ಚೀನಾದೊಂದಿಗಿನ ಸಂಘರ್ಷ: ತೈವಾನ್ ನಿಂದ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳ ನಿಯೋಜನೆ

ಚೀನಾದೊಂದಿಗೆ ಸಂಘರ್ಷ, ಶೀತಲ ಸಮರ ಎದುರಿಸುತ್ತಿರುವ ತೈವಾನ್, ತನ್ನ ವಾಯುಪಡೆಗೆ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳನ್ನು ನಿಯೋಜನೆ ಮಾಡಿದ್ದು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. 
ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳನ್ನು ತೈವಾನ್ ವಾಯುಪಡೆಗೆ ಲೋಕಾರ್ಪಣೆ ಮಾಡಿದ ಅಧ್ಯಕ್ಷ ತ್ಸೈ ಇಂಗ್-ವೆನ್
ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳನ್ನು ತೈವಾನ್ ವಾಯುಪಡೆಗೆ ಲೋಕಾರ್ಪಣೆ ಮಾಡಿದ ಅಧ್ಯಕ್ಷ ತ್ಸೈ ಇಂಗ್-ವೆನ್

ತೈವಾನ್: ಚೀನಾದೊಂದಿಗೆ ಸಂಘರ್ಷ, ಶೀತಲ ಸಮರ ಎದುರಿಸುತ್ತಿರುವ ತೈವಾನ್, ತನ್ನ ವಾಯುಪಡೆಗೆ ಅತ್ಯಾಧುನಿಕ ಎಫ್-16 ಫೈಟರ್ ಜೆಟ್ ಗಳನ್ನು ನಿಯೋಜನೆ ಮಾಡಿದ್ದು ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ. 

ಚೀನಾ ತೈವಾನ್ ದ್ವೀಪವನ್ನು ತನ್ನ ಪ್ರಾಂತ್ಯ ಎಂದು ಹಕ್ಕು ಪ್ರತಿಪಾದನೆ ಮಾಡುತ್ತಿದ್ದು ತೈವಾನ್ ಚೀನಾದ ಅಪಾಯವನ್ನು ಎದುರಿಸುತ್ತಿದೆ. 

ತೈವಾನ್ ನ ಅಧ್ಯಕ್ಷ ತ್ಸೈ ಇಂಗ್-ವೆನ್ 64 ಅಪ್ ಗ್ರೇಡೆಡ್ ಎಫ್-16 ಫೈಟರ್ ಜೆಟ್ ಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸಿದ್ದು, ತೈವಾನ್ ಬಳಿ ಇರುವ 141 ಎಫ್-16 ಎ/ಬಿ ಜೆಟ್ ಗಳನ್ನು ಈ ಹೊಸ ಯುದ್ಧ ವಿಮಾನಗಳು ಪ್ರತಿನಿಧಿಸಲಿವೆ.  ಎಫ್-16 ಎ/ಬಿ ಜೆಟ್ 1990 ರ ಅವಧಿಯದ್ದಾಗಿದ್ದು, 2023 ರ ವೇಳೆಗೆ ಸೇವೆಯಿಂದ ಸಂಪೂರ್ಣವಾಗಿ ವಿರಾಮ ನೀಡಲಾಗುತ್ತದೆ. 

ಅಪ್ ಗ್ರೇಡ್ ಆಗಿರುವ ಯೋಜನೆ ತೈವಾನ್ ಹಾಗೂ ಅಮೆರಿಕದ ರಕ್ಷಣಾ ವಲಯದ ನಡುವಿನ ಸಮನ್ವಯಕ್ಕೆ ಸಾಕ್ಷಿಯಾಗಿದೆ ಎಂದು ತೈವಾನ್ ನ ಅಧ್ಯಕ್ಷ ತ್ಸೈ ಇಂಗ್-ವೆನ್ ಹೇಳಿದ್ದಾರೆ. 

ತೈವಾನ್ ವಿಷಯವಾಗಿ ಅಮೆರಿಕ-ಚೀನಾ ಸಂಬಂಧವೂ ಹದಗೆಟ್ಟಿದೆ. ಇತ್ತೀಚೆಗಷ್ಟೇ ನಡೆದ ಅಮೆರಿಕ ಅಧ್ಯಕ್ಷ ಜೋ ಬೈಡನ್-ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ನಡುವಿನ ವರ್ಚ್ಯುಯಲ್ ಸಭೆಯಲ್ಲಿ ಚೀನಾ ಅಧ್ಯಕ್ಷರು ಇದೇ ವಿಷಯವಾಗಿ ಅಮೆರಿಕಾಗೆ ಎಚ್ಚರಿಕೆಯನ್ನೂ ನೀಡಿ ಬೆಂಕಿಯ ಜೊತೆ ಸರಸವಾಡಬೇಡಿ ಎಂದು ಹೇಳಿದ್ದೂ ವರದಿಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com