ಮಹಿಳಾ ಹೋರಾಟಗಾರ್ತಿ ಮೇಲೆ ಹಲ್ಲೆ ನಡೆಸಿ, ಕುಟುಂಬ ಸದಸ್ಯರನ್ನು ಅಪಹರಿಸಿದ ತಾಲಿಬಾನ್ 

ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿ ದಯನೀಯವಾಗಿದೆ.  ಶಸ್ತ್ರ ಸಜ್ಜಿತ ತಾಲಿಬಾನ್ ಗುಂಪು ಶನಿವಾರ ಮಹಿಳಾ ಸಾಮಾಜಿಕ ಹೋರಾಟಗಾರ್ತಿ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕುಟುಂಬದ ಐವರು ಸದಸ್ಯರನ್ನು ಅಪಹರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿ ದಯನೀಯವಾಗಿದೆ.  ಶಸ್ತ್ರ ಸಜ್ಜಿತ ತಾಲಿಬಾನ್ ಗುಂಪು ಶನಿವಾರ ಮಹಿಳಾ ಸಾಮಾಜಿಕ ಹೋರಾಟಗಾರ್ತಿ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಕುಟುಂಬದ ಐವರು ಸದಸ್ಯರನ್ನು ಅಪಹರಿಸಿದೆ.

ಅಫ್ಘಾನಿಸ್ತಾನ ಜಿಲ್ಲೆಯ 15ನೇ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹತ್ತಾರು ಶಸ್ತ್ರ ಸಜ್ಜಿತ ತಾಲಿಬಾನ್ ಸಂಘಟನೆ ಸದಸ್ಯರು, ಅಕ್ರಮವಾಗಿ ಫಾಹಿಮಾ ರಹಮತಿಯ ಮನಗೆ ನುಗ್ಗಿದ್ದು, ಆಕೆ ಮೇಲೆ ಹಲ್ಲೆ ನಡೆಸಿರುವುದಾಗಿ ಪಜ್ವಾಕ್ ಅಫ್ಘಾನ್ ನ್ಯೂಸ್ ವರದಿ ಮಾಡಿದೆ.

ರಹಮತಿ ಹೋಫ್ ಫೌಂಡೇಶನ್ ಮುಖ್ಯಸ್ಥರಾಗಿದ್ದು, ತನ್ನಿಬ್ಬರು ಸಹೋದರರು, ಅಳಿಯ ಹಾಗೂ ಒಬ್ಬರು ನೆರಮನೆಯವರು ಸೇರಿದಂತೆ ಐವರು ಪುರುಷರನ್ನು ತಾಲಿಬಾನ್ ಅಪಹರಣ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಈ ಮಧ್ಯೆ ರಹಮತಿಯ ಮನೆಯಲ್ಲಿ ಮಾಜಿ ರಾಷ್ಟ್ರೀಯ ನಿರ್ದೇಶನಾಲಯದ ಭದ್ರತಾ ಕಾರ್ಯಕರ್ತರು ಇದ್ದ ಬಗ್ಗೆ ತಾಲಿಬಾನ್ ಗೆ ಮಾಹಿತಿ ಬಂದಿತ್ತು ಎಂದು ಕಂದಹಾರ್ ಗುಪ್ತಚರ ಮುಖ್ಯಸ್ಥ ರಹಮತುಲ್ಲಾ ನಾರೈವಾಲ್ ಆರೋಪಿಸಿರುವುದಾಗಿ ಪಜ್ವಾಕ್ ಅಫ್ಘಾನ್ ನ್ಯೂಸ್ ವರದಿ ಮಾಡಿದೆ.

ಆದರೆ, ಇಂತಹ ಆರೋಪಗಳನ್ನು ಮಹಿಳಾ ಹೋರಾಟಗಾರ್ತಿ ಅಲ್ಲಗಳೆದಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಹಿಡಿತವನ್ನು ಸಾಧಿಸಿದ ಮೇಲೆ ದೇಶಾದ್ಯಂತ ಮಹಿಳೆಯರ ಮೇಲಿನ ಕಿರುಕುಳ, ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ತಾಲಿಬಾನ್ ನಿಂದ ಬೆದರಿಕೆಯ ಹೊರತಾಗಿಯೂ ಅನೇಕ ಮಹಿಳೆಯರು ದೇಶದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದು, ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com