ಚೀನಾದಿಂದ ವಿಯೆಟ್ನಾಮ್ ಗೆ 3 ದಶಲಕ್ಷ ಕೋವಿಡ್-19 ಲಸಿಕೆ

ಚೀನಾ ತನ್ನ ಕೊರೋನಾ ಲಸಿಕೆಗಳ ಪೈಕಿ 3 ದಶಲಕ್ಷದಷ್ಟು ಲಸಿಕೆಯನ್ನು ವಿಯೆಟ್ನಾಮ್ ಗೆ ನೀಡಲು ನಿರ್ಧರಿಸಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಶನಿವಾರ ಹೇಳಿದ್ದಾರೆ. 
ಚೀನಾ ವಿದೇಶಾಂಗ ಸಚಿವ
ಚೀನಾ ವಿದೇಶಾಂಗ ಸಚಿವ

ಹನೋಯಿ: ಚೀನಾ ತನ್ನ ಕೊರೋನಾ ಲಸಿಕೆಗಳ ಪೈಕಿ 3 ದಶಲಕ್ಷದಷ್ಟು ಲಸಿಕೆಯನ್ನು ವಿಯೆಟ್ನಾಮ್ ಗೆ ನೀಡಲು ನಿರ್ಧರಿಸಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ವಾಂಗ್ ಯಿ ಶನಿವಾರ ಹೇಳಿದ್ದಾರೆ. 

ಹನೋಯಿಗೆ ಭೇಟಿ ನೀಡುವುದಕ್ಕೂ ಮುನ್ನ ಚೀನಾ ವಿದೇಶಾಂಗ ಸಚಿವರು ಈ ಘೋಷಣೆ ಮಾಡಿದ್ದಾರೆ.

ಕೋವಿಡ್-19 ಸೋಂಕು ಹರಡುವಿಕೆ ಹೆಚ್ಚಾಗಿರುವುದರಿಂದ ಅದನ್ನು ತಡೆಗಟ್ಟಲು ವಿಯೆಟ್ನಾಮ್ ನಲ್ಲಿ ಲಾಕ್ ಡೌನ್ ವಿಧಿಸಲಾಗಿದೆ.

ವಿಯೆಟ್ನಾಮ್ ನಲ್ಲಿ ಈ ವಾರದಿಂದ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದು 23 ಮಿಲಿಯನ್ ವಿದ್ಯಾರ್ಥಿಗಳು ಹೊಸ ಪಠ್ಯಗಳನ್ನು ಬಹುತೇಕ ಆನ್ ಲೈನ್ ತರಗತಿಗಳಲ್ಲಿ ಕಲಿಯುತ್ತಿದ್ದಾರೆ.

ಚೀನಾ ಬಗ್ಗೆ ಮಾತನಾಡಿದ್ದ ವಿಯೆಟ್ನಾಮ್ ಪ್ರಧಾನಿ ಉಭಯ ರಾಷ್ಟ್ರಗಳು ಭಿನ್ನಾಭಿಪ್ರಾಯಗಳನ್ನು  ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕೆಂದು ಹೇಳಿದ್ದರು.

ಚೀನಾ ವಿರುದ್ಧ ವಿಯೆಟ್ನಾಮ್ ಹಲವು ಬಾರಿ ಗಂಭೀರ ಆರೋಪಗಳನ್ನು ಮಾಡಿದ್ದು ಇತ್ತೀಚೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ಅನಿಲ ಪರಿಶೋಧನಾ ಚಟುವಟಿಕೆಗೆ ಚೀನಾ ಅಡ್ಡಿಯುಂಟುಮಾಡುತ್ತಿದೆ, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಹಲವು ದ್ವೀಪಗಳನ್ನು ನಿರ್ಮಿಸಿದ್ದು, ಸೇನಾ ನೆಲೆಗಳನ್ನು ಸ್ಥಾಪಿಸಿದೆ ಎಂಬುದು ವಿಯೆಟ್ನಾಮ್ ನ ಪ್ರಮುಖ ಆರೋಪವಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com