ಮುಲ್ಲಾ ಮೊಹಮ್ಮದ್ ತಾಲಿಬಾನ್‌ ಸರ್ಕಾರದ ಮುಖ್ಯಸ್ಥ, ಬರದಾರ್ ಉಪ ಮುಖ್ಯಸ್ಥ

ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್  ಅಖುಂದ್‌ ಅವರ ಹೆಸರು ಅಂತಿಮವಾಗಿದೆ...
ತಾಲಿಬಾನ್ ನಾಯಕರು
ತಾಲಿಬಾನ್ ನಾಯಕರು

ಪೇಶಾವರ: ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್‌ ಅವರ ಹೆಸರು ಅಂತಿಮವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಲಿಬಾನ್‌ನ ಅತ್ಯುನ್ನತ ನೀತಿ ನಿರ್ಧಾರ ಸಮಿತಿಯಾಗಿರುವ "ರೆಹಾಬ್ರಿ ಶುರಾ" ಈ ಸಂಬಂಧ ಅಂತಿಮ ನಿರ್ಧಾರಕ್ಕೆ ಬಂದಿದೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ. 

ಮುಲ್ಲಾ ಹಸನ್ ಪ್ರಸ್ತುತ 'ರೆಹಾಬ್ರಿ ಶುರಾ' ಸಮಿತಿಯ  ಮುಖ್ಯಸ್ಥರಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರು ಪ್ರಸ್ತುತ ಕಂದಹಾರ್‌ನಲ್ಲಿದ್ದುಕೊಂಡು ವ್ಯವಹರಿಸುತ್ತಿದ್ದಾರೆ. 

ಮುಲ್ಲಾ ಹಸನ್‌ ಸುಮಾರು 20 ವರ್ಷಗಳಿಂದ  ಈ ಸ್ಥಾನದಲ್ಲಿದ್ದಾರೆ. 1996 ರಲ್ಲಿ ರಚನೆಯಾದ ತಾಲಿಬಾನ್ ಸರ್ಕಾರದಲ್ಲಿ ಅವರು ಉಪ ಪ್ರಧಾನಿ ಹಾಗೂ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 

ಇನ್ನೂ ಉಪ ಮುಖ್ಯಸ್ಥರಾಗಿ ಮುಲ್ಲಾ ಅಬ್ದುಲ್ ಘನಿ ಬರದಾರ್, ಮುಲ್ಲಾ ಅಬ್ದುಲ್ ಸಲಾಂ ಅವರ ಹೆಸರು ಅಂತಿಮಗೊಂಡಿವೆ. ಆದರೆ, ಅವರ ಹೆಸರುಗಳನ್ನು ಮುಂದಿನ ವಾರ ಅಧಿಕೃತವಾಗಿ ಪ್ರಕಟಿಸಲಿದ್ದಾರೆ. 

ಮತ್ತೊಂದೆಡೆ,  ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಮಗ ಮುಲ್ಲಾ ಯಾಕೂಬ್ ಗೆ ರಕ್ಷಣಾ ಸಚಿವ, ಸಿರಾಜುದ್ದೀನ್ ಹಕ್ಕಾನಿ ಗೃಹ ಸಚಿವ, ಅಮೀರ್ ಖಾನ್ ಮುತ್ತಕಿನಿ ಮುಂದಿನ ವಿದೇಶಾಂಗ ಸಚಿವರಾಗುವ ಸಾಧ್ಯತೆಗಳಿವೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com