ತಾಲಿಬಾನಿಗಳು ಕೊಲ್ಲುವ ಮುನ್ನ ತಲೆಗೆ ಗುಂಡಿಕ್ಕುವಂತೆ ಬಾಡಿ ಗಾರ್ಡ್ ಗೆ ಆದೇಶಿಸಿದ ಮಾಜಿ ಆಫ್ಘನ್ ಉಪಾಧ್ಯಕ್ಷ

ಈ ಹಿಂದೆ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದಾಗ ತಾವು ದೇಶದ ರಕ್ಷಣೆಗಾಗಿ ಇನ್ನೂ ಜೀವಂತ ಇರುವುದಾಗಿ ಹೇಳಿ ಸಲೇಹ್ ಸುದ್ದಿಯಾಗಿದ್ದರು.
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ 

ಕಾಬೂಲ್: ತಾಲಿಬಾನಿಗಳು ಕಾಬೂಲನ್ನು ಸುತ್ತುವರಿದಾಗವರೊಡನೆ ಹೋರಾಟ ನಡೆಸುವುದಕ್ಕೆ ಬದಲಾಗಿ ಅಧಿಕಾರಿಗಳು ಭೂಗತರಾದ ಬಗ್ಗೆ ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು ಬಹಿರಂಗ ಪಡಿಸಿದ್ದಾರೆ. 

ಪಂಜ್ ಶೀರ್ ಕಣಿವೆಯಲ್ಲಿ ತಾಲಿಬಾನಿಗಳ ವಿರುದ್ಧ ಹುಟ್ಟಿಕೊಂಡಿರುವ ಎನ್ ಆರ್ ಎಫ್(ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್) ಪ‍ಡೆಯ ನೇತೃತ್ವವನ್ನು ಸಲೇಹ್ ಅವರು ವಹಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನದ ನಾಯಕರು ತಾಲಿಬಾನಿಗಳ ವಿರುದ್ಧ ಹೋರಾಡದೆ ದೇಶವನ್ನು ಅವರ ಕೈಗೊಪ್ಪಿಸಿ ಪರಾರಿಯಾಗಿದ್ದರ ವಿರುದ್ಧ ಸಲೇಹ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ದೇಶ ತೊರೆದಾಗ ತಾವು ದೇಶದ ರಕ್ಷಣೆಗಾಗಿ ಇನ್ನೂ ಜೀವಂತ ಇರುವುದಾಗಿ ಹೇಳಿ ಸಲೇಹ್ ಸುದ್ದಿಯಾಗಿದ್ದರು.

ಇದೀಗ ತಾಲಿಬಾನಿಗಳಿಗೆ ತೀಕ್ಷ್ಣ ಎಚ್ಚರಿಕೆ ನೀಡಿರುವ ಅಮ್ರುಲ್ಲಾ ಸಲೇಹ್ ಅವರು, ಯಾವುದೇ ಕಾರಣಕ್ಕೂ ತಾವು ತಾಲಿಬಾನಿಗಳಿಗೆ ಶರಣಾಗುವ ಪರಿಸ್ಥಿತಿ ತಂದುಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಘೋಷಿಸಿದ್ದಾರೆ. 

ಒಂದುವೇಳೆ ತಾಲಿಬಾನಿಗಳು ತಮ್ಮನ್ನು ವಶಕ್ಕೆ ಪಡೆಯುವ ಸಂದರ್ಭ ಬಂದರೆ ತಮ್ಮ ತಲೆಗೆ ಎರಡು ಬಾರಿ ಗುಂಡಿಕ್ಕಿ ಕೊಲ್ಲುವಂತೆ ಈಗಾಗಲೇ ತಮ್ಮ ಬಾಡಿ ಗಾರ್ಡಿಗೆ ಆದೇಶ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com