ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಉಸ್ತುವಾರಿ: ಅಮ್ರುಲ್ಲಾ ಸಲೇಹ್

ಯುದ್ಧಗ್ರಸ್ತ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ತಾಲೀಬಾನ್ ಸರ್ಕಾರದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದೆ ಎಂದು ಅಫ್ಘಾನಿಸ್ತಾದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಹೇಳಿದ್ದಾರೆ.
ಆಫ್ಘಾನಿಸ್ತಾನ-ಪಾಕಿಸ್ತಾನ
ಆಫ್ಘಾನಿಸ್ತಾನ-ಪಾಕಿಸ್ತಾನ

ಪಂಜ್ ಶೀರ್: ಯುದ್ಧಗ್ರಸ್ತ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ತಾಲೀಬಾನ್ ಸರ್ಕಾರದ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿದೆ ಎಂದು ಅಫ್ಘಾನಿಸ್ತಾದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಹೇಳಿದ್ದಾರೆ.

ಪಾಕಿಸ್ತಾನದ ಗುಪ್ತಚರ ಇಲಾಖೆ-ಐಎಸ್ಐ ಅಫ್ಘಾನಿಸ್ತಾನವನ್ನು ವಸಾಹತು ಮಾಡಿಕೊಂಡಿದೆ ಎಂದು ಸಲೇಹ್ ಡೈಲಿ ಮೇಲ್ ನಲ್ಲಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. 

ಅಮ್ರುಲ್ಲಾ ಸಲೇಹ್ ತಾಲೀಬಾನ್ ವಿರುದ್ಧ ಪಂಜ್ ಶೀರ್ ನಲ್ಲಿ ಹೋರಾಟ ಕಟ್ಟುತ್ತಿದ್ದು, ತಾಲೀಬಾನ್ ನ ವಕ್ತಾರರು ಪ್ರತಿ ಗಂಟೆಗೊಮ್ಮೆ ಪಾಕಿಸ್ತಾನದ ರಾಯಭಾರಿ ಕಚೇರಿಯಿಂದ ನಿರ್ದೇಶನಗಳನ್ನು ಪಡೆಯುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ ವಸಾಹತು ಶಕ್ತಿಯಾಗಿದೆ. ಆದರೆ ಅದು ದೀರ್ಘಾವಧಿ ಬಾಳುವುದಿಲ್ಲ. ಪ್ರಾದೇಶಿಕವಾಗಿ ಪಾಕಿಸ್ತಾನಿಯರು ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಬಹುದು ಆದರೆ ಜನತೆ ಅಥವಾ ಭದ್ರತೆಯ ಮೇಲೆ ನಿಯಂತ್ರಣ ಸಾಧ್ಯತೆ ಇಲ್ಲ ಎಂದು ಸಲೇಹ್ ಹೇಳಿದ್ದಾರೆ.

ತಾಲೀಬಾನ್ ಜನತೆಯ ಹೃದಯ ಗೆದ್ದಿಲ್ಲ. ದಣಿದ ಅಮೆರಿಕ ಅಧ್ಯಕ್ಷರ ದೋಷಯುಕ್ತ ನೀತಿಯನ್ನು ಬಳಸಿಕೊಂಡಿದೆ ಎಂದು ಅಮ್ರುಲ್ಲಾ ಸಲೇಹ್ ತಿಳಿಸಿದ್ದಾರೆ.

ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಲು ಪಾಕಿಸ್ತಾನದ ಐಎಸ್ಐ ಸಹಕಾರ ನೀಡಿದೆ ಎಂದೂ ಅಮ್ರುಲ್ಲಾ ಸಲೇಹ್ ಹೇಳಿದ್ದು, ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಯಾದ ಸರ್ಕಾರವನ್ನು ತೆಗೆಯುವುದರಲ್ಲೂ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com