ಜೂಲಿ ಅನ್ನೆ ಜೆಂಟರ್
ವಿದೇಶ
ಆಸ್ಪತ್ರೆಗೆ ಸೈಕಲ್ನಲ್ಲಿ ಬಂದು ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್ ಸಂಸದೆ!
ನ್ಯೂಜಿಲೆಂಡ್ ನ ಗ್ರೀನ್ನಲ್ಲಿ ಸಂಸದೆಯೊಬ್ಬರು ಸೈಕಲ್ ಮೂಲಕ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ್ದು, ಇದೀಗ ಅವರು ನೆಟಿಜನ್ ಗಳ ಗಮನ ಸೆಳೆದಿದ್ದಾರೆ.
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನ ಗ್ರೀನ್ನಲ್ಲಿ ಸಂಸದೆಯೊಬ್ಬರು ಸೈಕಲ್ ಮೂಲಕ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ್ದು, ಇದೀಗ ಅವರು ನೆಟಿಜನ್ ಗಳ ಗಮನ ಸೆಳೆದಿದ್ದಾರೆ.
ಸಂಸದೆ ಜೂಲಿ ಅನ್ನೆ ಜೆಂಟರ್ ಈ ಹಿಂದೆ ತಮ್ಮ ಮೊದಲ ಮಗುವಿನ ಜನನದ ಸಮಯದಲ್ಲಿ ಇದೇ ರೀತಿ ಮಾಡಿದ್ದರು. ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ಜೆಂಟರ್ ಪೋಸ್ಟ್ ಮಾಡಿದ್ದಾರೆ.
ಭಾನುವಾರ ಮುಂಜಾನೆ 3 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಸೈಕಲ್ ಹೊಡೆದುಕೊಂಡು ಬಂದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ