
ನಟಿ ಯೂಲಿಯಾ ಪೆರೆಸಿಲ್ಡ್, ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್
ಬೈಕೋನೂರ್: ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾವೊಂದರ ಚಿತ್ರೀಕರಣಕ್ಕೆ ರೋಸ್ಕೋಸ್ಮೀಸ್ ಅನುಮತಿ ನೀಡಿದೆ.
ನಟಿ ಯೂಲಿಯಾ ಪೆರೆಸಿಲ್ಡ್, ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ಮಂಗಳವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ ಎಂದು ರಷ್ಯಾದ ರಾಜ್ಯ ಬಾಹ್ಯಾಕಾಶ ನಿಗಮ ರೋಸ್ಕೋಸ್ಮೋಸ್ ತಿಳಿಸಿದೆ.
ಮುಖ್ಯ ಮತ್ತು ಬ್ಯಾಕಪ್ ಸಿಬ್ಬಂದಿಯನ್ನು ಅನುಮೋದಿಸಲಾಗಿದೆ. ರೋಸ್ಕೋಸ್ಮೋಸ್ ಮತ್ತು ರಷ್ಯಾದ ಚಾನೆಲ್ ಒನ್ ಕಳೆದ ನವೆಂಬರ್‌ನಲ್ಲಿ ಬಾಹ್ಯಾಕಾಶದಲ್ಲಿ ಚಲನಚಿತ್ರವನ್ನು ನಿರ್ಮಿಸುವ ಯೋಜನೆಯನ್ನು ಅನಾವರಣಗೊಳಿಸಿತು.
ನಟಿ ಯೂಲಿಯಾ ಪೆರೆಸಿಲ್ಡ್, ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ನಾಳೆ ಅ. 5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ.
ರಷ್ಯಾದ ಗಗನಯಾತ್ರಿ ಆಂಟನ್ ಶಕಾಪ್ಲೆರೋವ್, ಚಲನಚಿತ್ರ ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ನಟಿ ಯೂಲಿಯಾ ಪೆರೆಸಿಲ್ಡ್ ಜೊತೆಗಿನ ಸೊಯುಜ್ ಎಂಎಸ್-19 ಬಾಹ್ಯಾಕಾಶ ನೌಕೆಯನ್ನು ಅಕ್ಟೋಬರ್ 5 ರಂದು ಉಡಾವಣೆ ಮಾಡಲಾಗುವುದು. ಶಿಪೆಂಕೊ ಮತ್ತು ಪೆರೆಸಿಲ್ಡ್ ಬಾಹ್ಯಾಕಾಶದಲ್ಲಿ "ಚಾಲೆಂಜ್" ಚಿತ್ರೀಕರಣ ನಡೆಸಲಿದ್ದಾರೆ. ಅಕ್ಟೋಬರ್ 17 ರಂದು ಗಗನಯಾತ್ರಿ ಒಲೆಗ್ ನೊವಿಟ್ಸ್ಕಿಯೊಂದಿಗೆ ಸೋಯುಜ್ ಎಂಎಸ್-18 ಮೂಲಕ ಭೂಮಿಗೆ ಹಿಂತಿರುಗಲಿದ್ದಾರೆ.