ಕಂದಹಾರ್ ನಲ್ಲಿ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬರ್ ದಾಳಿ: 33 ಜನರ ಸಾವು

ಅಫ್ಘಾನಿಸ್ತಾನದ ಕಂದಹಾರ್ ನ ಶಿಯಾ ಮಸೀದಿಯೊಂದರಲ್ಲಿ  ಇಂದು ನಡೆದ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 33 ಜನರು ಬಲಿಯಾಗಿದ್ದು, 74 ಜನರು ಗಾಯಗೊಂಡಿರುವುದಾಗಿ ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಆತ್ಮಾಹುತಿ ಬಾಂಬರ್ ದಾಳಿಯಲ್ಲಿ ಅಸುನೀಗಿದವರು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸಿಬ್ಬಂದಿ
ಆತ್ಮಾಹುತಿ ಬಾಂಬರ್ ದಾಳಿಯಲ್ಲಿ ಅಸುನೀಗಿದವರು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸಿಬ್ಬಂದಿ

ಕಂದಹಾರ್: ಅಫ್ಘಾನಿಸ್ತಾನದ ಕಂದಹಾರ್ ನ ಶಿಯಾ ಮಸೀದಿಯೊಂದರಲ್ಲಿ  ಇಂದು ನಡೆದ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ 33 ಜನರು ಬಲಿಯಾಗಿದ್ದು, 74 ಜನರು ಗಾಯಗೊಂಡಿರುವುದಾಗಿ ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಕುಂದುಜ್ ನಲ್ಲಿ  ಶಿಯಾ ಮಸೀದಿ ಮೇಲೆ  ನಡೆದಿದ್ದ ದಾಳಿಯಲ್ಲಿ ನೂರಾರು ಜನರು ಅಸುನೀಗಿದ್ದರು. ಇಸ್ಲಾಮಿಕ್ ಸ್ಟೇಟ್ ಗ್ರೂಪ್ ಈ ದಾಳಿಯ ಹೊಣೆ ಹೊತ್ತಿಕೊಂಡಿತ್ತು. ಈ ದುರ್ಘಟನೆ ಮಾಸುವ ಮುನ್ನವೇ  ದಕ್ಷಿಣ ಪ್ರಾಂತ್ಯದ ಕಂದಹಾರ್ ನಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸುವ ವೇಳೆ ಈ ದಾಳಿ ನಡೆದಿದೆ. ಆದರೆ, ಈವರೆಗೂ ಯಾರು ಕೂಡಾ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

ಮಸೀದಿಯೊಳಗಿದ್ದ ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ತನಿಖೆಯನ್ನು ನಡೆಸುತ್ತಿರುವುದಾಗಿ ಸ್ಥಳೀಯ ತಾಲಿಬಾನ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎಎಫ್ ಪಿ ವರದಿ ಮಾಡಿದೆ.

ಈವರೆಗೂ 33 ಮೃತದೇಹಗಳು ಹಾಗೂ 74 ಗಾಯಾಳುಗಳನ್ನು ನಮ್ಮ ಆಸ್ಪತ್ರೆಗೆ ತರಲಾಗಿದೆ ಎಂದು ನಗರದ ಸೆಂಟ್ರಲ್ ಮಿರ್ವೈಸ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದ್ದಾರೆ. ಸಾವಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ತುರ್ತಾಗಿ ರಕ್ತದ ಅಗತ್ಯವಿದೆ. ಇದನ್ನು ರಕ್ತದಾನಿಗಳಿಗೆ ತಿಳಿಸುವಂತೆ ಎಲ್ಲಾ ಸ್ಥಳೀಯ ಮಾಧ್ಯಮಗಳಿಗೆ ಹೇಳಿರುವುದಾಗಿ ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com