The New Indian Express
ವಾಷಿಂಗ್ಟನ್: ತಾಲಿಬಾನ್ ವಶದಲ್ಲಿರುವ ಅಫ್ಘಾನಿಸ್ತಾನದೊಳಗೆ ಅಲ್ ಖೈದಾ ಉಗ್ರ ಸಂಘಟನೆ ಮತ್ತೆ ಮರುಹುಟ್ಟು ಪಡೆದುಕೊಳ್ಳಲಿದೆ ಎಂದು ಸಿಐಎ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಈ ಹೇಳಿಕೆ ನೀಡಿರುವ ಮೈಕೆಲ್ ಮೂರ್ ಎರಡು ಬಾರಿ ಅಮೆರಿಕ ಗುಪ್ತಚರ ಇಲಾಖೆಯಲ್ಲಿ ಎರಡು ಬಾರಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ: ತಾಲಿಬಾನ್ ಸರ್ಕಾರದೊಂದಿಗೆ ಭಾರತ ವ್ಯವಹರಿಸಬಾರದು: ಯಶವಂತ್ ಸಿನ್ಹಾ
ಅಲ್ಲದೆ ಅವರು ಅಮೆರಿಕದ ಅವಳಿ ಕಟ್ಟಡಗಲ ಮೇಲೆ 2001ರಲ್ಲಿ ಅಲ್ ಖೈದಾ ದಾಳಿ ನಡೆಸಿದ ಸಂದರ್ಭ ಆಗಿನ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಭಯೋತ್ಪಾದನೆ ವಿಷಯಗಳ ಕುರಿತು ಸಲಹೆಗಾರರಾಗಿದ್ದರು. ಅಚ್ಚರಿಯೆಂದರೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಆಡಳಿತದಲ್ಲಿ ಒಸಾಮ ಬಿನ್ ಲ್ಯಾಡೆನ್ ಹತ್ಯೆಯಾದಾಗ ಮೈಕೆಲ್ ಮೂರ್ ಅವರೇ ಅಧ್ಯಕ್ಷರಿಗೆ ಸಲಹಾಗಾರರಾಗಿದ್ದರು.
ಇದನ್ನೂ ಓದಿ: ಮುಲ್ಲಾ ಮೊಹಮ್ಮದ್ ಅಖುಂದ್ ತಾಲಿಬಾನ್ ಸರ್ಕಾರದ ಮುಖ್ಯಸ್ಥ, ಹೊಸ ಅಫ್ಘಾನ್ ಸಚಿವರ ಘೋಷಣೆ
ಉಗ್ರಗಾಮಿಗಳಿಗೆ ಅಫ್ಘಾನಿಸ್ತಾನ ಸ್ವರ್ಗವಾಗಲಿದೆ, ತಾಲಿಬಾನ್ ಉಗ್ರಗಾಮಿಗಳನ್ನು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.