ಪಂಜಶೀರ್‌: ತಾಲಿಬಾನ್ ವಿರುದ್ಧ ಹೋರಾಟ ಮುಂದುವರೆಸಿದ ಪ್ರತಿರೋಧ ಪಡೆ; ಆಫ್ಘನ್ನರ ಹಿತಾಸಕ್ತಿ ಮುಖ್ಯ ಎಂದ ಅಮರುಲ್ಲಾ ಸಾಲೇಹ್

ಅಫ್ಗಾನಿಸ್ತಾನದ ಈಶಾನ್ಯ ಪ್ರಾಂತ್ಯದ ಪಂಜ್‌ಶಿರ್‌ನಲ್ಲಿನ ಪ್ರತಿರೋಧ ಪಡೆಗಳು ತಾಲಿಬಾನ್ ಆಡಳಿತದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಬುಧವಾರ ಹೇಳಿಕೆ ನೀಡಿವೆ. 
ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್
ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್

ಕಾಬೂಲ್: ಅಫ್ಗಾನಿಸ್ತಾನದ ಈಶಾನ್ಯ ಪ್ರಾಂತ್ಯದ ಪಂಜ್‌ಶಿರ್‌ನಲ್ಲಿನ ಪ್ರತಿರೋಧ ಪಡೆಗಳು ತಾಲಿಬಾನ್ ಆಡಳಿತದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಬುಧವಾರ ಹೇಳಿಕೆ ನೀಡಿವೆ. 

ಈ ಪಡೆಗಳ ಮುಖಂಡರೊಂದಿಗೆ ತಾಲಿಬಾನ್‌ನ ಮಾತುಕತೆಗಳು ಫಲಪ್ರದವಾಗಿಲ್ಲ. ಹಿಂದಿನ ದಿನ ಸ್ಪುಟ್ನಿಕ್‌ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ತಾಲಿಬಾನ್ ವಕ್ತಾರ ಮೊಹಮ್ಮದ್ ನಯೀಮ್, ಪಂಜಶೀರ್ ಮೇಲೆ ಬಲವಂತದ ಸ್ವಾಧೀನ ಇಲ್ಲ. ಪ್ರತಿರೋಧದ ನಾಯಕರೊಂದಿಗಿನ ಮಾತುಕತೆ ವಿಫಲವಾಗಿದೆ ಎಂದು ಘೋಷಿಸಿದರು. 

ಜೊತೆಗೆ, ಆ ಪ್ರಾಂತ್ಯಕ್ಕೆ ಪ್ರವೇಶಿಸಲು ತಾಲಿಬಾನ್‌ ಯೋಜಿಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ತಳ್ಳಿಹಾಕಿದರು. ಪಂಜಶೀಲ್‌ ಪಡೆಯ ನಾಯಕರಿಗೆ ತಾಲಿಬಾನ್ ಸರ್ಕಾರದಲ್ಲಿ ಒಂದು ಅಥವಾ ಎರಡು ಸ್ಥಾನಗಳನ್ನು ನೀಡುವ ಪ್ರಸ್ತಾವ ಮುಂದಿರಿಸಲಾಗಿತ್ತು. ಆದರೆ, ಪ್ರತಿರೋಧಿಗಳನ್ನು ಅದನ್ನು ತಿರಸ್ಕರಿಸಿದ್ದಾರೆ.

ಆಫ್ಘನ್ನರ ಹಿತಾಸಕ್ತಿ ಮುಖ್ಯ ಎಂದ ಅಮರುಲ್ಲಾ ಸಾಲೇಹ್
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಆಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಾಲೇಹ್ ಅವರು, 'ನಮ್ಮ ಪ್ರತಿರೋಧವು ಎಲ್ಲಾ ಆಫ್ಘನ್ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು. ಈ ಪ್ರತಿರೋಧವು ಪಂಜ್‌ಶಿರ್‌ನಲ್ಲಿ ನೆಲೆಗೊಂಡಿದೆ. ಇಂದು ಈ ಕಣಿವೆಯು ಎಲ್ಲಾ ದೇಶಗಳಿಗೆ ಆತಿಥ್ಯ ವಹಿಸುತ್ತದೆ ಮತ್ತು ದಬ್ಬಾಳಿಕೆಯಿಂದ ಪಾರಾಗುತ್ತಿರುವ ಅಫ್ಘಾನ್ ಜನರಿಗೆ ಆಶಾಕಿರಣವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ ಆರ್ಥಿಕತೆಯ ಕುಸಿತ ಮತ್ತು ಸೇವಾ ಯಂತ್ರಗಳ ಅನುಪಸ್ಥಿತಿಯು ಶೀಘ್ರದಲ್ಲೇ ಜನರನ್ನು ನಾಶಪಡಿಸುತ್ತದೆ. ನಿಮ್ಮ ಆಯುಧಗಳು ಮತ್ತು ಕಠಿಣ ವಿಧಾನವು ಜನರ ದಂಗೆ ಮತ್ತು ಕೋಪದ ವಿರುದ್ಧ ಪರಿಣಾಮಕಾರಿಯಾಗುವುದಿಲ್ಲ. ಕೇವಲ ಸಮಯದ ನಡುವೆ ಮಾತ್ರ ವ್ಯತ್ಯಾಸವಾಗುತ್ತದೆ. ಮತ್ತೆ ಪ್ರಜಾಪ್ರಭುತ್ವಕ್ಕೆ ಜಯ ಸಿಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com