6 ತಿಂಗಳಿನಿಂದ ಹೊಟ್ಟೆಯಲ್ಲಿ ಫೋನ್: ಮೊಬೈಲ್ ನುಂಗಿದವನ ಕಥೆ ಕೇಳಿ ವೈದ್ಯರಿಗೆ ಶಾಕ್!

ಮೊಬೈಲ್ ನುಂಗಿ ವ್ಯಕ್ತಿಯೊಬ್ಬ ಪೇಚಾಡಿರುವ ಘಟನೆ ಕೈರೋದಲ್ಲಿ ನಡೆದಿದೆ. ಫೋನ್ ನುಂಗಿದವನು ಹೊಟ್ಟೆ ನೋವು ತಡೆಯೋಕಾಗದೆ ಆಸ್ಪತ್ರೆಗೆ ತೆರಳಿದಾಗ ಈ ಅಚ್ಚರಿಯ ವಿಚಾರ ಬೆಳಕಿಗ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಈಜಿಪ್ಟ್: ಮೊಬೈಲ್ ನುಂಗಿ ವ್ಯಕ್ತಿಯೊಬ್ಬ ಪೇಚಾಡಿರುವ ಘಟನೆ ಕೈರೋದಲ್ಲಿ ನಡೆದಿದೆ. ಫೋನ್ ನುಂಗಿದವನು ಹೊಟ್ಟೆ ನೋವು ತಡೆಯೋಕಾಗದೆ ಆಸ್ಪತ್ರೆಗೆ ತೆರಳಿದಾಗ ಈ ಅಚ್ಚರಿಯ ವಿಚಾರ ಬೆಳಕಿಗ ಬಂದಿದೆ.

ಈಜಿಪ್ಟ್ ನ 33 ವರ್ಷದ ವ್ಯಕ್ತಿ, ಮೊಬೈಲ್ ನುಂಗಿದ್ರೆ ಏನಾಗುತ್ತೆ ನೋಡೋಣ. ಹಾಗೂ ಅದು ದೇಹದಿಂದ ತಾನಾಗಿಯೇ ಹೊರಗೆ ಬರುತ್ತೆ ಅಂದುಕೊಂಡಿದ್ದನಂತೆ. ಆದ್ರೆ ಫೋನ್ ಗುಳುಂ ಸ್ವಾಹ ಮಾಡಿದ್ಮೇಲೆ ಕುಡಿಯಲು ಹಾಗೂ ಊಟ ಮಾಡಲು ತುಂಬಾನೇ ತೊಂದರೆಯಾಗಲು ಪ್ರಾರಂಭವಾಯಿತು. ಹೀಗಾಗಿ ಪರೀಕ್ಷಿಸಿಕೊಳ್ಳಲು ವೈದ್ಯರ ಬಳಿ ಬಂದಿದ್ದಾನೆ.

ವಿಷಯ ತಿಳಿದ ತಕ್ಷಣವೇ ವೈದ್ಯರು ಆಪರೇಷನ್ ಗೆ ಮುಂದಾಗಿದ್ದಾರೆ. ಎರಡು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆ ನಂತರ ವೈದ್ಯರು ಫೋನ್ ಅನ್ನು ಹೊರತೆಗೆದಿದ್ದಾರೆ. ಹಾನಿಕಾರಕ ರಾಸಾಯನಿಕಗಳನ್ನು ಹೊಂದಿರುವ ಬ್ಯಾಟರಿಯಿಂದಾಗಿ ಮೊಬೈಲ್ ತನ್ನ ಜೀವಕ್ಕೆ ದೊಡ್ಡ ಅಪಾಯವನ್ನು ತಂದಿದೆ ಎಂದು ರೋಗಿಗೆ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದರುವ ಅಸ್ವಾನ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಭಾಗದ ಡೀನ್  ಡಾ. ಮೊಹಮ್ಮದ್ ಅಲ್ ದಶೌರಿ, ಈ ರೀತಿಯ ಘಟನೆ ಇದೇ ಮೊದಲು. ಇದು ನಿಜವಾಗಿಯೂ ವಿಚಿತ್ರವಾಗಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com