ಸಿಂಗಾಪುರದಿಂದ ಥೈಲ್ಯಾಂಡ್‌ಗೆ ತೆರಳಿದ ಗೋಟಬಯ ರಾಜಪಕ್ಸ

ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ತಮ್ಮ ಅಲ್ಪಾವಧಿಯ ಭೇಟಿ ಪಾಸ್ ಪೋರ್ಟ್ ಅವಧಿ ಗುರುವಾರ ಮುಕ್ತಾಯಗೊಂಡ ನಂತರ ಸಿಂಗಾಪುರದಿಂದ ಥಾಯ್ಲೆಂಡ್‌ಗೆ ತೆರಳಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಗೋಟಬಯ ರಾಜಪಕ್ಸ
ಗೋಟಬಯ ರಾಜಪಕ್ಸ

ಸಿಂಗಾಪುರ: ಶ್ರೀಲಂಕಾದ ಪದಚ್ಯುತ ಅಧ್ಯಕ್ಷ ಗೋಟಬಯ ರಾಜಪಕ್ಸ ಅವರು ತಮ್ಮ ಅಲ್ಪಾವಧಿಯ ಭೇಟಿ ಪಾಸ್ ಪೋರ್ಟ್ ಅವಧಿ ಗುರುವಾರ ಮುಕ್ತಾಯಗೊಂಡ ನಂತರ ಸಿಂಗಾಪುರದಿಂದ ಥಾಯ್ಲೆಂಡ್‌ಗೆ ತೆರಳಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ರಾಜಪಕ್ಸ ಭೇಟಿಗೆ ಅವಕಾಶ ನೀಡುವಂತೆ ಥೈಲ್ಯಾಂಡ್ ಗೆ ಪ್ರಸ್ತುತ ಶ್ರೀಲಂಕಾ ಸರ್ಕಾರದ ಮನವಿಯನ್ನು ಪುರಸ್ಕರಿಸಿದ ನಂತರ ಲಂಕಾ ಮಾಜಿ ಅಧ್ಯಕ್ಷರು ಸಿಂಗಾಪುರದಿಂದ ಬ್ಯಾಂಕಾಕ್‌ ವಿಮಾನ ಹತ್ತಿದರು ಎಂದು ವರದಿಯಾಗಿದೆ.

ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿಂಗಾಪುರದ ವಲಸೆ ಮತ್ತು ಚೆಕ್‌ಪಾಯಿಂಟ್‌ಗಳ ಪ್ರಾಧಿಕಾರ, ರಾಜಪಕ್ಸ ಅವರು ಗುರುವಾರ ಸಿಂಗಾಪುರವನ್ನು ತೊರೆದಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆಳುತ್ತಿದ್ದಂತೆ ಮಾಲ್ಡೀವ್ಸ್ ಗೆ ಪಲಾಯನವಾಗಿದ್ದ ಗೋಟಬಯ ರಾಜಪಕ್ಸ ಅಲ್ಲಿಂದ ಸಿಂಗಾಪುರಕ್ಕೆ ತೆರಳಿದ್ದರು. ಈಗ ಸಿಂಗಾಪುರ್ ವೀಸಾ ಮುಗಿಯುತ್ತಿದ್ದಂತೆ ಥಾಯ್ಲೆಂಡ್‌ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com