ಅಫ್ಘಾನಿಸ್ತಾನದಿಂದ ಸೇನೆ ಸಂಪೂರ್ಣ ಹಿಂತೆಗೆತ: ತಮ್ಮ ನಡೆ ಸಮರ್ಥಿಸಿಕೊಂಡ ಅಮೆರಿಕ ಅಧ್ಯಕ್ಷ ಜೊ ಬೈಡನ್

ಅಮೆರಿಕದ ಸೇನಾಪಡೆಯನ್ನು ಸಂಪೂರ್ಣವಾಗಿ ಕಳೆದ ಮಧ್ಯರಾತ್ರಿ ಹಿಂಪಡೆದ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೊ ಬೈಡನ್ 20 ವರ್ಷಗಳ ಸುದೀರ್ಘ ಕಾಲದ ಯುದ್ಧ ಅದ್ವಿತೀಯ ಯಶಸ್ಸಿನದಾಗಿತ್ತು ಎಂದು ಹೇಳಿದ್ದಾರೆ.
ಜೋ ಬೈಡನ್
ಜೋ ಬೈಡನ್

ವಾಷಿಂಗ್ಟನ್: ಅಮೆರಿಕದ ಸೇನಾಪಡೆಯನ್ನು ಸಂಪೂರ್ಣವಾಗಿ ಕಳೆದ ಮಧ್ಯರಾತ್ರಿ ಹಿಂಪಡೆದ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೊ ಬೈಡನ್ 20 ವರ್ಷಗಳ ಸುದೀರ್ಘ ಕಾಲದ ಯುದ್ಧ ಅದ್ವಿತೀಯ ಯಶಸ್ಸಿನದಾಗಿತ್ತು ಎಂದು ಹೇಳಿದ್ದಾರೆ.

ಅಮೆರಿಕದ ಯುದ್ಧ ವಿಮಾನ ಸಿ-17 ಕಾರ್ಗೊ ವಿಮಾನದಲ್ಲಿ ಕಳೆದ ಮಧ್ಯರಾತ್ರಿ ಕೊನೆಯ ತಂಡದ ಸೈನಿಕರು ಅಫ್ಘಾನ್ ನಿಂದ ಪ್ರಯಾಣ ಬೆಳೆಸಿದರು. ಹೊರಡುವುದಕ್ಕೆ ಮೊದಲು ಯುದ್ಧ ಶಸ್ತ್ರಾಸ್ತ್ರ ಮತ್ತು ಸಾಮಗ್ರಿಗಳನ್ನು ನಿಷ್ಕ್ರಿಯಗೊಳಿಸಿ ಹೋಗಿದೆ. ಅಮೆರಿಕದ ಈ ಕ್ರಮವನ್ನು ಅಧ್ಯಕ್ಷ ಜೊ ಬೈಡನ್ ಸಮರ್ಥಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಮ್ಮ ಯುದ್ಧವನ್ನು ಮುಂದುವರಿಸುವುದಿಲ್ಲ ಎಂದು ನಿನ್ನೆ ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಫ್ಘಾನಿಸ್ತಾನವನ್ನು ತೊರೆಯುವ ಬಗ್ಗೆ ಬಿಡೆನ್ ದೇಶ-ವಿದೇಶಗಳ ನಾಗರಿಕರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಕಳೆದ ವಾರ ಆತ್ಮಹತ್ಯಾ ಬಾಂಬ್ ದಾಳಿ ಸೇರಿದಂತೆ ಹಿಂಸಾಚಾರದಿಂದ 13 ಅಮೆರಿಕನ್ ಸೇನೆಯ ಸೈನಿಕರು ಸೇರಿದಂತೆ ಅಫ್ಘನ್ ನ 169 ಪ್ರಜೆಗಳು ಮೃತಪಟ್ಟಿದ್ದರು.

ಅಫ್ಘಾನಿಸ್ತಾನದಿಂದ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆದ ಸರ್ಕಾರದ ಕ್ರಮಕ್ಕೆ ಜೊ ಬೈಡನ್ ಪ್ರತಿಪಕ್ಷ ರಿಪಬ್ಲಿಕನ್ ನಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಆದರೆ ಎರಡು ದಶಕಗಳ ಯುದ್ಧದಿಂದ ಅಂತಿಮ ನಿರ್ಗಮನ ಅನಿವಾರ್ಯವಾಗಿತ್ತು ಎಂದು ಬೈಡನ್ ಹೇಳಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮೇ 1 ಕ್ಕೆ ಸೇನೆಯನ್ನು ಹಿಂಪಡೆಯುವುದಾಗಿ ತಾಲಿಬಾನ್‌ನೊಂದಿಗೆ ಮಾತುಕತೆ ನಡೆಸಿದ್ದರು. ತಮ್ಮ ಸೈನಿಕರನ್ನು ಅಲ್ಲಿಯೇ ಇರಿಸಿಕೊಂಡಿದ್ದರೆ ಇನ್ನಷ್ಟು ಹಿಂಸಾಚಾರ, ಸಾವು-ನೋವು ಕಾಣಬೇಕಾಗಿತ್ತು ಎಂದು ಬೈಡನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಮೂರನೇ ದಶಕದ ಯುದ್ಧವನ್ನು ಕೇಳುತ್ತಿರುವವರಿಗೆ, ಪ್ರಮುಖ ರಾಷ್ಟ್ರೀಯ ಹಿತಾಸಕ್ತಿ ಏನು ಎಂದು ನಾನು ಕೇಳುತ್ತಿದ್ದೇನೆ ಎಂದು ಬೈಡನ್ ಹೇಳಿದ್ದಾರೆ.

ಸಾವಿರಾರು ಅಮೆರಿಕನ್ ಸೈನಿಕರನ್ನು ನಿಯೋಜಿಸುವುದನ್ನು ಮುಂದುವರಿಸಿ ಅಫ್ಘಾನಿಸ್ತಾನದಲ್ಲಿ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುವ ಮೂಲಕ ಅಮೆರಿಕದ ಸುರಕ್ಷತೆ ಮತ್ತು ಭದ್ರತೆಯನ್ನು ಹೆಚ್ಚಿಸಲಾಗುವುದು ಎಂದು ನನಗೆ ನಂಬಿಕೆಯಿಲ್ಲ ಎಂದಿದ್ದಾರೆ.

ಅಮೆರಿಕ ಕೊನೆಯ ಯುದ್ಧ ವಿಮಾನ ನಿನ್ನೆ ಮಧ್ಯರಾತ್ರಿಯ ಒಂದು ನಿಮಿಷದ ಮೊದಲು ಕಾಬೂಲ್‌ನಿಂದ ಹೊರಟಿತು, ಬೈಡನ್ ಅವರು ಕನಿಷ್ಠ ಒಂದು ದಿನವಾದರೂ ಸೈನಿಕರ ಸ್ಥಳಾಂತರವನ್ನು ಮುಂದುವರಿಸಲಿಲ್ಲ ಏಕೆ ಎಂಬ ಪ್ರಶ್ನೆ ಮೂಡಿದೆ. ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ ಅಮೆರಿಕ ಸೈನಿಕರನ್ನು ಸ್ಥಳಾಂತರಿಸಲು ನಿನ್ನೆ ಆಗಸ್ಟ್ 31ರ ಗಡುವನ್ನು ನೀಡಿತ್ತು.

ಅಮೆರಿಕ ಮಿಲಿಟರಿ ಕಮಾಂಡರ್‌ಗಳು ಸೈನಿಕ ಪಡೆಯನ್ನು ಅಫ್ಘಾನಿಸ್ತಾನದಲ್ಲಿ ವಿಸ್ತರಿಸುವ ಬದಲು ಅದನ್ನು ಕೊನೆಗೊಳಿಸಲು ಒಮ್ಮತದಿಂದ ಒಲವು ತೋರಿದರು ಎಂದು ಬೈಡನ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com