
ಲಾಸ್ ಏಂಜಲೀಸ್: ಪಾಪ್ ಜಗತ್ತಿನ ಸ್ಟಾರ್ ಐಕಾನ್ ಮೈಕೆಲ್ ಜಾಕ್ಸನ್ ಡ್ರಗ್ಸ್ ಖರೀದಿಸಲು ಬರೊಬ್ಬರಿ 19 ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದರು ಎಂದು ಹೊಸ ಡಾಕ್ಯುಮೆಂಟರಿಯಿಂದ ತಿಳಿದುಬಂದಿದೆ.
2009 ರಲ್ಲಿ ಮೈಕಲ್ ಜಾಕ್ಸನ್ (50 ವರ್ಷ) ಲಾಸ್ ಏಂಜಲೀಸ್ ಮನೆಯಲ್ಲಿ ಹೃದಯಸ್ತಂಭನಕ್ಕೊಳಗಾಗಿ ಮೃತಪಟ್ಟಿದ್ದರು. ಇದಕ್ಕೆ ಕಾರಣ ಜಾಕ್ಸನ್ ಅವರ ವೈದ್ಯರು ಆಗಾಗ್ಗೆ ನೀಡುತ್ತಿದ್ದ ಅರಿವಳಿಕೆ ಪ್ರೊಪೋಫೋಲ್ ಎಂಬ ಔಷಧ ಎಂದು ತಿಳಿದುಬಂದಿತ್ತು. ಜಾಕ್ಸನ್ ವೈದ್ಯರ ವಿರುದ್ಧ ನರಹತ್ಯೆಯ ಆರೋಪ ಹೊರಿಸಿ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು.
ಡ್ರಗ್ಸ್ ಖರೀದಿಗಾಗಿ 19 ನಕಲಿ ಐಡಿಗಳನ್ನು ಜಾಕ್ಸನ್ ಹೊಂದಿದ್ದರು ಎಂಬ ಮಾಹಿತಿ ಜಾಕ್ಸನ್ ಕುರಿತ ಟಿಎಂಝೆಡ್ ಇನ್ವೆಸ್ಟಿಗೇಟ್ಸ್ ಎಂಬ ಹೊಸ ಡಾಕ್ಯುಮೆಂಟರಿಯ ಮೂಲಕ ತಿಳಿದುಬಂದಿದೆ.
ಟಿಎಂಝೆಡ್ ಇನ್ವೆಸ್ಟಿಗೇಟ್ಸ್ ಡಾಕ್ಯುಮೆಂಟರಿ ಮುಂದಿನ ತಿಂಗಳು ಫಾಕ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಜಾಕ್ಸನ್ ಅವರಿಗಿದ್ದ ಗೀಳನ್ನು ವೈದ್ಯಕೀಯ ಸಮೂಹ ಸುಗಮಗೊಳಿಸಿತು, ಎಂದು ತಿಳಿದುಬಂದಿದ್ದು, ಜಾಕ್ಸನ್ ಪ್ರವಾಸಕ್ಕೆ ತೆರಳುತ್ತಿದ್ದಾಗ ಅವರಿಗೆ ನಿದ್ದೆ ಬರುವ ಒಂದೇ ದಾರಿ ಎಂದರೆ ಅದು ಪ್ರೊಪೋಫೋಲ್ ಮಾತ್ರ ಆಗಿತ್ತು ಎಂದು ಹೇಳಲಾಗುತ್ತಿದೆ.
Advertisement