ ಕಮ್ಯೂನಿಸ್ಟ್ ಸರ್ಕಾರ, ನಮ್ಮ ಯೋಧರು ಸತ್ತೇ ಇಲ್ಲ ಅಂತಾ ಸುಳ್ಳು ಹೇಳಿತ್ತು. ಆದರೆ ಕೆಲವು ತಿಂಗಳ ಬಳಿಕ ಸ್ಮಾರಕದ ಫೋಟೋವನ್ನು ಚೀನಾ ಸರ್ಕಾರ ಬಿಡುಗಡೆ ಮಾಡಿ ಹತರಾದ ನಾಲ್ವರು ಯೋಧರಿಗೆ ಗೌರವ ಸಲ್ಲಿಸಿತ್ತು.
ಚೀನಾ ಬ್ಲಾಗರ
ಚೀನಾ ಬ್ಲಾಗರ

ಬೀಜಿಂಗ್: ಗಲ್ವಾನ್ ವ್ಯಾಲಿಯಲ್ಲಿ ಭಾರತೀಯರಿಂದ ಚೀನೀ ಸೈನಿಕರು ಹತರಾಗಿದ್ದರು. ಆದರೆ, ಚೀನಾ ಕಮ್ಯೂನಿಸ್ಟ್ ಸರ್ಕಾರ, ನಮ್ಮ ಯೋಧರು ಸತ್ತೇ ಇಲ್ಲ ಅಂತಾ ಸುಳ್ಳು ಹೇಳಿತ್ತು. ಆದರೆ ಕೆಲವು ತಿಂಗಳ ಬಳಿಕ ಸ್ಮಾರಕದ ಫೋಟೋವನ್ನು ಚೀನಾ ಸರ್ಕಾರ ಬಿಡುಗಡೆ ಮಾಡಿ ಹತರಾದ ನಾಲ್ವರು ಯೋಧರಿಗೆ ಗೌರವ ಸಲ್ಲಿಸಿತ್ತು. 

ಈಗ ಗಲ್ವಾನ್ ಕಣಿವೆಯಲ್ಲಿ ಭಾರತೀಯರ ಕೈಯಿಂದ ಹತ್ಯೆಯಾದ ಚೀನಿ ಯೋಧರ ಬಗ್ಗೆ ಮತ್ತೊಂದು ಸಾಕ್ಷಿ ದೊರೆತಿದೆ. ಅದೇನೆಂದರೆ ಹತ್ಯೆಯಾದ ಚೀನಿ ಯೋಧರ ಸ್ಮಾರಕದ ಫೋಟೋ ತೆಗೆದವನ ಮೇಲೆ ಚೀನಾ ಸರ್ಕಾರ ತನ್ನ ಪ್ರತಾಪ ತೋರಿರುವ ವಿಚಾರ ಬೆಳಕಿಗೆ ಬಂದಿದೆ.

ಆಗಿದ್ದೇನೆಂದರೆ, ಚೀನಾದ ಕಾರಕೋರಂ ಹಿಲ್ಸ್ ಪ್ರದೇಶದಲ್ಲಿರುವ ಚೀನಿ ಯೋಧರ ಸ್ಮಾರಕಕ್ಕೆ ಜುಲೈ 15 ರಂದು ಬ್ಲಾಗರ್ ಲಿ ಕಿಕ್ಸಿಯನ್ ಎಂಬಾತ ಭೇಟಿ ಕೊಟ್ಟಿದ್ದನು. ಈ ವೇಳೆ ಸ್ಮಾರಕದ ಫೋಟೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ ಲೋಡ್ ಮಾಡಿದ್ದನು. ನಂತರ ಲಿ ಕಿಕ್ಸಿಯಾನ್ ಅವರ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿದ್ದವು. ನಂತರ ಜುಲೈ 22 ರಂದು ಈ ಬಗ್ಗೆ ತನಿಖೆಗೆ ಆದೇಶ ನೀಡಲಾಯಿತು. ಇದೀಗ ಆತನಿಗೆ ಏಳು ತಿಂಗಳ ಜೈಲು ಶಿಕ್ಷೆ ವಿಧಿಸಿ ಅಲ್ಲಿನ ನ್ಯಾಯಾಲಯ ಆದೇಶ ನೀಡಿದೆ.

ಟ್ರಾವೆಲ್ ಬ್ಲಾಗರ್ ಗೆ 7 ತಿಂಗಳ ಜೈಲು ಶಿಕ್ಷೆ ವಿಧಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಅಧಿಕಾರಿಗಳು, ಚೀನಿ ಸೈನಿಕರ ಸ್ಮಾರಕದ ಫೋಟೋ ತೆಗೆದು ಟ್ರಾವೆಲ್ ಬ್ಲಾಗರ್ ಹತರಾದ ಯೋಧರ ಗೌರವಕ್ಕೆ ದಕ್ಕೆ ತಂದಿದ್ದಾನೆ ಅಂತಾ ಆರೋಪಿಸಿದೆ. ವಾಯುವ್ಯ ಚೀನಾದ ಕ್ಸಿನ್ ಜಿಯಾಂಗ್ ಉಯಿಘರ್ ಪ್ರದೇಶದ ಪಿಶಾನ್ ಕೌಂಟಿಯ ಸ್ಥಳೀಯ ನ್ಯಾಯಾಲಯ ಈ ಶಿಕ್ಷೆ ವಿಧಿಸಿದೆ. 

ಟ್ರಾವೆಲ್ ಬ್ಲಾಗರ್ ಗೆ 7 ತಿಂಗಳ ಶಿಕ್ಷೆಯ ಜೊತೆಗೆ 10 ದಿನಗಳಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಚೀನಿ ಕೋರ್ಟ್ ಆದೇಶಿಸಿದೆ. ಆದರೆ, ತಾನೊಬ್ಬ ನಿರಪರಾಧಿ ಅಂತಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯನಾಗಿರುವ ಟ್ರಾವೆಲ್ ಬ್ಲಾಗರ್ ಲಿ ಕಿಕ್ಸಿಯಾನ್ ಘೋಷಿಸಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com