ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ

ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಪ್ಯಾರಿಸ್ ನ ನ್ಯಾಯಾಲಯವೊಂದು ಗುರುವಾರ ಆದೇಶ ಹೊರಡಿಸಿದೆ.
ನಿಕೋಲಸ್ ಸರ್ಕೋಜಿ
ನಿಕೋಲಸ್ ಸರ್ಕೋಜಿ

ಪ್ಯಾರಿಸ್:  ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಪ್ಯಾರಿಸ್ ನ ನ್ಯಾಯಾಲಯವೊಂದು ಗುರುವಾರ ಆದೇಶ ಹೊರಡಿಸಿದೆ. 2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವಲ್ಲಿ ವಿಫಲರಾದ ಸರ್ಕೋಜಿ, ಅಕ್ರವಾಗಿ ಹಣ ಹಂಚಿಕೆ ವಿಚಾರದಲ್ಲಿ ತಪಿತಸ್ಥ ಎಂದು ಕಂಡುಬಂದ ನಂತರ ಪ್ಯಾರಿಸ್ ನ್ಯಾಯಾಲಯ ಈ ತೀರ್ಪು ನೀಡಿದೆ.

66 ವರ್ಷದ ಸರ್ಕೋಜಿ ಜೈಲಿಗೆ ಹೋಗುವ ಸಾಧ್ಯತೆಯಿಲ್ಲ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ. ಎಲೆಕ್ಟ್ರಾನಿಕ್ ಟ್ಯಾಗ್ ನೊಂದಿಗೆ ಮನೆಯಲ್ಲಿಯೇ ಶಿಕ್ಷೆಯನ್ನು ಅವರು ಅನುಭವಿಸಬಹುದು ಎಂದು ಜಡ್ಜ್ ಹೇಳಿದ್ದಾರೆ. 

ಸರ್ಕೋಜಿಗೆ ಈ ವರ್ಷ ನ್ಯಾಯಾಲಯ ನೀಡಿದ ಎರಡನೇ ಶಿಕ್ಷೆ ಇದಾಗಿದೆ. 2007 ರಿಂದ 2012ರವರೆಗೂ ಫ್ರಾನ್ಸ್ ಅಧ್ಯಕ್ಷರಾಗಿದ್ದ ಸರ್ಕೋಜಿ, ಕಾನೂನು ತೊಂದೆಯಿಂದ ಮತ್ತೆ ಗೆಲ್ಲುವಲ್ಲಿ ವಿಫಲರಾದರೂ ಕನ್ಸರ್ವೇಟಿವ್ ಮೇಲೆ ಪ್ರಭಾವ ಬೀರಿದ ಆರೋಪಕ್ಕೊಳಗಾಗಿದ್ದಾರೆ. 

 ನ್ಯಾಯಾಧೀಶರಿಗೆ ಲಂಚ ನೀಡಿಕೆ, ಕಾನೂನಿನ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಪ್ರಕರಣದಲ್ಲಿ  ನಿಕೋಲಸ್ ಸರ್ಕೋಜಿ  ದೋಷಿ ಎಂದು ನ್ಯಾಯಾಲಯ ಕಳೆದ ಮಾರ್ಚ್ ನಲ್ಲಿ ತೀರ್ಪು ನೀಡಿ,  ಅವರಿಗೆ ಮೂರು   ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಮೂರು ವರ್ಷ ಶಿಕ್ಷೆ ವಿಧಿಸಿದ್ದರೂ ಅದರಲ್ಲಿ ಎರಡು ವರ್ಷದ ಶಿಕ್ಷೆ ಅಮಾನತು ಮಾಡಲಾಗಿದೆ. ಹೀಗಾಗಿ ಸರ್ಕೋಜಿ ಒಂದು ವರ್ಷದ ಅವಧಿಗೆ  ಮಾತ್ರ ಜೈಲಿಗೆ ಹೋಗಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com