ಅಫ್ಘಾನಿಸ್ತಾನದ ಆಸ್ತಿಗಳನ್ನು ಮುಕ್ತಗೊಳಿಸಲು ಅಮೆರಿಕಾಗೆ ತಾಲೀಬಾನ್ ಒತ್ತಾಯ: ಚೀನಾ ಬೆಂಬಲ

ಅಫ್ಘಾನಿಸ್ತಾನದ ಆಸ್ತಿಗಳನ್ನು ಮುಕ್ತಗೊಳಿಸಲು ಅಮೆರಿಕಾಗೆ ತಾಲೀಬಾನ್ ಮಾಡಿರುವ ಒತ್ತಾಯವನ್ನು ಚೀನಾ ಬೆಂಬಲಿಸಿದೆ.
ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ
ಚೀನಾದ ವಿದೇಶಾಂಗ ವ್ಯವಹಾರಗಳ ವಕ್ತಾರ

ಬೀಜಿಂಗ್: ಅಫ್ಘಾನಿಸ್ತಾನದ ಆಸ್ತಿಗಳನ್ನು ಮುಕ್ತಗೊಳಿಸಲು ಅಮೆರಿಕಾಗೆ ತಾಲೀಬಾನ್ ಮಾಡಿರುವ ಒತ್ತಾಯವನ್ನು ಚೀನಾ ಬೆಂಬಲಿಸಿದೆ.

ಅಮೆರಿಕ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ ಗೆ ಸೇರಿದ 9.5 ಬಿಲಿಯನ್ ಮೊತ್ತದ ಆಸ್ತಿಗಳನ್ನು ಮುಕ್ತ ಮಾಡದೇ ನಿರ್ಬಂಧ ವಿಧಿಸಿದ್ದು, ಕಾಬೂಲ್ ಗೆ ನಗದು ಸಾಗಣೆಯನ್ನು ತಡೆಹಿಡಿದಿದ್ದು, ಅಫ್ಘನ್ ನ ಸರ್ಕಾರಕ್ಕೆ ಹಣ ಸಿಗದಂತೆ ಮಾಡಿದೆ.

ಈಗ ಅಫ್ಘಾನಿಸ್ತಾನ ತಾಲೀಬಾನ್ ವಶವಾಗುತ್ತಿದ್ದಂತೆಯೇ ತಾಲೀಬಾನ್ ಸಂಘಟನೆ ತನ್ನ ದೇಶದ ಆಸ್ತಿಗಳನ್ನು ಮುಕ್ತ ಮಾಡುವುದಕ್ಕೆ ಅಮೆರಿಕಾಗೆ ಒತ್ತಾಯ ಮಾಡುತ್ತಿದೆ.

ಚೀನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆಸ್ತಿಗಳ ಮೇಲೆ ನಿರ್ಬಂಧ ಹೇರುವುದಕ್ಕೆ ಅಮೆರಿಕಾಗೆ ಯಾವುದೇ ಕಾನೂನಾತ್ಮಕ ಕಾರಣಗಳಿಲ್ಲ ಎಂದು ಹೇಳಿದೆ.

ಕಾಬೂಲ್ ನಲ್ಲಿರುವ ಚೀನಾ ರಾಯಭಾರಿ ಕಚೇರಿ ಅಧಿಕಾರಿ, ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಅವರನ್ನು ಭೇಟಿ ಮಾಡಿ ಹಂಗಾಮಿ ಸರ್ಕಾರವನ್ನು ಅಭಿನಂದಿಸಿದ ಬಳಿಕ ಈ ಹೇಳಿಕೆ ಬಂದಿರುವುದು ಮಹತ್ವ ಪಡೆದುಕೊಂಡಿದೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜನ್ ಮಾತನಾಡಿದ್ದು ಅಮೆರಿಕಾಗೆ ಅಫ್ಘಾನಿಸ್ತಾನದ ಆಸ್ತಿಗಳನ್ನು ಹಿಡಿದಿಟ್ಟುಕೊಳ್ಳುವ ಯಾವುದೇ ಕಾನೂನಾತ್ಮಕ ಕಾರಣಗಳೂ ಇಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಅಫ್ಘಾನಿಸ್ತಾನದ ಆಸ್ತಿಗಳನ್ನು ಮುಕ್ತಗೊಳಿಸಬೇಕು, ಅದು ಅಫ್ಘಾನಿಸ್ತಾನದ ಜನಕ್ಕೆ ಸೇರಿದ ಆಸ್ತಿಯಾಗಿದೆ. ಅಮೆರಿಕ ಒತ್ತಾಯಕ್ಕೆ ಮಣಿಯದೇ ಇದ್ದಲ್ಲಿ ನಿಧಿಗಳನ್ನು ಬಿಡುಗಡೆ ಮಾಡುವುದಕ್ಕೆ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ತಾಲೀಬಾನ್ ನ ವಕ್ತಾರರು ಎಚ್ಚರಿಸಿದ್ದರು. ಚೀನಾದ ವಿದೇಶಾಂಗ ಇಲಾಖೆ ವಕ್ತಾರರು ಪ್ರತಿಕ್ರಿಯೆ ನೀಡಿದ್ದು ತಾಲೀಬಾನ್ ವಕ್ತಾರರು ಹೇಳಿರುವುದು ಸರಿ ಇದೆ, ಅದು ಅಫ್ಘಾನಿಸ್ತಾನದ ಜನತೆಗೆ ಸೇರಿದ ಆಸ್ತಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com